ಬೆಂಗಳೂರು: ದೇಶದೆಲ್ಲೆಡೆ ಈಗಾಗಲೇ ವಿಶ್ವಕಪ್ (World Cup) ಜ್ವರ ಜೋರಾಗಿದೆ. ಇಂದಿನ ಪಂದ್ಯಾವಳಿಯಲ್ಲಿ ಇಂಡಿಯಾ (India) ಗೆಲ್ಲಲ್ಲಿ ಅನ್ನೋ ಶುಭ ಹಾರೈಕೆ ನಾಡಿನೆಲ್ಲೆಡೆ ಕೇಳಿಬರುತ್ತಿದೆ. ಇದರ ನಡುವೆ ಬೆಂಗಳೂರಿನ (Bengaluru) ಅಕ್ಕಸಾಲಿಗನೊಬ್ಬ (Goldsmith) ಚಿನ್ನದ ವಿಶ್ವಕಪ್ ತಯಾರಿಸಿ ಡಿಫರೆಂಟ್ ಆಗಿ ವಿಶ್ ಮಾಡಿದ್ದಾರೆ.
ವಿಶ್ವಕಪ್ ಟೂರ್ನಿನಲ್ಲಿ ಟೀಂ ಇಂಡಿಯಾ ಫೈನಲ್‌ಗೆ ಪ್ರವೇಶಿಸುತ್ತಿದ್ದಂತೆ ಭಾರತ ಗೆಲ್ಲುತ್ತದೆ ಎನ್ನುವ ನಿರೀಕ್ಷೆಗಳು ಗರಿಗೆದರಿವೆ. ಲಕ್ಷಾಂತರ ಜನ ಪೂಜೆ, ಪುನಸ್ಕಾರ ಸೇರಿದಂತೆ ಹಲವು ರೀತಿಯಲ್ಲಿ ವಿಶ್ ಮಾಡುತ್ತಿದ್ದಾರೆ. ಬೆಂಗಳೂರಿನ ಚಿನ್ನದ ವ್ಯಾಪಾರಿಯಿಂದ ವಿಶ್ವಕಪ್ ಮಿನಿ ಟ್ರೋಫಿಗಳು (Trophy) ನಿರ್ಮಾಣವಾಗಿವೆ. ಕ್ರಿಕೆಟ್ (Cricket) ಅಭಿಮಾನಿಯಾಗಿರುವ ನಾಗರಾಜ್ ರೇವಣಕರ್ ಅಕ್ಕಸಾಲಿಗನಾಗಿ ಕೆಲಸ ಮಾಡುತ್ತಿದ್ದು, ಇಂದು ಭಾರತ ಗೆಲ್ಲಲಿ ಅನ್ನೋ ಆಶಯದೊಂದಿಗೆ ಚಿನ್ನದಲ್ಲಿ ಮೂರು ವಿಶ್ವಕಪ್ ಟ್ರೋಫಿ ನಿರ್ಮಿಸಿದ್ದಾರೆ. ನಾಗರಾಜ್, ಟೀಂ ಇಂಡಿಯಾ ಮೇಲಿನ ಅಭಿಮಾನಕ್ಕೆ 22 ಕ್ಯಾರೆಟ್‌ನಲ್ಲಿ ಒಂದು ಗ್ರಾಂ, 680 ಮಿಲಿಗ್ರಾಂನಲ್ಲಿ ಒಂದು ವಿಶ್ವಕಪ್‌ನಂತೆ ಒಟ್ಟು ಮೂರು ವಿಶ್ವಕಪ್ ಅನ್ನು ನಾಲ್ಕು ಗ್ರಾಂ 880 ಮಿಲಿಯಲ್ಲಿ, ಎರಡು ಸೆಂ.ಮೀನಲ್ಲಿ ತಯಾರಿಸಿದ್ದಾರೆ. ಇದನ್ನೂ ಓದಿ: 13 ವಿಶ್ವಕಪ್‍ನಲ್ಲಿ 8ನೇ ಬಾರಿ ಫೈನಲ್- 5 ಬಾರಿ ಚಾಂಪಿಯನ್ ಆಗಿರೋ ಆಸ್ಟ್ರೇಲಿಯಾ
ಇನ್ನೂ ವಿಶ್ಚಕಪ್ ಅನ್ನು ಚಿನ್ನದಲ್ಲಿ ತಯಾರಿಸಿದರೇ, ಬ್ಯಾಟ್‌ಗಳನ್ನು ಬೆಳ್ಳಿಯಲ್ಲಿ ತಯಾರಿಸಿದ್ದಾರೆ. ಸ್ಟಮ್ಸ್‌ಗಳನ್ನು ಚಿನ್ನದ ಕೋಟೆಡ್‌ನಲ್ಲಿ ಮಾಡಿದ್ದಾರೆ. ಮೊದಲನೆ ವಿಶ್ವಕಪ್ ಬ್ಯಾಟ್‌ನಲ್ಲಿ ಕಪೀಲ್ ದೇವ್ (1983), ಎರಡನೇ ಬ್ಯಾಟ್‌ನಲ್ಲಿ ಎಂ.ಎಸ್ ದೋನಿ(2011) ಅಂತಾ ಬರೆದರೇ, ಮೂರನೇ ಬ್ಯಾಟ್‌ನಲ್ಲಿ ‘ಆಲ್ ದಿ ಬೆಸ್ಟ್ ಇಂಡಿಯಾ’ ಅಂತಾ ಬರೆಯಲಾಗಿದೆ. ಇದನ್ನೂ ಓದಿ: World Cup 2023: ರಾಜ್ಯದ ಎಲ್ಲಾ ಜಿಲ್ಲಾ ಕ್ರೀಡಾಂಗಣಗಳಲ್ಲಿ ದೊಡ್ಡ ಪರದೆಯಲ್ಲಿ ನೇರಪ್ರಸಾರದ ವ್ಯವಸ್ಥೆ