ಉಲಾನ್ ಉಡೆ (ರಷ್ಯಾ): ರಷ್ಯಾದಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ 48 ಕೆಜಿ ತೂಕ ವಿಭಾಗದಲ್ಲಿ ಭಾರತದ ಮಹಿಳಾ ಬಾಕ್ಸರ್ ಮಂಜು ರಾಣಿ ಬೆಳ್ಳಿ ಪದಕಕ್ಕೆ ಕೊರಳೊಡಿದ್ದಾರೆ.
ರಷ್ಯಾದ ಎಕ್ತರಿನಾ ಪಾಲ್ಟಸೆವ್ ವಿರುದ್ಧ ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ ಮಂಜು ರಾಣಿ 4-1 ಪಾಯಿಂಟ್ಸ್ ನಿಂದ ಸೋಲೊಪ್ಪಿದ್ದಾರೆ. ಈ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತರಾಗಿದ್ದಾರೆ. ಇದಕ್ಕೂ ಮುನ್ನ ಶನಿವಾರ ನಡೆದ ಸೆಮಿಫೈನಲ್‍ನಲ್ಲಿ ಮಂಜು ಥೈಲ್ಯಾಂಡ್‍ನ ಸಿ.ರಾಕಾಸತ್ ಅವರನ್ನು ಸೋಲಿಸಿದ್ದರು. ಆ ಪಂದ್ಯವನ್ನು ಮಂಜು 4-1 ಪಾಯಿಂಟ್ಸ್ ನಿಂದ ಗೆದಿದ್ದರು. ಇದನ್ನೂ ಓದಿ: ಕಂಚಿನ ಪದಕಕ್ಕೆ ಮುತ್ತಿಟ್ಟ ಮೇರಿ ಕೋಮ್
Advertisement
Silver for Manju at #AIBAWorldBoxingChampionship 2019.????
A tremendous performance by our pugilist #ManjuRani at women's world championships being held at Ulan Ude, #Russia. Many congratulations champion.
India is immensely proud of you. ???????????????? #PunchMeinHaiDum???? pic.twitter.com/kW2tfLtAoJ
— Dept of Sports MYAS (@IndiaSports) October 13, 2019
Advertisement
ಚೊಚ್ಚಲ ವಿಶ್ವ ಚಾಂಪಿಯನ್‍ಶಿಪ್‍ನಲ್ಲೇ ಅಂತಿ ಘಟ್ಟ ತಲುಪಿದ ಭಾರತದ ಎರಡನೇ ಬಾಕ್ಸರ್ ಎಂಬ ಹಿರಿಮೆಗೆ ಮಂಜು ರಾಣಿ ಭಾಜರಾಗಿದ್ದಾರೆ. ಜೊತೆಗೆ ಚೊಚ್ಚಲ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಮಂಜು ರಾಣಿ ಪಾತ್ರರಾದರು. 2010ರಲ್ಲಿ ಎಂ.ಸಿ.ಮೇರಿ ಕೋಮ್ ಈ ಸಾಧನೆ ಮಾಡಿದ್ದರು.
Advertisement
ಹರಿಯಾಣದ ರೋಹ್ಟಕ್ ಮೂಲದ ಮಂಜು ರಾಣಿ ಪ್ರತಿಷ್ಠಿತ ಸ್ಟ್ರಾನ್ಜಾ ಸ್ಮಾರಕ ಪಂದ್ಯಾವಳಿಯಲ್ಲಿ ಈ ವರ್ಷ ಬೆಳ್ಳಿ ಪದಕ ಗೆದ್ದಿದ್ದರು. ಅವರ ತಂದೆ ಗಡಿ ಭದ್ರತಾ ಪಡೆಯ ಅಧಿಕಾರಿಯಾಗಿದ್ದರು. ಆದರೆ ಕ್ಯಾನ್ಸರ್ ನಿಂದ 2010ರಲ್ಲಿ ನಿಧನರಾಗಿದ್ದಾರೆ.
Advertisement
ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಭಾರತವು 4 ಪದಕಗಳನ್ನು ಗಳಿಸಿದೆ. ಇದಕ್ಕೂ ಮುನ್ನ ಎಂ.ಸಿ ಮೇರಿ ಕೋಮ್, ಜಮುನಾ ಬೊರೊ ಮತ್ತು ಲವ್ಲಿನಾ ಬೊರ್ಗೊಹೈನ್ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
World Women's Boxing Championships: #MaryKom
wins Bronze ???? in Ulan-Ude, Russia#WBC pic.twitter.com/Dy7bSrpGev
— DD News (@DDNewslive) October 12, 2019