ಬೆಂಗಳೂರು: ವಿಶ್ವಕಪ್‍ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸುತ್ತಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾ 4 ಶತಕ ಸಿಡಿಸಿ ಮಿಂಚುತ್ತಿದ್ದಾರೆ. ಮಂಗಳವಾರ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ ರೋಹಿತ್, ಈ ವೇಳೆ ಅವರು ಹೊಡೆದ ಸಿಕ್ಸರ್ ಅಭಿಮಾನಿಯನ್ನು ಗಾಯಗೊಳಿಸಿತ್ತು. ಪಂದ್ಯದ ನಂತರ ಅ ಅಭಿಮಾನಿಗೆ ಆಟೋಗ್ರಾಫ್ ನೀಡಿ ರೋಹಿತ್ ಮಾನವೀಯತೆ ಮೆರೆದಿದ್ದಾರೆ.
ಬಾಂಗ್ಲಾ ನಡುವಿನ ಪಂದ್ಯದಲ್ಲಿ ಭಾರತ 28 ರನ್‍ಗಳ ಅಂತರದಲ್ಲಿ ಗೆದ್ದು ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ. ಈ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಮಾಡಿದ ರೋಹಿತ್ ಶರ್ಮಾ ಕೇವಲ 92 ಎಸೆತಗಳಲ್ಲಿ 102 ರನ್ (7 ಬೌಂಡರಿ, 5 ಸಿಕ್ಸರ್) ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಈ ಮೂಲಕ ಟೂರ್ನಿಯಲ್ಲಿ 3 ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
Advertisement
She got hit by a @ImRo45 maximum and the opener was kind enough to check on her and give her a signed hat.#CWC19 pic.twitter.com/KqFqrpC7dS
— BCCI (@BCCI) July 2, 2019
Advertisement
ಈ ವೇಳೆ ರೋಹಿತ್ ಬಾರಿಸಿದ ಸಿಕ್ಸ್ ಒಂದು ಪಂದ್ಯ ನೋಡಲು ಬಂದಿದ್ದ ಅಭಿಮಾನಿ ಮೀನಾ ಎಂಬುವವರಿಗೆ ಬಡಿದಿತ್ತು. ಇದನ್ನು ಗಮನಿಸಿದ ಭಾರತ ಉಪನಾಯಕ ರೋಹಿತ್ ಶರ್ಮಾ ಅವರು ಪಂದ್ಯದ ಬಳಿಕ ಮೀನಾ ಅವರನ್ನು ಭೇಟಿಯಾಗಿ ತಾನು ಆಟೋಗ್ರಾಫ್ ಹಾಕಿದ ಹಳದಿ ಬಣ್ಣದ ಟೋಪಿಯೊಂದನ್ನು ನೀಡಿದ್ದಾರೆ.
Advertisement
Player of the Match Rohit Sharma celebrates the win with a special fan ???? #CWC19 | #BANvIND pic.twitter.com/bz7Sjgo7jh
— ICC Cricket World Cup (@cricketworldcup) July 2, 2019
Advertisement
ಇದಕ್ಕೂ ಮುನ್ನ ಅವರು ಬಾಂಗ್ಲಾ ವಿರುದ್ಧದ ಪಂದ್ಯವನ್ನು ನೋಡಲು ಬಂದಿದ್ದ ಭಾರತೀಯ ಕ್ರಿಕೆಟ್‍ನ ಹಿರಿಯ ಅಭಿಮಾನಿ 87 ವರ್ಷದ ಚಾರುಲತಾ ಅವರನ್ನು ಭೇಟಿ ಮಾಡಿ ಅವರನ್ನು ತಬ್ಬಿಕೊಂಡು ಅವರ ಆಶೀರ್ವಾದವನ್ನು ಕೂಡ ಪಡೆದುಕೊಂಡಿದ್ದರು.
ರೋಹಿತ್ ದಾಖಲೆ
ಬಾಂಗ್ಲಾ ನಡುವಿನ ಪಂದ್ಯದಲ್ಲಿ 92 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 7 ಬೌಂಡರಿ, 5 ಸಿಕ್ಸರ್ ಗಳ ನೆರವಿನಿಂದ 104 ರನ್ ಗಳಿಸಿದರು. ಏಕದಿನ ಕ್ರಿಕೆಟ್ ನಲ್ಲಿ 26 ಶತಕಗಳನ್ನು ಪೂರ್ಣಗೊಳಿಸಿದ ರೋಹಿತ್, ಟೂರ್ನಿಯಲ್ಲಿ 500 ಪ್ಲಸ್ ರನ್ ಗಳಿಸಿದ ಭಾರತ ಆಟಗಾರ ಎನಿಸಿಕೊಂಡರು. ಅಲ್ಲದೇ ವಿಶ್ವಕಪ್ ಟೂರ್ನಿಯಲ್ಲಿ 4 ಶತಕ ಸಿಡಿಸಿದ 2ನೇ ಆಟಗಾರ ಹಾಗೂ ಭಾರತ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
Rohit Sharma and Shakib Al Hasan, two of the standout players of #CWC19 so far.
Their respective records with the bat are brilliant ???? ???? #BANvIND pic.twitter.com/anyLCBIGbz
— ICC Cricket World Cup (@cricketworldcup) July 2, 2019
ಈ ಬಾರಿಯ ಟೂರ್ನಿಯಲ್ಲಿ 544 ರನ್ ಗಳಿಸಿರುವ ರೋಹಿತ್ ಟಾಪ್ ರನ್ ಸ್ಕೋರರ್ ಪಟ್ಟಿಯಲ್ಲೂ ಮೊದಲ ಸ್ಥಾನ ಪಡೆದಿದ್ದು, ಬಾಂಗ್ಲಾದ ಶಕೀಬ್ ಅಲ್ ಹಸನ್ 542 ರನ್ ಗಳಿಸಿ ಎರಡನೇ ಸ್ಥಾನ ಪಡೆದಿದ್ದಾರೆ. 516 ರನ್ ಗಳಿಸಿರುವ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 3ನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ 2003ರಲ್ಲಿ ನಡೆದ ಟೂರ್ನಿಯಲ್ಲಿ 673 ರನ್ ಗಳಿಸಿ ದಾಖಲೆ ನಿರ್ಮಿಸಿದ್ದ ಸಚಿನ್ ಅವರನ್ನು ಹಿಂದಿಕ್ಕಲು ರೋಹಿತ್‍ಗೆ ಕೇವಲ 129 ರನ್ ಅಗತ್ಯವಿದೆ. ವಿಶ್ವಕಪ್ ಟೂರ್ನಿಯಲ್ಲಿ ವೇಗವಾಗಿ ಅಂದರೆ 15 ಇನ್ನಿಂಗ್ಸ್ ಗಳಲ್ಲಿ 5 ಶತಕ ಸಿಡಿಸಿದ ದಾಖಲೆಗೆ ರೋಹಿತ್ ಪಾತ್ರರಾಗಿದ್ದಾರೆ.