ವಿಜಯಪುರ: ಮಲ ಹೊರುವ ಪದ್ಧತಿ ನಿಷೇಧಿಸಿ ಸುಪ್ರಿಂಕೋರ್ಟ್ ಆದೇಶ ಮಾಡಿದ್ರೂ ವಿಜಯಪುರ ಜಿಲ್ಲೆಯಲ್ಲಿ ಇನ್ನೂ ಪಾಲಿಕೆ ಮಾತ್ರ ಆದೇಶ ಪಾಲನೆ ಮಾಡ್ತಿಲ್ಲ.
ಕಳೆದ ಒಂದು ವರ್ಷದಲ್ಲಿ 6 ಬಾರಿ ಹೀಗೆ ಮಾಡಿದ್ದು, ಎರಡು ಕಡೆ ಮ್ಯಾನ್‍ಹೋಲ್‍ಗೆ ಕಾರ್ಮಿಕರನ್ನು ಇಳಿಸಿ ಕೆಲಸ ಮಾಡಿಸಿದ್ದಾರೆ. ಪರಿಸರ ವಿಭಾಗದ ಅಧಿಕಾರಿ ಜಗದೀಶ್ ಒತ್ತಡ ಹೇರಿ ಈ ರೀತಿ ಕೆಲಸ ಮಾಡಿಸಿದ್ದಾರೆ ಎನ್ನಲಾಗಿದೆ.
Advertisement
ಬಾರಾ ಟಾಂಗ್ ಮಸೀದಿ ಹಾಗೂ ತೊರವಿ ರಸ್ತೆಯ ಕಲ್ಯಾಣನಗರದ ಮ್ಯಾನ್ ಹೋಲ್‍ಗಳಲ್ಲಿ ಕಾರ್ಮಿಕರನ್ನು ಇಳಿಸಿ ಕೆಲಸ ಮಾಡಿಸಿದ್ದಾರೆ. ಇದನ್ನು ಸಾರ್ವಜನಿಕರು ಪ್ರಶ್ನೆ ಮಾಡಿದ್ದಕ್ಕೆ ಅಧಿಕಾರಿಗಳ ಭಯದಲ್ಲಿ ನಮ್ಮ ಕೆಲಸ ಮಾಡೋಕೆ ಬಿಡಿ ಎಂದು ಕಾರ್ಮಿಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
Advertisement
ಮ್ಯಾನ್‍ಹೋಲ್‍ಗೆ ಇಳಿದು ಹೊಲಸು ಸ್ವಚ್ಛ ಮಾಡುತ್ತಿದ್ದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ದುರ್ನಾತ ಬೀರುವ ಮ್ಯಾನ್‍ಹೋಲ್ ಪಕ್ಕ ನಿಲ್ಲಲೂ ಆಗದ ಪರಿಸ್ಥಿತಿಯಲ್ಲೂ ಕೆಲಸ ಮಾಡಿಸುತ್ತಿದ್ದ ಅಧಿಕಾರಿಗಳ ಕ್ರಮಕ್ಕೆ ಜನಾಕ್ರೋಶ ವ್ಯಕ್ತವಾಗಿದೆ.