ಅಹಮದಾಬಾದ್: ಭಾರತ (India) ಮತ್ತು ಆಸ್ಟ್ರೇಲಿಯಾ (Australia) ನಡುವಿನ ಐಸಿಸಿ (ICC) ವಿಶ್ವಕಪ್ (World Cup) ಟೂರ್ನಿಯ ಫೈನಲ್ ಪಂದ್ಯ ಪ್ರಾರಂಭಕ್ಕೆ ಕೆಲವೇ ಕ್ಷಣಗಳು ಬಾಕಿ ಉಳಿದಿದ್ದು, ಎರಡು ತಂಡಗಳ ರೋಚಕ ಪಂದ್ಯ ವೀಕ್ಷಣೆಗಾಗಿ ಸ್ಟೇಡಿಯಂನತ್ತ ಜನಸಾಗರವೇ ಹರಿದುಬಂದಿದೆ.
ಅಹಮದಾಬಾದ್‌ನ (Ahmedabad) ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium) ಒಳಗೆ ಹಾಗೂ ಹೊರಗೆ ಎಲ್ಲಿ ನೋಡಿದರೂ ಜನವೋ ಜನ. ಭಾರತ ತಂಡಕ್ಕೆ ಬೆಂಬಲ ಸೂಚಿಸಲು ಕ್ರಿಕೆಟ್ ಅಭಿಮಾನಿಗಳು ಸ್ಟೇಡಿಯಂ ಬಳಿ ಕಿಕ್ಕಿರಿದಿದ್ದು, ನೀಲಿ ಸಮುದ್ರದಂತೆ ಗೋಚರಿಸುತ್ತಿದೆ. ತ್ರಿವರ್ಣ ಧ್ವಜ ಹಿಡಿದ ಅಭಿಮಾನಿಗಳು, ಭಾರತ ಪರ ಜಯಘೋಷ ಮೊಳಗಿಸುತ್ತಾ, ಟೀಂ ಇಂಡಿಯಾ ಗೆದ್ದು ಬರಲಿ ಎಂದು ಶುಭ ಕೋರುತ್ತಿದ್ದಾರೆ. ಇದನ್ನೂ ಓದಿ: ಬ್ಯಾಟಿಂಗ್, ಬೌಲಿಂಗ್‍ನಲ್ಲಿ ನಮ್ಮ ತಂಡ ದಾಖಲೆ ಸೃಷ್ಟಿಸುತ್ತದೆ: ಪ್ರಿಯಾಂಕಾ ಗಾಂಧಿ
Advertisement
Advertisement
ಇದೇ ವೇಳೆ ಮಾತನಾಡಿದ ಟೀಂ ಇಂಡಿಯಾ ಬೆಂಬಲಿಗ ಮತ್ತು ಸಚಿನ್ ತೆಂಡೂಲ್ಕರ್ ಅವರ ಅಭಿಮಾನಿ ಸುಧೀರ್ ಕುಮಾರ್ ಚೌಧರಿ, ಭಾರತ ತಂಡ 2011ರ ಗೆಲುವನ್ನು ಪುನರಾವರ್ತಿಸುತ್ತದೆ. ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಶತಕ ಗಳಿಸಿ 450 ರನ್‌ಗಳ ಗುರಿ ನೀಡಿ ಸುಲಭವಾಗಿ ಗೆಲ್ಲಬೇಕೆಂದು ಬಯಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: World Cup Final – ಭಾರತದ ಗೆಲುವಿಗಾಗಿ ಬೆಂಗಳೂರಿನ ಹಲವೆಡೆ ವಿಶೇಷ ಪೂಜೆ
Advertisement
Advertisement
ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದ ನರೇಂದ್ರ ಮೋದಿ ಸ್ಟೇಡಿಯಂ ಈಗ ವಿಶ್ವ ದಾಖಲೆ ಬರೆಯಲು ಸಜ್ಜಾಗಿದೆ. ವರದಿಗಳ ಪ್ರಕಾರ, ಸುಮಾರು 1,320,000 ಜನರು ಪಂದ್ಯವನ್ನು ನೋಡಲು ಬರಲಿದ್ದಾರೆ. ಬಹಳಷ್ಟು ಗಣ್ಯರು ಪಂದ್ಯಕ್ಕೆ ಹಾಜರಾಗಲು ಸಜ್ಜಾಗಿದ್ದಾರೆ. ಬಿಸಿಸಿಐ ಸಹ ಭವ್ಯವಾದ ಐಎಎಫ್ ಸೂರ್ಯಕಿರಣ ಶೋ, ಕಲಾವಿದರ ಪ್ರದರ್ಶನ ಮತ್ತು ಲೇಸರ್ ಮತ್ತು ಲೈಟ್ ಶೋ ಅನ್ನು ಆಯೋಜಿಸಿದೆ. ಇದನ್ನೂ ಓದಿ: ವಿಶ್ವಕಪ್‍ನೊಂದಿಗೆ ಮಗ ಮನೆಗೆ ಮರಳುತ್ತಾನೆ: ಶಮಿ ತಾಯಿ ವಿಶ್ವಾಸ