ಮ್ಯಾಂಚೆಸ್ಟರ್: ಟೀಂ ಇಂಡಿಯಾ, ನ್ಯೂಜಿಲೆಂಡ್ ಮಧ್ಯೆ ಜುಲೈ ಮಂಗಳವಾರ ಸೆಮಿಫೈನಲ್ ಮ್ಯಾಚ್ ನಡೆಯಲಿದೆ. ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯ ನೋಡಲು ಎರಡೂ ತಂಡದ ಅಭಿಮಾನಿಗಳು ಸೇರಿದಂತೆ ಇಡೀ ವಿಶ್ವವೇ ಕಾದು ಕುಳಿತಿದೆ. ಇತ್ತ ಎರಡೂ ತಂಡಗಳು ಬಲಿಷ್ಠವಾಗಿದ್ದು, ರನ್‍ಗಳ ಸುರಿಮಳೆ ಸುರಿಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಂದು ವೇಳೆ ಪಂದ್ಯ ಮಳೆಯಿಂದ ಪಂದ್ಯ ರದ್ದಾದರೆ ಹಲವು ಆಯ್ಕೆಗಳಿವೆ.
ಈಗಾಗಲೇ ವಿಶ್ವಕಪ್ ಟೂರ್ನಿಯಲ್ಲಿ ನಾಲ್ಕು ಪಂದ್ಯಗಳು ರದ್ದುಗೊಂಡಿವೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯವೂ ಮಳೆಯಿಂದ ರದ್ದಾದ ಹಿನ್ನೆಲೆಯಲ್ಲಿ ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗಿತ್ತು. ಇದೀಗ ಮಂಗಳವಾರ ಪಂದ್ಯ ಮಳೆಯಿಂದ ರದ್ದಾದರೆ ಜುಲೈ 10ರಂದು ರಿಸರ್ವ್ ಡೇ (ಮೀಸಲು ದಿನ)ದಂದು ನಡೆಸಬಹುದು.
Advertisement
Advertisement
ಲೀಗ್ ಹಂತದಲ್ಲಿ ಯಾವುದೇ ಪಂದ್ಯಗಳಿಗೆ ಮೀಸಲು ದಿನ ಇರಲಿಲ್ಲ. ಆದರೆ ಸೆಮಿಫೈನಲ್ ಪಂದ್ಯಗಳಿಗೆ ಮೀಸಲು ದಿನವನ್ನು ಐಸಿಸಿ ನಿಗದಿ ಪಡಿಸಿದೆ. ಮೀಸಲು ದಿನವೂ ಮಳೆ ಬಂದರೆ ಲೀಗ್ ಹಂತದಲ್ಲಿ ಅತಿ ಹೆಚ್ಚು ಅಂಕಗಳಿಸಿದ ತಂಡ ಫೈನಲ್ ಪ್ರವೇಶಿಸಲಿದೆ. ಹೀಗಾಗಿ ಎರಡು ದಿನವೂ ಮಳೆ ಬಂದು ಪಂದ್ಯ ರದ್ದಾದರೆ ಟೀಂ ಇಂಡಿಯಾ ನೇರವಾಗಿ ಫೈನಲ್ ಪ್ರವೇಶ ಮಾಡಲಿದೆ.
Advertisement
Advertisement
ಶನಿವಾರ ನಡೆದ ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತ್ತು. ಇತ್ತ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 10 ರನ್‍ಗಳಿಂದ ಗೆದ್ದುಕೊಂಡಿತ್ತು. ಹೀಗಾಗಿ ಗುಂಪಿನಲ್ಲಿ ಆಗ್ರ ಸ್ಥಾನ ಪಡೆದ ಭಾರತ ಮಂಗಳವಾರ ನಾಲ್ಕನೇಯ ಸ್ಥಾನವನ್ನು ಪಡೆದ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಲಿಂಗ್ ಹಂತದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಬೇಕಿದ್ದ ಪಂದ್ಯ ಮಳೆಯಿಂದಾಗಿ ಒಂದು ಎಸೆತ ಕಾಣದೇ ರದ್ದಾಗಿತ್ತು. ಹೀಗಾಗಿ 2 ತಂಡಗಳಿಗೆ ಒಂದೊಂದು ಅಂಕವನ್ನು ಹಂಚಿಕೆ ಮಾಡಲಾಗಿತ್ತು.
ಗುರುವಾರ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಹಿಂದಿನ ವಿಶ್ವಕಪ್ ಪಂದ್ಯಗಳಲ್ಲಿ ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಆದರೆ ಈ ಬಾರಿ ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯ ನಡೆಸಿದ ಪರಿಣಾಮ ಏಕದಿನ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ 4 ಸ್ಥಾನ ಪಡೆದಿರುವ ದೇಶಗಳಾದ ಇಂಗ್ಲೆಂಡ್, ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶಿಸಿದೆ.
ಲೀಗ್ ಹಂತದ ಎಲ್ಲ ಪಂದ್ಯಗಳು ಶನಿವಾರಕ್ಕೆ ಮುಕ್ತಾಯವಾಗಿದ್ದು, ಭಾರತ 9 ಪಂದ್ಯಗಳಿಂದ 15 ಅಂಕ ಸಂಪಾದಿಸಿದರೆ, ಆಸ್ಟ್ರೇಲಿಯಾ 14 ಅಂಕ, ಇಂಗ್ಲೆಂಡ್ 12 ಅಂಕ, ನ್ಯೂಜಿಲೆಂಡ್ 11 ಅಂಕ ಗಳಿಸಿದೆ.