ವಾಷಿಂಗ್ಟನ್: ವಿಶ್ವ ಅಥ್ಲೇಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿರುವ ನೀರಜ್ ಚೋಪ್ರಾ ಮುಂದಿನ ನನ್ನ ಗುರಿ 90 ಮೀ.ಗಿಂತ ದೂರ ಎಸೆತ ಮತ್ತು ಈ ಪದಕದ ಬಣ್ಣ ಬದಲಾಗಬೇಕೆಂದು ಬಯಸುತ್ತೇನೆ ಎಂದಿದ್ದಾರೆ.
Advertisement
ವಾಷಿಂಗ್ಟನ್ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕಾಗಿ ಪದಕ ಗೆದ್ದಿರುವುದು ಸಂತೋಷ ನೀಡಿದೆ. ನಾನು ನನ್ನ ಪ್ರದರ್ಶನವನ್ನು ಇನ್ನಷ್ಟು ಉತ್ತಮಗೊಳಿಸಬೇಕಾಗಿದೆ. ಇದೀಗ ನನ್ನ ಮುಂದಿನ ಗುರಿ 90 ಮೀ. ಅಧಿಕ ದೂರ ಎಸೆತದ ಪ್ರಯತ್ನ ಜೊತೆಗೆ ಈಗ ಪಡೆದಿರುವ ಬೆಳ್ಳಿ ಪದಕದ ಬಣ್ಣ ಚಿನ್ನವಾಗಿ ಸಿಗಬೇಕೆಂಬ ಹಂಬಲವಿದೆ ಎಂದಿದ್ದಾರೆ. ಇದನ್ನೂ ಓದಿ: World Athletics Championship 2022 – ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ
Advertisement
Advertisement
ನನಗೆ ಒಲಿಂಪಿಕ್ಸ್ ಚಾಂಪಿಯನ್ ಎಂಬಂತಹ ಯಾವುದೇ ಒತ್ತಡ ಇಲ್ಲ. ನಾನು ಮತ್ತೆ ಚಿನ್ನದ ಪದಕದ ಬೇಟೆಯಾಡುತ್ತೇನೆ. ನನ್ನ ಪ್ರದರ್ಶನ ತೃಪ್ತಿದಾಯಕವಾಗಿದೆ. ಜಾವೆಲಿನ್ ಎಸೆಯಲು ಉತ್ತಮ ಪರಿಸ್ಥಿತಿ ಇರಲಿಲ್ಲ. ಗಾಳಿಯ ವೇಗವೂ ಹೆಚ್ಚಾಗಿದ್ದರೂ ಉತ್ತಮ ಪ್ರದರ್ಶನ ನೀಡುತ್ತೇನೆಂಬ ವಿಶ್ವಾಸವಿತ್ತು. ಪ್ರತಿಸ್ಪರ್ಧಿಗಳು ಉತ್ತಮವಾಗಿ ಎಸೆಯುತ್ತಿದ್ದರು. ಪ್ರತಿ ಬಾರಿ ಚಿನ್ನ ಗೆಲ್ಲಲು ಸಾಧ್ಯವಿಲ್ಲ ಆದರೂ ಪ್ರಯತ್ನಿಸುತ್ತೇನೆ. ನನ್ನಿಂದ ಸಾಧ್ಯವಾಗುವ ಎಲ್ಲವನ್ನೂ ಮಾಡುತ್ತೇನೆ. ಮತ್ತೆ ತರಬೇತಿ ಮೇಲೆ ಗಮನ ಹರಿಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೇಶದ ಕ್ರೀಡಾ ಇತಿಹಾಸದಲ್ಲಿ ಇದೊಂದು ವಿಶೇಷ ಕ್ಷಣ – ನೀರಜ್ ಚೋಪ್ರಾಗೆ ಮೋದಿ ಸಹಿತ ಗಣ್ಯರಿಂದ ಅಭಿನಂದನೆ
Advertisement
ವಿಶ್ವ ಅಥ್ಲೇಟಿಕ್ಸ್ ಚಾಂಪಿಯನ್ಶಿಪ್ ಫೈನಲ್ ಸ್ಪರ್ಧೆಯಲ್ಲಿ ಗ್ರೆನಾಡದ ಆಂಡರ್ಸನ್ ಪೀಟರ್ಸ್ ನೀರಜ್ ಚೋಪ್ರಾಗಿಂತ ಉತ್ತಮ ಸಾಧನೆ ಪ್ರದರ್ಶಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಆಂಡರ್ಸನ್ ಪೀಟರ್ಸ್ 90.54 ಮೀಟರ್ ದೂರ ಎಸೆದು ಚಿನ್ನದ ಪದಕ ಗೆದ್ದರೆ, ನೀರಜ್ ಚೋಪ್ರಾ 88.13 ಮೀ. ದೂರ ಎಸೆದು ಬೆಳ್ಳಿ ಪದಕ ಪಡೆದರು. ಚೆಕ್ ಗಣರಾಜ್ಯದ ಜಾಕೂಬ್ ವಾಡ್ಲೆಚ್ 88.09 ದೂರ ಎಸೆಯುವುದರೊಂದಿಗೆ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದರು.
Live Tv
[brid partner=56869869 player=32851 video=960834 autoplay=true]