11 ವರ್ಷಗಳ ಬಳಿಕ ಸೆಮಿಫೈನಲ್‍ನಲ್ಲಿ ಮುಖಾಮುಖಿಯಾಗುತ್ತಿರುವ ಕೊಹ್ಲಿ, ವಿಲಿಯಮ್ಸನ್

Public TV
2 Min Read
KOHLI

ಲಂಡನ್: 2019ರ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಪರಿಣಾಮ ಟೂರ್ನಿಯ ಸೆಮಿ ಫೈನಲ್‍ನಲ್ಲಿ ಟೀಂ ಇಂಡಿಯಾ, ನ್ಯೂಜಿಲೆಂಡ್ ತಂಡವನ್ನು ಎದುರಿಸುತ್ತಿದೆ.

ವಿಶ್ವಕಪ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ಭಾರತ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಜುಲೈ 09 ರಂದು ನ್ಯೂಜಿಲೆಂಡ್ ತಂಡವನ್ನು ಎದುರಿಸುತ್ತಿದೆ. ವಿಶೇಷ ಎಂದರೆ ಈ ಪಂದ್ಯ ನಾಯಕ ವಿರಾಟ್ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್ ಅವರಿಗೆ ಬಹು ಮುಖ್ಯವಾಗಿದ್ದು, 2008 ಅಂಡರ್ 19 ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ಇಬ್ಬರು ಮುಖಾಮುಖಿಯಾಗಿದ್ದರು. ಬರೋಬ್ಬರಿ 11 ವರ್ಷಗಳ ಬಳಿಕ ಮತ್ತೆ ತಂಡದ ಜವಾಬ್ದಾರಿಯೊಂದಿಗೆ ಹೋರಾಟಕ್ಕೆ ಸಿದ್ಧವಾಗಿದ್ದಾರೆ.

2008ರ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಜಯಗಳಿತ್ತು. 2008ರ ಫೆ. 27 ರಂದು ನಡೆದ ಪಂದ್ಯದಲ್ಲಿ ಟಾಸ್ ಗೆಲುವು ಪಡೆದಿದ್ದ ಕಿವೀಸ್ ತಂಡ ಬ್ಯಾಟಿಂಗ್ ಆಯ್ದುಕೊಂಡಿತ್ತು. ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕೋರೆ ಆಂಡರ್ಸನ್ 67 ಎಸೆತಗಳಲ್ಲಿ 70 ರನ್ ಸಿಡಿಸಿದ್ದರು. ಈ ಪಂದ್ಯದಲ್ಲಿ ವಿಲಿಯಮ್ಸನ್ 80 ಎಸೆತಗಳಲ್ಲಿ 37 ರನ್ ಗಳಿಸಿ ಔಟಾಗಿದ್ದರು. ಇದರೊಂದಿಗೆ ತಂಡ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತ್ತು. ಇತ್ತ ಸುಲಭ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಪರ ಶ್ರೀವಾತ್ಸ ಗೋಸ್ವಾಮಿ ಆಕರ್ಷಕ ಅರ್ಧ ಶತಕ ಸಿಡಿಸಿದ್ರೆ, ಕೊಹ್ಲಿ 5 ಬೌಂಡರಿಗಳೊಂದಿಗೆ 43 ರನ್ ಗಳಿಸಿದ್ದರು. ಇತ್ತ ಬೌಲಿಂಗ್ ಮಿಂಚಿದ ಟೀಮ್ ಸೌತಿ 4/29 ವಿಕೆಟ್ ಪಡೆದು ಟೀಂ ಇಂಡಿಯಾವನ್ನು ಕಾಡಿದ್ದರು. ರೋಚಕ ಹೋರಾಟ ನಡೆಸಿದ ಭಾರತ ಡಕ್‍ವರ್ಥ್ ಲೂಯಿಸ್ ನಿಯಮದ ಅನ್ವಯ 41.3 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿ 3 ವಿಕೆಟ್ ಅಂತರದಲ್ಲಿ ಗೆಲುವು ಪಡೆದಿತ್ತು.

Virat Kohli and Kane Williamson

2008ರ ಅಂಡರ್ 19 ವಿಶ್ವಕಪ್ ಪಂದ್ಯದ ರೀತಿಯಲ್ಲೇ ಟೀಂ ಇಂಡಿಯಾ ಈ ಬಾರಿಯೂ ನ್ಯೂಜಿಲೆಂಡ್ ವಿರುದ್ಧ ಗೆಲುವು ಪಡೆದು ಫೈನಲ್ ಪ್ರವೇಶಿಸಲಿ ಎಂಬುವುದು ಅಭಿಮಾನಿಗಳ ಆಶಯವಾಗಿದೆ. ವಿಶ್ವಕಪ್ ಹೋರಾಟದ ಜುಲೈ 09 ರ ಸೆಮಿ ಫೈನಲ್ ಪಂದ್ಯ ತೀವ್ರ ಕುತೂಹಲವನ್ನು ಮೂಡಿಸಿದ್ದು, ಇತಿಹಾಸ ಮುರುಕಳಿಸಲಿದೆಯಾ ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *