ಲಂಡನ್: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಎಂಎಸ್ ಧೋನಿ ಬ್ಯಾಟಿಂಗ್ ಕುರಿತ ವಿಶ್ಲೇಷಣೆಗಳು ನಡೆಯುತ್ತಿವೆ. ಅಲ್ಲದೇ ವಿಶ್ವಕಪ್ ಟೂರ್ನಿ ಬಳಿಕ ಧೋನಿ ನಿವೃತ್ತಿ ನೀಡಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಇದೇ ವೇಳೆ ಟೂರ್ನಿಯ ಪ್ರತಿ ಪಂದ್ಯದಲ್ಲೂ ಧೋನಿ ತಮ್ಮ ಬ್ಯಾಟ್ ಮೇಲಿನ ಸ್ಟಿಕರ್ ಬದಲಾಯಿಸುತ್ತಿರುವುದು ಅಭಿಮಾನಿಗಳು ಗಮನ ಸೆಳೆದಿದೆ.
ಧೋನಿ ಎಸ್‍ಎಸ್, ಎಸ್‍ಜಿ, ಬಾಸ್ ಸ್ಟಿಕ್ಕರ್ ಗಳನ್ನು ಬಳಸುತ್ತಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ಕ್ರಿಕೆಟ್ ಆಟಗಾರರು ಪ್ರಾಯೋಜಕತ್ವ ಭಿನ್ನವಾಗಿರುತ್ತದೆ. ಇದಕ್ಕಾಗಿ ಆಟಗಾರರಿಗೆ 4 ರಿಂದ 5 ಕೋಟಿ ಹಣವನ್ನು ನೀಡಲಾಗುತ್ತದೆ. ಸದ್ಯ ಟೂರ್ನಿಯಲ್ಲಿ ಕೊಹ್ಲಿ ಎಂಆರ್‍ಎಫ್ ಸುಮಾರು 9 ಕೋಟಿ ರೂ.ಗಳನ್ನು ನೀಡುತ್ತಿದೆ ಎನ್ನಲಾಗಿದೆ.
Advertisement
Advertisement
ಮೊದಲಿಗೆ ಸ್ಪಾರ್ಟನ್ ಸಂಸ್ಥೆಯ ಲೋಗೋ ಬಳಸುತ್ತಿದ್ದ ಧೋನಿ ಆ ಬಳಿಕ ಅದನ್ನು ಕೈಬಿಟ್ಟಿದ್ದರು. ಸದ್ಯ ಧೋನಿ ವಿವಿಧ ಸಂಸ್ಥೆಗಳ ಹೆಸರಿನ ಸ್ಟಿಕರ್ ಬಳಸುತ್ತಿರುವ ಹಿಂದಿನ ನಿಜಾಂಶವನ್ನು ಅವರ ಆಪ್ತ ಗೆಳೆಯ, ಮ್ಯಾನೇಜರ್ ಅರುಣ್ ಪಾಂಡೆ ರಿವೀಲ್ ಮಾಡಿದ್ದಾರೆ.
Advertisement
ಧೋನಿ ಆರಂಭದ ಜೀವನದಲ್ಲಿ ಸಹಾಯ ಮಾಡಿದ, ಆ ಬಳಿಕ ತಮ್ಮ ಏಳಿಗೆಯೊಂದಿಗೆ ಇದ್ದ ಸಂಸ್ಥೆಗಳ ಮೇಲಿರುವ ಕೃತಜ್ಞತೆಯ ದೃಷ್ಟಿಯಿಂದ ಎಲ್ಲ ಸಂಸ್ಥೆಗಳ ಸ್ಟಿಕ್ಕರ್ ಬಳಸುತ್ತಿದ್ದಾರೆ ಎಂದಿದ್ದಾರೆ. ಇದಕ್ಕೆ ಧೋನಿ ಒಂದು ರೂಪಾಯಿಯನ್ನು ಪಡೆಯುತ್ತಿಲ್ಲ ಎಂಬುವುದು ವಿಶೇಷವಾಗಿದೆ.
Advertisement
ಧೋನಿಗೆ ಸದ್ಯ ಹಣದ ಅಗತ್ಯವಿಲ್ಲ. ಆದ್ದರಿಂದ ತನ್ನದೇ ರೀತಿಯಲ್ಲಿ ಜೀವನದಲ್ಲಿ ನೆರವಾದವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಅದರಲ್ಲೂ ವಾಂಫೈರ್ ಸಂಸ್ಥೆಯ ಬಗ್ಗೆ ಧೋನಿಯ ಬಯೋಗ್ರಾಫಿಯಲ್ಲೂ ತೋರಿಸಲಾಗಿದೆ ಎಂದು ಪಾಂಡೆ ತಿಳಿಸಿದ್ದಾರೆ. ಸಾಮಾನ್ಯವಾಗಿ ಧೋನಿ ಒಂದು ಪಂದ್ಯಕ್ಕೆ ಬ್ಯಾಟ್ ಮೇಲೆ ಸಂಸ್ಥೆಯ ಸ್ಟಿಕರ್ ಹಾಕಿಕೊಳ್ಳಲು 10 ರಿಂದ 15 ಲಕ್ಷ ರೂ. ಪಡೆಯುತ್ತಾರೆ. ವಿಶ್ವಕಪ್ ಕ್ರಿಕೆಟ್‍ನಲ್ಲಿ ಎಲ್ಲಾ ಆಟಗಾರರಿಗಿಂತ ಭಿನ್ನವಾಗಿ ಯೋಚಿಸುವ ಧೋನಿ ನಡೆ ಅಭಿಮಾನಿಗಳ ಮೆಚ್ಚುಗೆಗೆ ಕಾರಣರಾಗಿದ್ದಾರೆ. ಇದನ್ನೂ ಓದಿ: ವಿಶ್ವಕಪ್ ಬಳಿಕ ಧೋನಿ ನಿವೃತ್ತಿ?