ಕೊಹಿನೂರ್ ವಜ್ರವನ್ನು ತನ್ನಿ – ಕೊಹ್ಲಿಗೆ ಅಭಿಮಾನಿಗಳಿಂದ ಬೇಡಿಕೆ

Public TV
2 Min Read
kohli b

ಲಂಡನ್: ಇಂಗ್ಲೆಂಡ್ ರಾಣಿ ಎಲಿಜಬೆತ್ ಅವರನ್ನು ಭೇಟಿ ಮಾಡಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ನೆಟ್ಟಿಗರು ಈಗ ಕಾಲೆಳೆಯುತ್ತಿದ್ದಾರೆ.

2019ರ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ತಂಡಗಳ ನಾಯಕರು ಗುರುವಾರ ಇಂಗ್ಲೆಂಡ್ ರಾಣಿ ಎಲಿಜಬೆತ್‍ರನ್ನ ಮಾಡಿದ್ದರು. ಈ ವೇಳೆ ರಾಣಿ ಎಲ್ಲಾ ಆಟಗಾರರಿಗೂ ಶುಭ ಕೋರಿದ್ದರು.

ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಕ್ರಿಕೆಟ್ ಆಟಗಾರರು ಎಲಿಜಬೆತ್‍ರನ್ನ ಭೇಟಿ ಮಾಡಿದ್ದು, ಈ ವೇಳೆ ಯುವರಾಜ ಹ್ಯಾರಿ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೊಹ್ಲಿ ಹಾಗೂ ರಾಣಿ ಎಲಿಜಬೆತ್ ಅವರ ಭೇಟಿಯ ಫೋಟೋವನ್ನು ಬಿಸಿಸಿಐ ಟ್ವೀಟ್ ಮಾಡಿದೆ.

ಈ ಟ್ವೀಟ್ ನೋಡಿ ಅಭಿಮಾನಿಯೊಬ್ಬರು ‘ರಾಣಿ ಅವರನ್ನು ಭೇಟಿ ಮಾಡಿರುವ ಕೊಹ್ಲಿ ಅವರೇ ನಮ್ಮ ಕೊಹಿನೂರು ವಜ್ರ ಅವರ ಬಳಿಯೇ ಇದೆ. ವಾಪಸ್ ತನ್ನಿ’ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಅಭಿಮಾನಿ ಇಬ್ಬರ ನಡುವೆ ಯಾವ ರೀತಿ ಸಂಭಾಷಣೆ ನಡೆದಿರುತ್ತದೆ ಎಂದು ಬರೆದು, ‘ಎಲಿಜಬೆತ್: ಬೆಟಾ ಏನು ಬೇಕು? ಕೊಹ್ಲಿ: ಕೊಹಿನೂರ್ ಬೇಕು’ ಎಂದು ಕೇಳಿರುವುದಾಗಿ ಕಾಮೆಂಟ್ ಮಾಡಿದ್ದಾರೆ.

ವಿಶ್ವದಲ್ಲಿ ಅತಿ ಹೆಚ್ಚು ಬೆಲೆ ಬಾಳುವ ವಜ್ರ ಎಂಬ ಖ್ಯಾತಿಗೆ ಕೊಹಿನೂರ್ ಪಾತ್ರವಾಗಿದ್ದು, ಇದನ್ನು ಭಾರತದಿಂದ ಬ್ರಿಟಿಷರು ತೆಗೆದುಕೊಂಡು ಹೋಗಿದ್ದರು. ಸದ್ಯ ಈ ವಜ್ರ ರಾಣಿಯ ಕೀರಿಟದಲ್ಲಿದೆ. ವಿಶ್ವದಲ್ಲಿ ಇರುವ ಎಲ್ಲಾ ವಜ್ರಗಳಲ್ಲಿ ಅತಿ ಹೆಚ್ಚು ಹೊಳೆಯುವ ವ್ರಜ ಇದಾಗಿದೆ. ಈ ವಜ್ರವನ್ನು ಭಾರತಕ್ಕೆ ಮರಳಿ ವಾಪಸ್ ನೀಡಬೇಕೆಂಬ ವಾದವು ನಡೆದಿದೆ.

ಇತ್ತ ವಿಶ್ವಕಪ್ ಟೂರ್ನಿ ಗುರುವಾರ ಆರಂಭವಾಗಿದ್ದು, ಭಾರತ ಜೂನ್ 5 ರಂದು ದಕ್ಷಿಣಾ ಆಫ್ರಿಕಾವನ್ನು ಎದುರಿಸಲಿದೆ. ಈ ಬಾರಿಯ ಟೂರ್ನಿಯಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *