ಬೆಂಗಳೂರು: ಲಾಕ್‍ಡೌನ್ ಮಧ್ಯೆಯೂ ಏರ್‍ಪೋರ್ಟ್ ಗಳಿಗೆ ಸಬಂಧಿಸಿದಂತೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್)ದ ಕುರಿತು ಸಂತಸದ ಸುದ್ದಿ ಹೊರ ಬಿದ್ದಿದ್ದು, ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ದೇಶದ ಪ್ರಮುಖ ನಗರಗಳ ಹೊಸ ವಿಮಾನ ನಿಲ್ದಾಣಗಳ ಪೈಕಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೈ ಸ್ಟಾಂಡರ್ಡ್ ಮೆಂಟೇನ್ ಹೊಂದಿದ್ದು, ವಿಮಾನ ನಿಲ್ದಾಣದಲ್ಲಿನ ಸೌಲಭ್ಯಗಳು ಪ್ರಯಾಣಿಕರು ವೇಗವಾಗಿ ಹಾಗೂ ಸರಳವಾಗಿ ಸಂಚರಿಸಲು ಅನುಕೂಲವಾಗಿದೆ. ಹೀಗಾಗಿ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಬಿರುದು ಪಡೆದಿದೆ. ಈ ಮೂಲಕ ಸತತ ಮೂರನೇ ಬಾರಿ ಕೇಂದ್ರ ಏಷ್ಯಾದಲ್ಲೇ ಅತ್ಯುತ್ತಮ ವಿಮಾನ ನಿಲ್ದಾಣ ಖ್ಯಾತಿ ಪಡೆದಿದೆ.
Advertisement
Advertisement
ವರ್ಲ್ಡ್ ಏರ್‍ಪೋರ್ಟ್ ಅವಾರ್ಡ್ಸ್ 2020ನಲ್ಲಿ ಪ್ರಯಾಣಿಕರು ಮತ ಹಾಕಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಸತತ ಮೂರು ಬಾರಿ ಪ್ರಯಾಣಿಕರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಆಯ್ಕೆ ಮಾಡಿದ್ದಾರೆ. ಇದು ಕೇಂದ್ರ ಏಷ್ಯಾ ಭಾಗದಲ್ಲಿ ಹಾಗೂ ಭಾರತದಲ್ಲೇ ನಮ್ಮ ನೆಚ್ಚಿನ ಪ್ರಾದೇಶಿಕ ವಿಮಾನ ನಿಲ್ದಾಣವಾಗಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.
Advertisement
ಪ್ರಯಾಣಿಕರ ವಾರ್ಷಿಕ ಸರ್ವೇ ಆಧಾರದ ಮೇಲೆ ವಿಶ್ವಾದ್ಯಂತ ಎಲ್ಲ ವಿಮಾನ ನಿಲ್ದಾಣಗಳಿಗೆ ವರ್ಲ್ಡ್ ಏರ್‍ಪೋರ್ಟ್ ಅವಾರ್ಡ್ಸ್ ನೀಡಲಾಗುತ್ತದೆ. ಒಟ್ಟು ಸುಮಾರು 100 ದೇಶಗಳ ಪ್ರಯಾಣಿಕರು ವಿಮಾನ ನಿಲ್ದಾಣಗಳ ಸ್ಥಿತಿಗತಿ, ಚೆಕ್-ಇನ್, ವಿಮಾನಗಳ ಆಗಮನ, ಟ್ರಾನ್ಸಫರ್ಸ್, ಶಾಪಿಂಗ್, ಭದ್ರತೆ, ಇಮಿಗ್ರೇಷನ್ ಹಾಗೂ ಡಿಪಾರ್ಚರ್ಸ್ ಈ ಸೌಲಭ್ಯಗಳನ್ನು ಪರಿಗಣಿಸಿ ಮತ ಹಾಕುತ್ತಾರೆ.
Advertisement
ಇದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯವಸ್ಥಾಪಕ ಮಂಡಳಿ, ಸಿಬ್ಬಂದಿ ಸಾಧನೆಯಾಗಿದೆ. ಇವರೆಲ್ಲರ ಅವಿರತ ಸೇವೆಯಿಂದಾಗಿ ಮತ್ತೊಮ್ಮೆ ಅತ್ಯುತ್ತಮ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ. ಭಾರತವು ವಿಶ್ವ ಮಟ್ಟದಲ್ಲಿ ವಿಮಾನ ಪ್ರಯಾಣದಲ್ಲಿ ಭಾರೀ ಸ್ಪರ್ಧೆಯೊಡ್ಡುತ್ತಿದೆ. ಅಲ್ಲದೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ. ಹಲವಾರು ಅಧುನಿಕ ಬದಲಾವಣೆಗಳ ಮೂಲಕ ಪ್ರಯಾಣಿಕರಿಗೆ ನೆಚ್ಚಿನ ತಾಣವಾಗಿದೆ. ಪ್ರಯಾಣಿಕರು ಇದನ್ನು ಸವಿಯುತ್ತಿದ್ದಾರೆ ಎಂದು ಸ್ಕೈಟ್ರ್ಯಾಕ್ಸ್ ಸಿಇಒ ಎಡ್ವರ್ಡ್ ಪ್ಲ್ಯಾಸ್ಟೆಡ್ ತಿಳಿಸಿದ್ದಾರೆ.
ಹೊಸ ಅತ್ಯಾಧುನಿಕ ಟರ್ಮಿನಲ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಇದರ ಜೊತೆಗೆ ಮುಂಬರುವ ತಿಂಗಳುಗಳಲ್ಲಿ ಬಾರ್ ಗಳನ್ನು ಹೆಚ್ಚಿಸಲು ಚಿಂತನೆ ನಡೆಸಲಾಗಿದೆ. 11 ವರ್ಷಗಳ ವಿಮಾನ ನಿಲ್ದಾಣ ಭಾರತ ಹಾಗೂ ಕೇಂದ್ರ ಏಷ್ಯಾದಲ್ಲಿ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಸ್ಥಾನವನ್ನು ಸತತ 3ನೇ ಬಾರಿ ಉಳಿಸಿಕೊಂಡಿರುವುದು ದೊಡ್ಡ ಸಾಧನೆ. ಈ ಪ್ರಶಸ್ತಿಯು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಪ್ರಯಾಣಿಕರಿಗೆ ವರ್ಲ್ಡ್ ಕ್ಲಾಸ್ ಎಕ್ಸ್ ಪೀರಿಯನ್ಸ್ ನೀಡುವ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ಅಲ್ಲದೆ ಅತ್ಯುತ್ತಮ ತಂತ್ರಜ್ಞಾನ ಹಾಗೂ ಸುಸ್ಥಿರತೆಯನ್ನು ಗುರುತಿಸಲಾಗಿದೆ.
ಏರ್‍ಪೋರ್ಟ್ ಸಿಬ್ಬಂದಿಯ ಅಸಾಧಾರಣ ಪ್ರಯತ್ನ ಹಾಗೂ ಬದ್ಧತೆಗೆ ಸಂದಿರುವ ಅತ್ಯದ್ಭುತ ಬಹುಮಾನ ಇದು. ವಿಮಾನ ನಿಲ್ದಾಣದ ಈ ಸಾಧನೆಗೆ ಸಿಬ್ಬಂದಿ ಅವಿರತವಾಗಿ ಶ್ರಮಿಸಿದ್ದಾರೆ ಎಂದು ಬಿಐಎಎಲ್ ಎಂಡಿ ಹಾಗೂ ಸಿಇಒ ಹರಿ ಕೆ.ಮರಾರ್ ತಿಳಿಸಿದ್ದಾರೆ.
ಕೊರೊನಾ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಈ ಪ್ರಶಸ್ತಿ ಲಭಿಸಿರುವುದು ಏರ್‍ಪೋರ್ಟ್ ಹಾಗೂ ಏರ್ ಲೈನ್ಸ್ ಇಂಡಸ್ಟ್ರಿಗೆ ನೈತಿಕ ಸ್ಥೈರ್ಯವನ್ನು ತುಂಬಿದಂತಾಗಿದೆ.