ಕ್ರಿಕೆಟ್ ಮಕ್ಕಳ ಜೀವನದಲ್ಲಿ ಬದಲಾವಣೆಯನ್ನು ತರುತ್ತದೆ: ವಿರಾಟ್ ಕೊಹ್ಲಿ

Public TV
2 Min Read
virat

– ಕ್ರಿಕೆಟ್ ಮನುಷ್ಯತ್ವವನ್ನು ಸುಧಾರಿಸುವ ಶಿಕ್ಷಕ

ಲಂಡನ್: ಕ್ರಿಕೆಟ್ ಮಕ್ಕಳ ಜೀವನದಲ್ಲಿ ಬದಲಾವಣೆಯನ್ನು ತರುತ್ತದೆ ಮತ್ತು ಒಂದು ಉತ್ತಮ ಶಿಕ್ಷಕನಂತೆ ಆದು ಮನುಷ್ಯತ್ವವನ್ನು ಸುಧಾರಿಸುತ್ತದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ, ರಿಷಭ್ ಪಂತ್, ಕೆ.ಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಅವರು ಸೌಥಾಂಪ್ಟನ್‍ನಲ್ಲಿ ಅಂತಾರಾಷ್ಟೀಯ ಕ್ರಿಕೆಟ್ ಕೌನ್ಸಿಲ್ ಆಯೋಜಿಸಿದ್ದ ಕ್ರಿಕೆಟ್ ಕ್ಲಿನಿಕ್ ಎಂಬ ಕಾರ್ಯಕ್ರಮದಲ್ಲಿ ಮಕ್ಕಳ ಜೊತೆ ಕಾಲ ಕಳೆದಿದ್ದು, ಆಟೋಗ್ರಾಫ್ ನೀಡಿ ಮಕ್ಕಳೊಂದಿಗೆ ಸಂವಹನ ನಡೆಸಿದ್ದಾರೆ.

ಈ ಕಾರ್ಯಕ್ರಮದ ನಂತರ ಮಾತನಾಡಿರುವ ಕೊಹ್ಲಿ, ಕ್ರೀಡೆಯ ಉತ್ಸಾಹವನ್ನು ಮಕ್ಕಳ ಜೊತೆ ಹಂಚಿಕೊಂಡಿದ್ದು ತುಂಬಾ ಹೆಮ್ಮೆ ಎನಿಸಿತು. ಕ್ರಿಕೆಟ್ ಒಂದು ಉತ್ತಮ ಶಿಕ್ಷಕರಂತೆ ಆದು ಮನುಷ್ಯತ್ವವನ್ನು ಸುಧಾರಿಸುತ್ತದೆ ಎಂದು ಒತ್ತಿ ಹೇಳಿ, ಅವರು ಬಾಲ್ಯದಲ್ಲಿ ಕ್ರಿಕೆಟ್ ಆಡಿದ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

virat show21 21 06 2019

ನನ್ನ ಬಾಲ್ಯದ ದಿನಗಳಲ್ಲಿ ಈ ರೀತಿಯಲ್ಲೇ ಪಾರ್ಕಿನಲ್ಲಿ ಆಟವಾಡಿ ಮೋಜು ಮಸ್ತಿ ಮಾಡುತ್ತಿದೆ. ಕ್ರಿಕೆಟ್ ಮಕ್ಕಳ ಜೀವನವನ್ನು ಸುಧಾರಿಸುತ್ತದೆ ಮತ್ತು ಮನುಷ್ಯತ್ವವನ್ನು ಸುಧಾರಿಸುತ್ತದೆ ಎಂದು ನಾನು ನಂಬಿದ್ದೇನೆ. ಕ್ರಿಕೆಟ್ ಜೀವನದ ಏರಿಳಿತಗಳನ್ನು ಅರ್ಥ ಮಾಡಿಸುತ್ತದೆ ಮತ್ತು ಕಷ್ಟದ ಸಮಯವನ್ನು ಹೇಗೆ ಎದುರಿಸಬೇಕು ಎಂಬುದನ್ನು ಕಲಿಸುತ್ತದೆ. ಅದ್ದರಿಂದ ನನ್ನ ಪ್ರಕಾರ ಕ್ರಿಕೆಟ್ ಉತ್ತಮ ಶಿಕ್ಷಕ ಎಂದು ಹೇಳಿದ್ದಾರೆ.

Kohli 1

ಇತ್ತೀಚಿನ ಕಾಲದಲ್ಲಿ ಹುಡುಗರು ಜೀವನವನ್ನು ಆನಂದಿಸುತ್ತಿದ್ದಾರೆ. ಆದರೆ ಹುಡುಗಿಯರು ನಿಜವಾಗಿಯೂ ತುಂಬಾ ಫೋಕಸ್ ಆಗಿ ಇದ್ದಾರೆ. ಹುಡುಗಿಯರಿಗೆ ಕ್ರಿಕೆಟ್ ಬಗ್ಗೆ ಉತ್ತಮ ಪ್ರಜ್ಞೆ ಇದೆ. ನಾನು ಈ ಮಕ್ಕಳ ಮುಖದಲ್ಲಿ ಮತ್ತು ಕಣ್ಣಿನಲ್ಲಿ ತುಂಬಾ ಖುಷಿಯನ್ನು ಕಾಣುತ್ತಿದ್ದೇನೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ವಿರುದ್ಧ ಅರ್ಧ ಶತಕ ಸಿಡಿಸಿ ವೇಗವಾಗಿ ಏಕದಿನ ಕ್ರಿಕೆಟಿನಲ್ಲಿ 11 ಸಾವಿರ ರನ್ ಸಿಡಿಸಿ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಶನಿವಾರ ನಡೆಲಿರುವ ಅಫ್ಘಾನಿಸ್ತಾನದ ವಿರುದ್ಧ ಪಂದ್ಯದಲ್ಲಿ ಮತ್ತೊಂದು ವಿಶ್ವದಾಖಲೆ ನಿರ್ಮಿಸುವ ಸನಿಹದಲ್ಲಿದ್ದಾರೆ. 104 ರನ್ ಗಳಿಸಿದರೆ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ವೇಗವಾಗಿ 20 ಸಾವಿರ ರನ್ ಸಿಡಿಸಿದ ವಿಶ್ವ ದಾಖಲೆ ಬರೆಯಲಿದ್ದಾರೆ.

kohli aa

ವಿರಾಟ್ ಕೊಹ್ಲಿ 415 ಇನ್ನಿಂಗ್ಸ್ ಅಂದರೆ 131 ಟೆಸ್ಟ್, 222 ಏಕದಿನ ಪಂದ್ಯ ಹಾಗೂ 62 ಟಿ20 ಪಂದ್ಯಗಳಿಂದ ಒಟ್ಟು 19,886 ರನ್ ಸಿಡಿಸಿದ್ದಾರೆ. ಸದ್ಯ ಕೊಹ್ಲಿ 20 ಸಾವಿರ ರನ್ ಸಾಧನೆ ಮಾಡಲು 104 ರನ್ ಮಾತ್ರ ಅಗತ್ಯವಿದ್ದು, ಅಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಈ ಸಾಧನೆ ನಿರ್ಮಿಸುವ ಅವಕಾಶ ಹೊಂದಿದ್ದಾರೆ.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Share This Article
Leave a Comment

Leave a Reply

Your email address will not be published. Required fields are marked *