ಬೆಂಗಳೂರು: ಪಾಕಿಸ್ತಾನ ವಿರುದ್ಧ ಶುಕ್ರವಾರ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಮಿಚೆಲ್ ಮಾರ್ಷ್ (Mitchell Marsh) ಹಾಗೂ ಡೇವಿಡ್ ವಾರ್ನರ್ (David Warner) ಆರಂಭಿಕ ಜೋಡಿ ಭರ್ಜರಿ ಶತಕಗಳನ್ನು ಸಿಡಿಸುವ ಜೊತೆಗೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.
Advertisement
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ (Australia) ತಂಡವು 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 367 ರನ್ ಗಳಿಸುವ ಮೂಲಕ ಎದುರಾಳಿ ಪಾಕ್ (Pakistan) ತಂಡಕ್ಕೆ 368 ರನ್‌ಗಳ ಗುರಿ ನೀಡಿದೆ. ಏಕದಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ ಇದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2011ರ ಮಾರ್ಚ್ 16ರಂದು ಬ್ರಾಡ್ ಹ್ಯಾಡಿನ್ ಮತ್ತು ಶೇನ್ ವ್ಯಾಟ್ಸನ್ ಜೋಡಿ ಕೆನಡಾ ವಿರುದ್ಧ ಮೊದಲ ವಿಕೆಟ್‌ಗೆ 183 ರನ್‌ಗಳ ಜೊತೆಯಾಟ ನೀಡಿತ್ತು. ಇದು ಆಸೀಸ್ ಪರ ಮೊದಲ ವಿಕೆಟ್‌ಗೆ ಅತಿಹೆಚ್ಚು ರನ್ ಜೊತೆಯಾಟ ನೀಡಿದ್ದ ಜೋಡಿಯಾಗಿತ್ತು. 259 ರನ್‌ಗಳ ಜೊತೆಯಾಟ ನೀಡುವ ಮೂಲಕ ವಾರ್ನರ್ ಹಾಗೂ ಮಾರ್ಚ್ ಜೋಡಿ ಈ ದಾಖಲೆಯನ್ನು ಮುರಿದಿದೆ.
Advertisement
Advertisement
ಅಲ್ಲದೇ ಆಸೀಸ್ ಪರ ಭರ್ಜರಿ ಶತಕ ಸಿಡಿಸಿ ಮಿಂಚಿದ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಜೋಡಿ 33.5 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 259 ರನ್ ಬಾರಿಸುವ ಮೂಲಕ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ವಿಕೆಟ್‌ಗೆ ಅತಿಹೆಚ್ಚು ರನ್ ಬಾರಿಸಿದ 2ನೇ ಜೋಡಿ ಎಂಬ ವಿಶೇಷ ಸಾಧನೆ ಮಾಡಿದೆ. 2011ರ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ವಿಕೆಟ್‌ಗೆ 282 ರನ್‌ಗಳ ಜೊತೆಯಾಟ ನೀಡಿದ್ದ ಶ್ರೀಲಂಕಾ ತಂಡದ ತರಂಗ, ದಿಲ್ಶಾನ್ ಜೋಡಿ ಮೊದಲ ಸ್ಥಾನದಲ್ಲಿದೆ.
Advertisement
ಆರಂಭಿಕರಾಗಿ ಕಣಕ್ಕಿಳಿದ ಮಿಚೆಲ್ ಮಾರ್ಷ್ ಹಾಗೂ ಡೇವಿಡ್ ವಾರ್ನರ್ ಜೋಡಿ ಆರಂಭದಿಂದಲೇ ಪಾಕ್ ಬೌಲರ್‌ಗಳನ್ನ ಬೆಂಡೆತ್ತಲು ಶುರು ಮಾಡಿತು. 13 ಓವರ್‌ಗಳಲ್ಲೇ 100 ರನ್‌ಗಳ ಗಡಿ ದಾಟಿತ್ತು. ಮಿಚೆಲ್ ಮಾರ್ಷ್ 108 ಎಸೆತಗಳಲ್ಲಿ 121 ರನ್ (10 ಬೌಂಡರಿ, 9 ಸಿಕ್ಸರ್) ಬಾರಿಸಿದರೆ, 124 ಎಸೆತಗಳನ್ನು ಎದುರಿಸಿದ ಡೇವಿಡ್ ವಾರ್ನರ್ 14 ಬೌಂಡರಿ, 9 ಸಿಕ್ಸರ್‌ಗಳೊಂದಿಗೆ 163 ರನ್ ಬಾರಿಸಿ ಪೆವಿಲಿಯನ್‌ಗೆ ಮರಳಿದರು. ಈ ಜೋಡಿ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ರನ್ ವೇಗವೂ ಕಡಿಮೆಯಾಯಿತು. ಜೊತೆಗೆ ಆಸೀಸ್ ಒಂದೊಂದೇ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಅಂತಿಮವಾಗಿ 400 ರನ್‌ಗಳನ್ನು ಬಾರಿಸುವ ನಿರೀಕ್ಷೆಯಲ್ಲಿದ್ದ ಆಸ್ಟ್ರೇಲಿಲಿಯಾ 367 ರನ್‌ಗಳಿಗೆ ತೃಪ್ತಿಪಟ್ಟುಕೊಂಡಿತು.
ಉಳಿದಂತೆ ಸ್ಟೀವ್ ಸ್ಮಿತ್ 7 ರನ್, ಮಾರ್ಕಸ್ ಸ್ಟೋಯ್ನಿಸ್ 21 ರನ್, ಜೋಶ್ ಇಂಗ್ಲಿಸ್ 13 ರನ್, ಮಾರ್ನಸ್ ಲಾಬುಶೇನ್ 8 ರನ್, ಮಿಚೆಲ್ ಸ್ಟಾರ್ಕ್ 2 ರನ್ ಗಳಿಸಿದ್ರೆ, ಸ್ಫೋಟಕ ಬ್ಯಾಟ್ಸ್‌ಮ್ಯಾನ್ ಗ್ಲೇನ್ ಮ್ಯಾಕ್ಸ್‌ವೆಲ್ ಮತ್ತು ಜೋಶ್ ಹ್ಯಾಜಲ್‌ವುಡ್ ಶೂನ್ಯಕ್ಕೆ ನಿರ್ಗಮಿಸಿದರು. ನಾಯಕ ಪ್ಯಾಟ್ ಕಮ್ಮಿನ್ಸ್ 6 ರನ್ ಹಾಗೂ ಆಡಂ ಝಂಪಾ 1 ರನ್ ಗಳಿಸಿ ಅಜೇಯರಾಗುಳಿದರು.
ಶಾಹೀನ್ ಶೈನ್: ಆರಂಭದಲ್ಲಿ ರನ್ ಚಚ್ಚಿಸಿಕೊಂಡಿದ್ದ ಪಾಕಿಸ್ತಾನ ಬೌಲರ್‌ಗಳು ಡೆತ್ ಓವರ್‌ನಲ್ಲಿ ಬಿಗಿ ಹಿಡಿತ ಸಾಧಿಸಿದರು. ಮಾರಕ ಬೌಲಿಂಗ್ ದಾಳಿ ನಡೆಸಿದ ಶಾಹೀನ್ ಶಾ ಅಫ್ರಿದಿ (Shaheen Shah Afridi) 10 ಓವರ್‌ಗಳಲ್ಲಿ 5 ವಿಕೆಟ್ ಕಿತ್ತರೆ, ಹ್ಯಾರಿಸ್ ರೌಫ್ 3 ವಿಕೆಟ್ ಹಾಗೂ ಉಸ್ಮಾನ್ ಮಿರ್ 1 ವಿಕೆಟ್ ಪಡೆದು ಮಿಂಚಿದರು.
Web Stories