ಬರ್ಮಿಂಗ್‍ಹ್ಯಾಮ್: ಟೀಂ ಇಂಡಿಯಾ ಹಾಗೂ ಬಾಂಗ್ಲಾದೇಶದ ವಿರುದ್ಧ ಪಂದ್ಯದಲ್ಲಿ ತಂಡಕ್ಕೆ ಚಿಯರ್ ಮಾಡಲು ಆಗಮಿಸಿದ್ದ ಹಿರಿಯ ಅಭಿಮಾನಿಯೊಬ್ಬರು ನೆಟ್ಟಿಗರ ಮನಗೆದ್ದಿದ್ದಾರೆ.
ಇಳಿ ವಯಸ್ಸಿನಲ್ಲಿಯೂ ಟೀಂ ಇಂಡಿಯಾಗೆ ಬೆಂಬಲ ನೀಡಲು ಕ್ರೀಡಾಂಗಣಕ್ಕೆ ಆಗಮಿಸಿದ್ದ ಅಭಿಮಾನಿ ಮಕ್ಕಳಂತೆಯೇ ಕುಣಿದು ಕುಪ್ಪಳಿಸಿದ್ದರು. ಕ್ಯಾಮೆರಾಮೆನ್ ಕೂಡ ಹಿರಿಯ ಅಭಿಮಾನಿಯ ಕಂಡು ಬಿಗ್ ಸ್ಕ್ರೀನ್ ನಲ್ಲಿ ಅವರನ್ನು ತೋರಿಸಿದ್ದರು. ಈ ಹಿಂದೆ ಆರ್‍ಸಿಬಿ ಗರ್ಲ್‍ಗೆ ಫಿದಾ ಆಗಿದ್ದ ಮಂದಿ ಇಂದು ಹಿರಿಯ ಅಭಿಮಾನಿಯ ಉತ್ಸಾಹ ಕಂಡು ಮೆಚ್ಚಿಕೊಂಡಿದ್ದಾರೆ.
Advertisement
#WATCH 87 year old Charulata Patel who was seen cheering for India in the stands during #BANvIND match: India will win the world cup. I pray to Lord Ganesha that India wins. I bless the team always. #CWC19 pic.twitter.com/lo3BtN7NtD
— ANI (@ANI) July 2, 2019
Advertisement
ಟೀಂ ಇಂಡಿಯಾ ಕ್ರಿಕೆಟ್ ಆಟಗಾರರು ತಮಗೆ ಮಕ್ಕಳಂತೆ ಎಂದಿರುವ 87 ವರ್ಷದ ಅಜ್ಜಿ, ತಂಡಕ್ಕೆ ಬೆಂಬಲ ನೀಡಲು ಇಲ್ಲಿಗೆ ಬಂದಿದ್ದೇನೆ. ಗಣೇಶನಲ್ಲಿ ಪ್ರಾರ್ಥನೆ ಮಾಡಿದ್ದು, ಖಂಡಿತವಾಗಿಯೂ ಭಾರತ ಗೆಲ್ಲಲಿದೆ ಎಂದಿದ್ದಾರೆ. ಕೈಯಲ್ಲೊಂದು ಪೀಪಿ ಊದುತ್ತಾ ಕ್ರಿಕೆಟ್ ಮೇಲಿನ ಪ್ರೀತಿಯನ್ನು ಪ್ರತಿಬಿಂಬಿಸುವಂತಿರುವ ಇವರಿಗೆ ಅಭಿಮಾನಿಗಳು ಹ್ಯಾಟ್ಸಫ್ ಹೇಳುತ್ತಿದ್ದಾರೆ.
Advertisement
#WATCH Birmingham: 87 years old Charulata Patel who was seen cheering for India in the stands during #BANvIND match, waves the tricolor and blows a vuvuzela. #CWC19 pic.twitter.com/oVoOhbjFyp
— ANI (@ANI) July 2, 2019
Advertisement
ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದು, ವಿಶ್ವಕಪ್ ಟೂರ್ನಿಯೊಂದರಲ್ಲೇ 4 ಶತಕ ಸಿಡಿಸಿದ ಮೊದಲ ಟೀಂ ಇಂಡಿಯಾ ಆಗಿದ್ದಾರೆ. ಈ ಹಿಂದೆ ಶ್ರೀಲಂಕಾದ ಕುಮಾರ್ ಸಂಗಾಕರ ಅವರು ಒಂದೇ ಟೂರ್ನಿಯಲ್ಲಿ 4 ಶತಕ ಸಿಡಿಸಿದ್ದರು. ಅಲ್ಲದೇ ಪಂದ್ಯದಲ್ಲಿ ಮೊದಲ ವಿಕೆಟ್‍ಗೆ 180 ರನ್ ಸಿಡಿಸಿದ್ದ ರೋಹಿತ್, ಕೆಎಲ್ ರಾಹುಲ್ ಟೀಂ ಇಂಡಿಯಾ ಪರ ವಿಶ್ವಕಪ್ ಕ್ರಿಕೆಟ್‍ನಲ್ಲಿ ಮೊದಲ ವಿಕೆಟ್ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಬರೆದರು. ನಾಲ್ಕು ವರ್ಷಗಳ ಹಿಂದೆ ರೋಹಿತ್, ಧವನ್ ಜೋಡಿ ದಾಖಲೆ ಸೇರಿದಂತೆ ಈ ಬಾರಿಯ ವಿಶ್ವಕಪ್‍ನಲ್ಲಿ 160 ರನ್ ಜೊತೆಯಾಟ ನೀಡಿದ್ದ ಜಾಸನ್ ರಾಯ್-ಜಾನಿ ಬ್ರಿಸ್ಟೋರನ್ನು ಹಿಂದಿಕ್ಕಿದ್ದಾರೆ.
She is going to be a internet sensation…❣️❣️❣️
What cricket is in India…❣️????#INDvBAN pic.twitter.com/DJEBzVG2pp
— Sanchit (@SanchitSahu10) July 2, 2019
Well done cameraman, finally captured real beauty #INDvBAN pic.twitter.com/mnRtuCRG3j
— The Indian Citizen (@tic_speaks) July 2, 2019