ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ಅವರು ಭಾರತೀಯ ಸೇನೆ ಮೇಲೆ ಅಪಾರವಾದ ಅಭಿಮಾನವನ್ನು ಇಟ್ಟುಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಸೇನಾ ಲಾಂಛನ ಇರುವ ಗ್ಲೌಸ್ ಧರಿಸಿ ಆಟವಾಡಿದ್ದಾರೆ.
ದಕ್ಷಿಣ ಆಫ್ರಿಕಾ ತಂಡವನ್ನು ಬಗ್ಗು ಬಡಿದ ಭಾರತ ವಿಶ್ವಕಪ್‍ನ ತನ್ನ ಮೊದಲ ಪಂದ್ಯದಲ್ಲೇ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಧೋನಿ ಅವರು ಮಾಡಿದ ಮಿಂಚಿನಂತಹ ಸ್ಟಂಪ್ ಮಾಡಿ ಆಂಡಿಲೆ ಫೆಹ್ಲುಕ್ವವೋ ಅವರನ್ನು ಬಲಿ ಪಡೆದರು. ಈ ಸಮಯದಲ್ಲಿ ಧೋನಿ ಅವರು ಧರಿಸಿದ್ದ ಗ್ಲೌಸ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
MS Dhoni wear Regimental dagger(Blidan Batch) symbol of the Indian army Para special forces on his gloves.
Love for Indian Defence forces…???? pic.twitter.com/ikEtXW76Yi
— Ashok Singh Choudhary (@ashok_Singh05) June 5, 2019
ವಿಕೆಟ್ ಕೀಪಿಂಗ್ ಗ್ಲೌಸ್‍ನಲ್ಲಿ ಭಾರತೀಯ ಸೇನೆಯ ವಿಶೇಷ ಪಡೆಯಾದ ಪ್ಯಾರಾಚೂಟ್ ರೆಜಿಮೆಂಟ್‍ನ ಬಾಣದ ಗುರುತು ಇರುವ ಲಾಂಛನ ಇರುವುದನ್ನು ನೋಡಿದ ಧೋನಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
This is why we love u @msdhoni. Thanks to show your love and support for our military PARA SF. Rounded is the regimental dagger insignia of the Indian Para Special Forces on Dhoni’s gloves. pic.twitter.com/NgoAriDUxH
— Anuj Singh ???????? (@myself_Anuz) June 5, 2019
ಧೋನಿ ಅವರಿಗೆ ಸೇನೆಯ ಬಗ್ಗೆ ಬಹಳ ಅಭಿಮಾನವಿದ್ದು, ಅವರು 2011 ಪ್ಯಾರಾಚೂಟ್ ರೆಜಿಮೆಂಟ್‍ನ ಸಮವಸ್ತ್ರ ಧರಿಸಿ ಸೇನಾ ನೆಲೆಯಲ್ಲಿ ಸೈನಿಕರ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 2015 ರಲ್ಲಿ ಪ್ಯಾರಾ ಬ್ರಿಗೇಡ್‍ನಲ್ಲಿ ತರಬೇತಿಯನ್ನು ಸಹ ಧೋನಿ ಪಡೆದಿದ್ದಾರೆ.
One more @ShivAroor???? pic.twitter.com/v0kuE1ag1h
— Bhavesh Patil (@Heisenberg9078) June 5, 2019