ಸೆ.29 ರಿಂದ ವಾಷಿಂಗ್ಟನ್‌ನಲ್ಲಿ ವಿಶ್ವ ಸಾಂಸ್ಕೃತಿಕ ಉತ್ಸವ

Public TV
3 Min Read
ravishankar guruji 1

– ಶ್ರೀ ಶ್ರೀ ರವಿಶಂಕರ್‌ ಗುರೂಜಿ ನೇತೃತ್ವದಲ್ಲಿ ‘ಸಾಂಸ್ಕೃತಿಕ ಒಲಿಂಪಿಕ್ಸ್‌’

ಬೆಂಗಳೂರು: ಅಮೆರಿಕದ ವಾಷಿಂಗ್ಟನ್‌ ಡಿ ಸಿಯ (Washington DC) ನ್ಯಾಷನಲ್‌ ಮಾಲ್‌ನಲ್ಲಿ ಸೆ.29 ರಿಂದ ಅ.1 ರ ವರೆಗೆ ‘ವಿಶ್ವ ಸಾಂಸ್ಕೃತಿಕ ಉತ್ಸವ’ವನ್ನು (World Culture Festival 2023) ಆರ್ಟ್‌ ಆಫ್‌ ಲಿವಿಂಗ್‌ (Art Of Living) ಸಂಸ್ಥೆಯು ಆಯೋಜಿಸಿದೆ.

world cultural festival 1

ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್‌ ಗುರೂಜಿ (Ravishankar Guruji) ಅವರ ಮುಂದಾಳತ್ವದಲ್ಲಿ ಈ ಉತ್ಸವ ಜರುಗಲಿದೆ. 17,000 ಕಲಾವಿದರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌, ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಡಾ.ವಿವೇಕ್‌ ಮೂರ್ತಿ, ಅಮೆರಿಕದ ಸಂಸದರಾದ ರಿಕ್ ಸ್ಕಾಟ್, ಭಾಷಣಕಾರರಾಗಿ ನಾನ್ಸಿ ಪೆಲೋಸಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಎಲ್ಲಾ ಸರ್ಕಾರಗಳು ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿವೆ: ಸತೀಶ್ ಜಾರಕಿಹೊಳಿ

world cultural festival

ಈ ದಿನಗಳಂದು ಇಡೀ ಜಗತ್ತಿನ ಕಣ್ಣು, ಅಮೆರಿಕದ ರಾಜಧಾನಿ ಮೇಲೆ ನೆಟ್ಟಿರುತ್ತದೆ. ಅವಿಸ್ಮರಣೇಯವಾದ ವೈವಿಧ್ಯತೆ ಹಾಗೂ ಏಕತೆಯ ಉತ್ಸವಕ್ಕೆ ಆತಿಥ್ಯವನ್ನು ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆ ವಹಿಸಲಿದೆ. ಇದು ಸಂಸ್ಥೆಯ ವಿಶ್ವ ಸಾಂಸ್ಕೃತಿಕ ಉತ್ಸವದ ನಾಲ್ಕನೆಯ ಆವೃತ್ತಿಯಾಗಿದೆ.

ravishankar guruji 2

ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ 17,000 ಕಲಾವಿದರು, ಅನೇಕ ರಾಜ್ಯಗಳ ಮುಖ್ಯಸ್ಥರು, 100 ಕ್ಕಿಂತಲೂ ಹೆಚ್ಚು ದೇಶಗಳ ಚಿಂತಕರು ಭಾಗವಹಿಸಲಿದ್ದಾರೆ. 5 ಲಕ್ಷಕ್ಕೂ ಹೆಚ್ಚು ಜನರು ಈ ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಹೀಗಾಗಿ ಇದು ಜಾಗತಿಕವಾಗಿ ಮಹತ್ವದ ಉತ್ಸವವಾಗಲಿದೆ. ಈ ಉತ್ಸವದಲ್ಲಿ 50 ಪ್ರದರ್ಶನಗಳು ನಡೆಯಲಿವೆ. ಪಾರಂಪರಿಕ ಚೀನಾದ ಸಾಂಸ್ಕೃತಿಕ ಪ್ರದರ್ಶನವೂ ಇರಲಿದೆ. ಇದರಲ್ಲಿ 1,000 ಹಾಡುಗಾರರು ಮತ್ತು ನರ್ತಕರು ಭಾಗವಹಿಸಲಿದ್ದಾರೆ.

world cultural festival 3

7,000 ನರ್ತಕರನ್ನೊಳಗೊಂಡ ಗರ್ಭನೃತ್ಯ ವೈಭವ, ನೇರ ಸ್ವರಮೇಳದ ಸಹಿತ 700 ಭಾರತೀಯ ಶಾಸ್ತ್ರೀಯ ನರ್ತಕರು, ಹಿಪ್ ಹಾಪ್‌ನ 50ನೇ ವರ್ಷದ ಸಂಭ್ರಮ, ಕುರ್ಟಿಸ್ ಬ್ಲೋ, ಎಸ್‌ಹೆಚ್‌ಎ-ರಾಕ್, ಸೀಕ್ವೆನ್ಸ್ ಗರ್ಲ್ಸ್, ಡಿಜೆಕೂಲ್ ಹಾಗೂ ಕಿಂಗ್ ಚಾರ್ಲ್ಸ್ ಹಾಗೂ ಕೆಲ್ಲಿ ಫಾರ್ಮನ್ ಅವರಿಂದ ಸಂಯೋಜಿಸಲ್ಪಟ್ಟ ನೃತ್ಯ ಸಂಯೋಜನೆಯಲ್ಲಿ 100 ಬ್ರೇಕ್ ಡಾನ್ಸ್‌ನ ನರ್ತಕರು ತಮ್ಮ ಚೊಚ್ಚಲ ಪ್ರದರ್ಶನವನ್ನು ನೀಡಲಿದ್ದಾರೆ. ತಮ್ಮ ಪಾರಂಪರಿಕ ನೃತ್ಯವಾದ ಹೋಪಾಕ್ ನೃತ್ಯ ಪ್ರದರ್ಶನವನ್ನು ನೀಡಲಿರುವ 1,000 ಉಕ್ರೇನ್‌ ನರ್ತಕರು, ಗ್ರಾಮಿ ಪ್ರಶಸ್ತಿ ವಿಜೇತರಾದ ಮಿಕ್ಕಿ ಫ್ರೀ ಅವರ ನೇತೃತ್ವದಲ್ಲಿ 1,000 ಗಿಟಾರ್ ವಾದ್ಯ ಕಾರ್ಯಕ್ರಮ ನಡೆಯಲಿದೆ. ಬಾಬ್ ಮಾರ್ಲೆಯವರ ಖ್ಯಾತ “ಒನ್ ಲವ್” ಮರುಸೃಷ್ಟಿ ಕಾರ್ಯಕ್ರಮವನ್ನು ಅವರ ಮೊಮ್ಮಗ ಸ್ಕಿಪ್ ಮಾರ್ಲಿನ್ ನಡೆಸಿಕೊಡಲಿದ್ದಾರೆ. ಇದನ್ನೂ ಓದಿ: ಕರ್ನಾಟಕ ಬಂದ್‌ – ವಿಜಯನಗರ ವಿವಿ ಪರೀಕ್ಷೆ ಮುಂದೂಡಿಕೆ

world cultural festival 5

ನ್ಯಾಷನಲ್ ಮಾಲ್‌ನಲ್ಲಿ 1963 ರಲ್ಲಿ ಮಾರ್ಟಿನ್ ಲೂಥರ್ ಕಿಂಗ್ “ಐ ಹ್ಯಾವ್ ಎ ಡ್ರೀಮ್” ಅತ್ಯದ್ಭುತ ಭಾಷಣವನ್ನು ನೀಡಿದ್ದರು. ಆ ಮೂಲಕ ಜಗತ್ತಿಗೆ ಸಮನ್ವಯತೆ, ಏಕತೆಯ ಸಂದೇಶವನ್ನು ಸಾರಿದ್ದರು. ಅದಕ್ಕಿಂತಲೂ ನೂರು ವರ್ಷಗಳ ಹಿಂದೆ ಚಿಕಾಗೋನಲ್ಲಿ ನಡೆದ ಪ್ರಥಮ ವಿಶ್ವ ಧಾರ್ಮಿಕ ಸಂಸತ್ತಿನಲ್ಲಿ ಸ್ವಾಮಿ ವಿವೇಕಾನಂದರು ಅವಿಸ್ಮರಣೀಯ ಭಾಷಣ ಮಾಡಿ, ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದ್ದರು. ಧಾರ್ಮಿಕ ಪ್ರತಿನಿಧಿಗಳನ್ನು ಸಹೋದರ, ಸಹೋದರಿಯರೆ ಎಂದು ಸಂಬೋಧಿಸಿ ವಿವೇಕಾನಂದರು ಗಮನ ಸೆಳೆದಿದ್ದರು. ಧಾರ್ಮಿಕ ದ್ವಂದ್ವತೆ, ಅಸಹಿಷ್ಣುತೆ ಕೊನೆಗಾಣಿಸಬೇಕು ಎಂದು ಕರೆ ನೀಡಿದ್ದರು.

ಇಂತಹ ಐತಿಹಾಸಿಕ ಸ್ಮರಣೀಯ ಸನ್ನಿವೇಶಗಳಿಗೆ ಸಾಕ್ಷಿಯಾಗಿದ್ದ ನ್ಯಾಷನಲ್‌ ಮಾಲ್‌ನಲ್ಲಿ ಇದೇ ಸೆ.29 ರಂದು ಗುರುದೇವ್ ಶ್ರೀ ಶ್ರೀ ರವಿಶಂಕರ ಗುರೂಜಿ ಅವರು, “ವಸುದೈವ ಕುಟುಂಬಕಂ” ಎಂಬ ಧ್ಯೇಯವಾಕ್ಯದೊಂದಿಗೆ 180 ದೇಶಗಳ ಗಡಿಗಳ ಜನ, ಧರ್ಮ, ಪಂಥಗಳನ್ನು ಒಂದುಗೂಡಿಸಲು ಸೇತುವೆಯಾಗಲಿದ್ದಾರೆ. ಈ ಉತ್ಸವದಲ್ಲಿ ಜಗತ್ತಿನ ಎಲ್ಲೆಡೆಯ ಆಹಾರಗಳ ಮೇಳವೂ ನಡೆಯಲಿದೆ. ಈ ಉತ್ಸವದ ವಿಶೇಷತೆಯೆಂದರೆ, ಉದಯೋನ್ಮುಖ ಕಲಾವಿದರು ಮತ್ತು ಪ್ರದರ್ಶಕರಿಗೆ ತಮ್ಮ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆಯಾಗುವುದು.

Web Stories

Share This Article