ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ನೇಮಕದ ಜೊತೆಗೆ ಕಾರ್ಯಾಧ್ಯಕ್ಷರ ನೇಮಕಕ್ಕೆ ಮೂಲ ಕಾಂಗ್ರೆಸ್ಸಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಬಣ ನಾಲ್ವರು ಕಾರ್ಯಾಧ್ಯಕ್ಷರ ನೇಮಕಕ್ಕೆ ಪಟ್ಟು ಹಿಡಿದಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಾಜಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕೆಪಿಸಿಸಿಗೆ ಕಾರ್ಯಾಧ್ಯಕ್ಷರ ನೇಮಕವೇ ಅಗತ್ಯವಿಲ್ಲ ಎಂದಿದ್ದಾರೆ.
ಕಾರ್ಯಾಧ್ಯಕ್ಷ ವಿಚಾರದಲ್ಲೂ ಬಹಳಷ್ಟು ಗೊಂದಲ ಸೃಷ್ಟಿಯಾಗಿಬಿಟ್ಟಿದೆ. ನನ್ನ ಅನುಭವದ ಪ್ರಕಾರ ಅಧ್ಯಕ್ಷರಿಗೆ ಸಹಕಾರಿಯಾಗಿ ಉಪಾಧ್ಯಕ್ಷರು ಇರಬಹುದು. ಅದೇ ರೀತಿ ನಾಲ್ಕು ಜನ ಕಾರ್ಯಾಧ್ಯಕ್ಷ ಅವಶ್ಯಕತೆ ಇಲ್ಲ ಅನಿಸುತ್ತದೆ. ನಾಲ್ಕು ಜನ, ಇಬ್ಬರಾಗಲಿ ಕಾರ್ಯಾಧ್ಯಕ್ಷರ ಅವಶ್ಯಕತೆ ಇಲ್ಲ. ದೇಶದಲ್ಲಿ ಎಲ್ಲಿಯೂ ಇಲ್ಲ. ನನ್ನ ಪ್ರಕಾರ ನಾಲ್ಕಲ್ಲ, ಒಂದೂ ಕಾರ್ಯಾಧ್ಯಕ್ಷರ ಅವಶ್ಯಕತೆಯೂ ಇಲ್ಲ ಎಂದು ಸಿದ್ದರಾಮಯ್ಯ ಕಾರ್ಯಧ್ಯಕ್ಷ ನೇಮಕ ಪಟ್ಟಿಗೆ ಪರಮೇಶ್ವರ್ ವಿರೋಧ ವ್ಯಕ್ತಪಡಿಸಿದ್ದಾರೆ. ಕಾರ್ಯಾಧ್ಯಕ್ಷರ ಬದಲು ಹಿರಿಯ ಉಪಾಧ್ಯಕ್ಷರ ನೇಮಕವಾಗಲಿ. ಆಗ ಸೀನಿಯಾರಿಟಿ ಪ್ರಶ್ನೆ ಬರುವುದಿಲ್ಲ. ಉಪಾಧ್ಯಕ್ಷರುಗಳನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲಿ. ಇಲ್ಲದೇ ಹೋದರೆ ಕಾರ್ಯಾಧ್ಯಕ್ಷರ ನಡುವೆಯೇ ಗೊಂದಲ ಸೃಷ್ಟಿಯಾಗುತ್ತದೆ ಎಂದಿದ್ದಾರೆ.
Advertisement
Advertisement
ಸ್ಥಾನ ಪ್ರತ್ಯೇಕವಾಗಲಿ:
ಪಕ್ಷದ ಹಿತದೃಷ್ಟಿಯಿಂದ ಸಿಎಲ್‍ಪಿ, ಎಲ್‍ಓಪಿ ಪ್ರತ್ಯೇಕವಾದರೆ ತಪ್ಪೇನಿಲ್ಲ. ಸಿಎಲ್‍ಪಿ ಹೆಚ್ಚಿನದಲ್ಲ, ಎಲ್‍ಓಪಿ ಹೆಚ್ಚಿನದಲ್ಲ. ಎರಡೂ ಸ್ಥಾನ ಪ್ರತ್ಯೇಕಿಸಿದರೆ ಇಬ್ಬರು ನಾಯಕರು ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗುತ್ತದೆ. ಹಾಗೇ ಮಾಡುವುದು ಸೂಕ್ತ ಎಂದು ಮಾಜಿ ಡಿಸಿಎಂ ಪರಮೇಶ್ವರ್ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.
Advertisement
ಎರಡು ದಿನದ ಹಿಂದೆಯಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ವಿಪಕ್ಷ ನಾಯಕನ ಸ್ಥಾನ ಹಾಗೂ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಒಬ್ಬರಿಗೆ ಕೊಡಬೇಕು ಅದನ್ನ ಪ್ರತ್ಯೇಕಿಸಬಾರದು ಎಂದಿದ್ದರು. ಈ ಹೇಳಿಕೆಗೆ ತಿರುಗೇಟು ಎನ್ನುವಂತೆ ಪರಮೇಶ್ವರ್, ವಿಪಕ್ಷ ನಾಯಕ ಹಾಗೂ ಸಿಎಲ್ ಪಿ ನಾಯಕ ಸ್ಥಾನ ಬೇರೆ ಬೇರೆಯವರಿಗೆ ಕೊಟ್ಟರೆ ತಪ್ಪಲ್ಲ ಎಂದಿದ್ದಾರೆ. ಇಬ್ಬರು ಪ್ರತ್ಯೇಕವಾದರೆ ಏನು ಸಮಸ್ಯೆ ಆಗುವುದಿಲ್ಲ. ಸಮಸ್ಯೆ ಆಗುತ್ತದೆ ಎನ್ನುವುದು ಆಯಾ ನಾಯಕರ ಮನಸ್ಥಿತಿಯ ಮೇಲೆ ಹೋಗುತ್ತದೆ. ಹೊಂದಿಕೊಳ್ಳುವ ಮನಸ್ಥಿತಿ ಇರಬೇಕು ಎಂದಿದ್ದಾರೆ.
Advertisement
ಪ್ರತ್ಯೇಕ ಮಾಡಿದರೆ ರಾಜೀನಾಮೆ ನೀಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದರೆ ಅದು ಅವರ ವೈಯಕ್ತಿಕ ಅಭಿಪ್ರಾಯ ಇರಬಹುದು. ಅದಕ್ಕೆ ಅವರದೇ ಆದ ಕಾರಣಗಳಿರಬಹುದು. ಆದರೆ ಮಹಾರಾಷ್ಟ್ರದಲ್ಲೂ ಮಾಡಿದ್ದಾರೆ. ಇಲ್ಲೂ ಮಾಡಿದರೆ ತಪ್ಪೇನಿಲ್ಲ. ಇದು ನನ್ನ ಅಭಿಪ್ರಾಯ, ಹಾಗಂತ ನಮ್ಮಲ್ಲಿ ಯಾವುದೇ ಗುಂಪುಗಳಿಲ್ಲ. ನನ್ನ ಅಭಿಪ್ರಾಯವನ್ನು ನಾನು ಹಂಚಿಕೊಂಡಿದ್ದೇನೆ. ಅಂದರೆ ನಾನು ಒಂದು ಗುಂಪಾ ಎಂದು ಪ್ರಶ್ನಿಸಿದ್ದಾರೆ.