ಬರ್ಮಿಗ್ಹ್ಯಾಮ್: ವಿಶ್ವದ ನಂಬರ್ ಒನ್ ಬೌಲರ್ ಜಸ್ಪ್ರಿತ್ ಬುಮ್ರಾ ತನ್ನ ಡೆಡ್ಲಿ ಯಾರ್ಕರ್ ಎಸೆತಗಳ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಮಂಗಳವಾರ ನಡೆದ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ಮಾಡಿದ ಬುಮ್ರಾ ಭಾರತ ಸೆಮಿಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ 28 ರನ್ ಅಂತರದಲ್ಲಿ ಭಾರತ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ತನ್ನ ಡೆಡ್ಲಿ ಯಾರ್ಕರ್ ಮೂಲಕ ಬಾಂಗ್ಲಾದೇಶಿ ಆಟಗಾರನ್ನು ಕಾಡಿದ ಬುಮ್ರಾ ತನ್ನ ನಿಗದಿತ 10 ಓವರ್ ಗಳಲ್ಲಿ 55 ರನ್ ನೀಡಿ 4 ವಿಕೆಟ್ ಕಿತ್ತು ಭಾರತಕ್ಕೆ ಜಯವನ್ನು ತಂದುಕೊಟ್ಟರು.
Advertisement
BOOM Boy got no chill – No need for a rest reckons @Jaspritbumrah93 #TeamIndia #CWC19 #BANvIND pic.twitter.com/HPlSRb4yoI
— BCCI (@BCCI) July 2, 2019
Advertisement
ಮಂಗಳವಾರ ನಡೆದ ಪಂದ್ಯದಲ್ಲಿ ಬಾಂಗ್ಲಾ ಗೆಲ್ಲಲು ಕೊನೆಯ ಮೂರು ಓವರ್ ನಲ್ಲಿ 36 ರನ್‍ಗಳ ಅವಶ್ಯಕತೆ ಇದ್ದಾಗ ಭಾರತ ಒಂದು ಹಂತದಲ್ಲಿ ಅಪಾಯಕ್ಕೆ ಸಿಲುಕಿತ್ತು. ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ಬಾಂಗ್ಲಾ ಬ್ಯಾಟ್ಸ್‍ಮನ್ ಮೊಹಮ್ಮದ್ ಸೈಫುದ್ದೀನ್ ಅವರು ಕ್ರೀಸ್‍ನಲ್ಲಿ ಉತ್ತಮವಾಗಿ ಆಡುತ್ತಿದ್ದ ಕಾರಣ ಸೋಲುವ ಭೀತಿ ಎದುರಾಗಿತ್ತು. ಈ ವೇಳೆ ನಾಯಕ ವಿರಾಟ್ ಕೊಹ್ಲಿ ಅವರು ಬುಮ್ರಾಗೆ ಪ್ರಮುಖ 48 ನೇ ಓವರ್ ಬೌಲ್ ಮಾಡಲು ನೀಡಿದರು. ತಮ್ಮ ನಾಯಕ ನಿರೀಕ್ಷೆಗೆ ತಕ್ಕಂತೆ ಬೌಲ್ ಮಾಡಿದ ಬುಮ್ರಾ ಅ ಓವರ್ ನಲ್ಲಿ ಯಾರ್ಕರ್ ಮೂಲಕ 2 ವಿಕೆಟ್ ಪಡೆದು ಭಾರತವನ್ನು ಗೆಲ್ಲಿಸಿದರು.
Advertisement
Advertisement
ಈಗ ಈ ಮಾರಕ ಯಾರ್ಕರ್ ಗಳ ಹಿಂದಿನ ರಹಸ್ಯ ಹೇಳಿರುವ ಬುಮ್ರಾ ಅವರು ನನ್ನ ನಿಖರವಾದ ಯಾರ್ಕರ್ ದಾಳಿಗೆ ನಾನು ಮಾಡುವ ಅಭ್ಯಾಸ ಸಹಾಯ ಮಾಡುತ್ತದೆ, ನೆಟ್ಸ್ ನಲ್ಲಿ ಹೆಚ್ಚು ಯಾರ್ಕರ್ ಎಸೆಯುತ್ತೇನೆ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಬುಮ್ರಾ,”ನಾನು ನೆಟ್ಸ್‍ನಲ್ಲಿ ಯಾರ್ಕರ್ ಎಸೆತಗಳನ್ನು ಹೆಚ್ಚು ಎಸೆಯಲು ಪ್ರಯತ್ನ ನಡೆಸುತ್ತೇನೆ. ಹೀಗೆ ಮಾಡುವುದರಿಂದ ಯಾರ್ಕರ್ ಎಸೆತಗಳ ಮೇಲೆ ನಮಗೆ ಒಳ್ಳೆಯ ಹಿಡಿತ ಸಿಗುತ್ತದೆ. ಅದನ್ನು ತುಂಬಾ ಸಲ ಅಭ್ಯಾಸ ಮಾಡದೇ ಇದ್ದರೇ ಯಾರ್ಕರ್ ಎಸೆತವನ್ನು ಕರಗತ ಮಾಡಿಕೊಳ್ಳಲು ಸಾಧ್ಯವಿಲ್ಲ”ಸ ಎಂದು ಹೇಳಿದ್ದಾರೆ.
ನಾನು ಯಾವಗಲೂ ಆಟವಾಡಲು ಎದುರು ನೋಡುತ್ತಿರುತ್ತೇನೆ ಮತ್ತು ನಾವು ಆಡುವ ಹೆಚ್ಚಿನ ಸಂಖ್ಯೆಯ ಪಂದ್ಯಗಳಲ್ಲಿ ನಾವು ಹೆಚ್ಚು ಅನಂದಪಡುತ್ತೇವೆ. ಇದು ನನ್ನ ಮೊದಲ ವಿಶ್ವಕಪ್ ಅದ್ದರಿಂದ ಸಾಧ್ಯವಾದಷ್ಟು ಆಟವಾಡಬೇಕು ಎನ್ನುವ ನಿರೀಕ್ಷೆಯಲ್ಲಿದ್ದೇನೆ ಎಂದು ತಿಳಿಸಿದರು.
ಬುಮ್ರಾ ಯಾರ್ಕರ್ ಅಭ್ಯಾಸದ ವೇಳೆ ಆಲ್‍ರೌಂಡರ್ ವಿಜಯ್ ಶಂಕರ್ ಗಾಯಗೊಂಡಿದ್ದು, ಈಗ ಟೂರ್ನಿಯಿಂದ ಹೊರಬಿದ್ದಿದ್ದಾರೆ.