ಮ್ಯಾಂಚೆಸ್ಟರ್: ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಭರ್ಜರಿ ಶತಕ (140 ರನ್, 78 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ರಾಹುಲ್, ನಾಯಕ ಕೊಹ್ಲಿರ ಅರ್ಧ ಶತಕಗಳ ನೆರವಿನಿಂದ ಟೀಂ ಇಂಡಿಯಾ 46.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 305 ರನ್ ಗಳಿಸಿದ್ದು, ಈ ನಡುವೆ ವರುಣ ಪಂದ್ಯಕ್ಕೆ ಅಡ್ಡಿ ಪಡಿಸಿದ್ದಾನೆ.
Advertisement
ಧವನ್ ಅನುಪಸ್ಥಿತಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿ ತಂಡಕ್ಕೆ ನಿಧಾನಗತಿಯ ಆರಂಭ ನೀಡಿದರು. ಪಾಕ್ ಬೌಲರ್ ಗಳ ಕೆಟ್ಟ ಎಸೆತಗಳನ್ನು ದಂಡಿಸುತ್ತ ಸಾಗಿದ ಈ ಜೋಡಿ ಮೊದಲ 10 ಓವರ್ ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 53 ರನ್ ಕಲೆ ಹಾಕಿತ್ತು. ಈ ವೇಳೆಗೆ ಪಾಕಿಸ್ತಾನದ ಬೌಲರ್ ಮೊಹಮ್ಮದ್ ತಹೀರ್ ಪಿಚ್ ನ ಮಧ್ಯ ಭಾಗದಲ್ಲಿ ಓಡಾಡಿದ ಪರಿಣಾಮ 2 ಬಾರಿ ಅಂಪೈರ್ ರಿಂದ ಎಚ್ಚರಿಕೆ ಪಡೆದಿದ್ದರು. ಅಲ್ಲದೇ ಟೀಂ ಇಂಡಿಯಾದ ಇಬ್ಬರು ಆರಂಭಿಕರನ್ನು ರನೌಟ್ ಮಾಡುವ ಎರಡು ಅವಕಾಶಗಳನ್ನು ಪಾಕ್ ಕೈ ಚೆಲ್ಲಿತ್ತು.
Advertisement
Advertisement
ರೋಹಿತ್ ಬಿರುಸಿನ ಆಟಕ್ಕೆ ಮುಂದಾದರೆ ರಾಹುಲ್ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಇಬ್ಬರು ಆಟಗಾರರು ಜುಗಲ್ ಬಂದಿ ನಡೆಸಿ ಪಾಕ್ ಬೌಲರ್ ಗಳ ಬೆವರಿಳಿಸಿದರು. ತಂಡದ ಮೊದಲ 50 ರನ್, 60 ಎಸೆಗಳಲ್ಲಿ ಬಂದರೆ ಮಂದಿನ 50 ರನ್ 45 ಎಸೆತಗಳಲ್ಲಿ ಹರಿದು ಬಂತು. 17.3 ಓವರ್ ಗಳಲ್ಲಿ ಭಾರತ 100 ರನ್ ಗಡಿದಾಡಿತ್ತು. ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಪಾಕಿಸ್ತಾನದ ವಿರುದ್ದ ಟೀಂ ಇಂಡಿಯಾ ಆರಂಭಿಕ ಜೋಡಿ ಶತಕ ಜೊತೆಯಾಟ ನೀಡಿದ ಸಾಧನೆ ಮಾಡಿತು. ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ರಾಹುಲ್ 78 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ನೆರವಿನಿಂದ 57 ರನ್ ಗಳಿಸಿ ವಹಾಬ್ ರಿಯಾಜ್‍ಗೆ ವಿಕೆಟ್ ಒಪ್ಪಿಸಿದರು.
Advertisement
Rohit Sharma brought up his fifty in Manchester and is now looking to convert it into a hundred… ???? https://t.co/Dc5xQebYCh
— ICC (@ICC) June 16, 2019
ರೋ’ಹಿಟ್’: ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಅಜೇಯ 122 ರನ್ ಹಾಗೂ ಆಸ್ಟ್ರೇಲಿಯಾ ವಿರುದ್ಧ 57 ರನ್ ಗಳಿಸಿದ್ದ ರೋಹಿತ್ ಶರ್ಮಾ ಪಾಕಿಸ್ತಾನದ ವಿರುದ್ಧವೂ ಭರ್ಜರಿ ಬ್ಯಾಟಿಂಗ್ ನಡೆಸಿದರು. 34 ಎಸೆತಗಳಲ್ಲೇ 50 ರನ್ ಪೂರೈಸಿದ ರೋಹಿತ್ 85 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದರು. ಆ ಮೂಲಕ ವೃತ್ತಿಯ 24ನೇ ಶತಕ, 2019ರ ಟೂನಿಯಲ್ಲಿ 2ನೇ ಶತಕ ಸಿಡಿಸಿದರು. ಸಚಿನ್ (6), ಗಂಗೂಲಿ (5) ಮತ್ತು ಶಿಖರ್ ಧವನ್ (3) ಬಳಿಕ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯ ಆಟಗಾರರಾಗಿದ್ದಾರೆ.
ಉತ್ತಮ ಆಟದ ಮೂಲಕ ಮುನ್ನಗುತ್ತಿದ್ದ ರೋಹಿತ್ ಶರ್ಮಾ ವಿಕೆಟನ್ನು ವಯಾಬ್ ರಿಯಾಜ್ ಪಡೆದು ಪಾಕಿಸ್ತಾನಕ್ಕೆ ಬಹುದೊಟ್ಟ ಬ್ರೇಕ್ ನೀಡಿದರು. ಇದಕ್ತ್ತಕೂ ಮುನ್ನ ರೋಹಿತ್ ರನ್ನು ಕೂಡಿಕೊಂಡ ನಾಯಕ ವಿರಾಟ್ ಕೊಹ್ಲಿ ತಂಡದ ಸ್ಕೋರ್ ಹೆಚ್ಚಿಸಲು ರಕ್ಷಣಾತ್ಮಕವಾಗಿ ಆಡುತ್ತ ಸಾಗಿದರು. 2ನೇ ವಿಕೆಟ್ 98 ರನ್ ಜೊತೆಯಾಟ ನೀಡಿದರು. ಕೊಹ್ಲಿ 51 ಎಸೆತಗಳಲ್ಲಿ ಅರ್ಧ ಶತಕ ಪೂರ್ಣಗೊಳಿಸದರೆ, ಆ ಬಳಿಕ ಬಂದ ಹಾರ್ದಿಕ್ ಪಾಂಡ್ಯ 19 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ನಿಂದ 26 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
100 for Rohit Sharma!
His second in just three #CWC19 innings ???? #CWC19 | #TeamIndia | #INDvPAK pic.twitter.com/KKMq1Ft1MG
— ICC Cricket World Cup (@cricketworldcup) June 16, 2019
ಅಂತಿಮ ಓವರ್ ಗಳಲ್ಲಿ ಬಿರುಸಿನ ಆಟಕ್ಕೆ ಮುಂದಾದ ನಾಯಕ ಕೊಹ್ಲಿ ಟೀಂ ಇಂಡಿಯಾ ಮೊತ್ತವನ್ನು 300 ಗಡಿ ದಾಟಲು ಕಾರಣರಾದರು. ಇತ್ತ ಧೋನಿ 2 ಎಸೆತಗಳಲ್ಲಿ 1 ರನ್ ಗಳಿಸಿ ಔಟಾದರು. ಕೊಹ್ಲಿ 62 ಎಸೆತಗಳಲ್ಲಿ 71 ರನ್ ಗಳಿಸಿದ್ದು, 6 ಎಸೆತಗಳನ್ನು ಎದುರಿಸಿರುವ ವಿಜಯ್ ಶಂಕರ್ 3 ರನ್ ಗಳಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಟಾಸ್ ವಿಶೇಷ: ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಇಂಡೋ, ಪಾಕ್ ಕದನದಲ್ಲಿ ಇದುವರೆಗೂ ಇತ್ತಂಡಗಳು 6 ಬಾರಿ ಮುಖಾಮುಖಿಯಾಗಿತ್ತು. 6 ಪಂದ್ಯಗಳಲ್ಲಿ ಭಾರತ ಗೆಲುವು ಪಡೆದಿದ್ದರೆ, ಈ ಪಂದ್ಯಗಳಲ್ಲಿ ಟಾಸ್ ಗೆದ್ದ ನಾಯಕರು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆದರೆ ಮೊದಲ ಬಾರಿಗೆ ಪಾಕ್ ನಾಯಕ ಸರ್ಫರಾಜ್ ಅಹ್ಮದ್ ಟಾಸ್ ಗೆದ್ದು, ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು.
#ViratKohli scores his 11,000th ODI run!
He reaches the landmark in 54 fewer innings than anyone else ???? pic.twitter.com/mebDOLJESs
— ICC Cricket World Cup (@cricketworldcup) June 16, 2019