ಬೆಂಗಳೂರು: 2023ನೇ ಸಾಲಿನಲ್ಲಿ ಭಾರತ 8 ಬಾರಿ 350ಕ್ಕಿಂತ ಹೆಚ್ಚು ರನ್ ಗಳಿಸಿ ದಾಖಲೆ ಬರೆದಿದೆ. 2019ರಲ್ಲಿ ಇಂಗ್ಲೆಂಡ್ (England) ತಂಡ 7 ಬಾರಿ 350 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದೇ ಇದುವರೆಗಿನ ವರ್ಷದ ಗರಿಷ್ಠ ಸ್ಕೋರ್ ದಾಖಲೆಯಾಗಿತ್ತು. ಈ ದಾಖಲೆಯನ್ನು ಈಗ ಟೀಂ ಇಂಡಿಯಾ (Team India) ತನ್ನ ಹೆಸರಿಗೆ ಬರೆದುಕೊಂಡಿದೆ.
Advertisement
ಒಟ್ಟು 8ರಲ್ಲಿ 2 ಬಾರಿ 350 ಪ್ಲಸ್ ರನ್ ಗಳು 2023ರ ವಿಶ್ವಕಪ್‌ನಲ್ಲೇ (World Cup 2023) ಬಂದಿದೆ. ಈ ವರ್ಷ ಮೂರು ಬಾರಿ ಶ್ರೀಲಂಕಾದ ವಿರುದ್ಧ 350 ಪ್ಲಸ್ ರನ್ ಗಳಿಸಿದೆ. 350 ಪ್ಲಸ್ ರನ್ ಗಳಿಸಿದ್ದ 8 ಪಂದ್ಯಗಳಲ್ಲೂ ಟೀಂ ಇಂಡಿಯಾ ಗೆಲುವು ಸಾಧಿಸಿತ್ತು ಎನ್ನುವುದೇ ವಿಶೇಷ. ಇದನ್ನೂ ಓದಿ: ಏಕದಿನ ಕ್ರಿಕೆಟ್‌ನಲ್ಲಿ 9 ವರ್ಷಗಳ ಬಳಿಕ ಮೊದಲ ವಿಕೆಟ್ ಕಿತ್ತ ಕೊಹ್ಲಿ – ಕುಣಿದು ಕುಪ್ಪಳಿಸಿದ ಅನುಷ್ಕಾ
Advertisement
Advertisement
ಒಟ್ಟು 6 ಪಂದ್ಯಗಳು ಭಾರತದಲ್ಲೇ ನಡೆದಿತ್ತು. ಇನ್ನೆರಡು ಪಂದ್ಯಗಳು ಶ್ರೀಲಂಕಾ (Sri Lanka) ಹಾಗೂ ವೆಸ್ಟ್ ಇಂಡೀಸ್‌ನಲ್ಲಿ (West Indies) ನಡೆದಿತ್ತು. ಇದನ್ನೂ ಓದಿ: World Cup 2023: ಭಾರತಕ್ಕೆ ಗೆಲುವಿನ ʻಶ್ರೇಯಸ್ಸುʼ – ಡಚ್ಚರ ವಿರುದ್ಧ 160 ರನ್‌ಗಳ ಭರ್ಜರಿ ಜಯ..!
Advertisement
ಯಾರ ವಿರುದ್ಧ 350+…?
ನೆದರ್ಲೆಂಡ್ ವಿರುದ್ಧ 50 ಓವರ್ ಗಳಲ್ಲಿ 410/4 (ಬೆಂಗಳೂರು)
ಶ್ರೀಲಂಕಾ ವಿರುದ್ಧ 50 ಓವರ್ ಗಳಲ್ಲಿ 357/8 (ಮುಂಬೈ)
ಆಸ್ಟ್ರೇಲಿಯಾ ವಿರುದ್ಧ 50 ಓವರ್ ಗಳಲ್ಲಿ 399/5 (ಇಂದೋರ್)
ಪಾಕಿಸ್ತಾನ ವಿರುದ್ಧ 50 ಓವರ್ ಗಳಲ್ಲಿ 356/2 (ಕೊಲಂಬೊ)
ವೆಸ್ಟ್ ಇಂಡೀಸ್ ವಿರುದ್ಧ 50 ಓವರ್ ಗಳಲ್ಲಿ 351/5 (ತರೌಬ)
ನ್ಯೂಜಿಲೆಂಡ್ ವಿರುದ್ಧ 50 ಓವರ್ ಗಳಲ್ಲಿ 385/9 (ಇಂದೋರ್)
ಶ್ರೀಲಂಕಾ ವಿರುದ್ಧ 50 ಓವರ್ ಗಳಲ್ಲಿ 390/5 (ತಿರುವನಂತಪುರಂ)
ಶ್ರೀಲಂಕಾ ವಿರುದ್ಧ 50 ಓವರ್ ಗಳಲ್ಲಿ 373/7 (ಗುವಾಹಟಿ)