ಡಿಸ್ಪುರ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರು (Mamta Banerjee) ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕಾರಣ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಇದೀಗ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ (Himanta Biswa Sarma) ಅವರು ಭಾರತ ಸೋಲಿಗೆ ಇಂದಿರಾ ಗಾಂಧಿಯೇ ಕಾರಣ ಎಂದು ತಿಳಿಸಿದ್ದಾರೆ.
ನವೆಂಬರ್ 19ರಂದು ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ (IND Vs AUS) ನಡುವೆ ಫೈನಲ್ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ಸೋಲು ಕಂಡಿತು. ಈ ಸೋಲಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರೇ ಕಾರಣ ಎಂದು ಶರ್ಮಾ ಹೇಳಿದ್ದಾರೆ. ಯಾಕೆಂದರೆ ಅಂದು ಇಂದಿರಾ ಗಾಂಧಿಯವರ (Indira Gandhi) ಜನ್ಮ ದಿನವಾಗಿದೆ. ಹೀಗಾಗಿ ಅಂದೇ ಪಂದ್ಯ ನಡೆದಿದ್ದರಿಂದ ಭಾರತ ಸೋಲನುಭವಿಸಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ಪಾಪಿಗಳು ಹಾಜರಾದ ಫೈನಲ್ ಹೊರತುಪಡಿಸಿ ಎಲ್ಲಾ ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿದೆ: ಮಮತಾ ಕಿಡಿ
ಪ್ರತಿ ಪಂದ್ಯವನ್ನೂ ಗೆಲ್ಲುತ್ತಿದ್ದೆವು. ಆದರೆ ಫೈನಲ್‍ನಲ್ಲಿ ಮಾತ್ರ ಸೋತೆವು. ಆ ದಿನ ಏನಾಗಿತ್ತು? ನಾವೇಕೆ ಸೋತಿದ್ದೇವೆ? ಎಂದು ಪಂದ್ಯ ಮುಗಿದ ಮೇಲೆ ಬಂದು ನೋಡಿದೆ. ಈ ವೇಳೆ ಅಂದೇ ಇಂದಿರಾ ಗಾಂಧಿಯವರ ಜನ್ಮ ದಿನ ಇರುವುದು ಗೊತ್ತಾಯಿತು. ಆಗ ಸೋಲಿಗೆ ಕಾರಣ ಬಯಲಾಯಿತು ಎಂದು ತಮ್ಮದೇ ಶೈಲಿಯಲ್ಲಿ ನುಡಿದರು. ಇದನ್ನೂ ಓದಿ: ಆಸ್ಟ್ರೇಲಿಯಾಗೆ ಬಂದಿಳಿದ ಚಾಂಪಿಯನ್ ಪ್ಯಾಟ್ ಕಮ್ಮಿನ್ಸ್- ಸ್ವಾಗತಿಸಲು ಜನವೇ ಇಲ್ಲ
ಇದೇ ವೇಳೆ ಮೋದಿಯವರನ್ನು ವಿರೋಧಿಸುವ ಪಕ್ಷಗಳೊಂದಿಗೆ ವಿರೋಧ ಪಕ್ಷಗಳು ಕೈಜೋಡಿಸಿವೆ ಎಂದು ಆರೋಪಿಸಿದ ಶರ್ಮಾ, ಮುಂದಿನ ದಿನಗಳಲ್ಲಿ ನೆಹರೂ-ಗಾಂಧಿ ಕುಟುಂಬದ ಸದಸ್ಯರ ಜನ್ಮದಿನದಂದು ಫೈನಲ್ ಪಂದ್ಯವನ್ನು ಆಯೋಜನೆ ಮಾಡದಂತೆ ನೋಡಿಕೊಳ್ಳಬೇಕು ಎಂದು ಬಿಸಿಸಿಐಗೆ ಹೇಳಲು ಬಯಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಲಕ್ನೋದಲ್ಲಿ ಫೈನಲ್ ನಡೆಯುತ್ತಿದ್ದರೆ ಭಾರತ ಗೆಲ್ಲುತ್ತಿತ್ತು: ಮೋದಿ ಪಿಚ್ ಬಗ್ಗೆ ಅಖಿಲೇಶ್ ಟೀಕೆ