ಮೈಸೂರು: ದೇಶದ ನಂಬರ್ ಓನ್ ಸ್ವಚ್ಛ ನಗರಿ ಎಂಬ ಪಟ್ಟ ಕಳೆದುಕೊಂಡ ಚಿಂತೆಯಲ್ಲಿ ಮೈಸೂರು ಮಹಾನಗರಪಾಲಿಕೆ ಇದೆ. ಆದರೆ ನಂಬರ್ 1 ಪಟ್ಟಕ್ಕಿಂತಾ ಮೈಸೂರನ್ನು ಸ್ವಚ್ಛ ಮಾಡುವ ಪೌರಕಾರ್ಮಿಕರನ್ನು ಮೊದಲು ಮನುಷ್ಯರಂತೆ ನೋಡುವ ಮನಃಸ್ಥಿತಿ ಬೆಳೆಸಿಕೊಳ್ಳುವ ಅಗತ್ಯ ಇದೆ.
ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ ಪೌರಕಾರ್ಮಿಕರೊಬ್ಬರು ಬರಿಗೈಯಲ್ಲೇ ಮ್ಯಾನ್ ಹೋಲ್ ಸ್ವಚ್ಛಗೊಳಿಸಿದ್ದಾರೆ. ಪಾಲಿಕೆಯ ಇನ್ಸ್ ಪೆಕ್ಟರ್ ಅಣತಿಯಂತೆ ಶ್ರೀನಿವಾಸ್ ಎಂಬ ಪೌರಕಾರ್ಮಿಕರು ಮೈಸೂರಿನ ಜೆ.ಪಿ ನಗರದ ಅಕ್ಕಮಹಾದೇವಿ ರಸ್ತೆಯಲ್ಲಿನ ಮ್ಯಾನ್ ಹೋಲ್ ಬರಿಗೈಯಲ್ಲಿ ಸ್ವಚ್ಛ ಮಾಡಿದ್ದಾರೆ.
Advertisement
Advertisement
ಶ್ರೀನಿವಾಸ್ ಯಾವುದೇ ಸುರಕ್ಷತಾ ಕವಚಗಳನ್ನು ಧರಿಸದೇ ಬರಿಗೈಯಲ್ಲೇ ಮ್ಯಾನ್ ಹೋಲ್ ಸ್ವಚ್ಛ ಮಾಡುತ್ತಿರುವುದನ್ನು ಸ್ಥಳೀಯರೊಬ್ಬರು ಮೊಬೈಲ್‍ನಲ್ಲಿ ಸೆರೆಹಿಡಿದ್ದಾರೆ. ಮೈಸೂರು ಮಹಾನಗರಪಾಲಿಕೆ ಇನ್ಸ್ ಪೆಕ್ಟರ್ ಶಿವಕುಮಾರ್ ಸೂಚನೆ ಮೇರೆಗೆ ಬರಿಗೈಯಲ್ಲಿ ಕೆಲಸ ಮಾಡಿಸಲಾಗಿದೆ ಎನ್ನುವ ಆರೋಪವಿದೆ.
Advertisement
ಇತ್ತೀಚೆಗೆ ಮೈಸೂರಿನ ಚಾಮುಂಡಿಬೆಟ್ಟ ಗ್ರಾಮಪಂಚಾಯ್ತಿ ವ್ಯಾಪ್ತಿಯ ತಾವರೆಕಟ್ಟೆ ಗ್ರಾಮದಲ್ಲೂ ಪೌರಕಾರ್ಮಿಕರೋರ್ವರನ್ನು ಮ್ಯಾನ್ ಹೋಲ್‍ಗೆ ಇಳಿಸಿದ ಪ್ರಕರಣ ನಡೆದಿತ್ತು. ಈ ಪ್ರಕರಣದಲ್ಲಿ ತಪ್ಪು ಮಾಡಿದ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯನ್ನು ಆ ಸ್ಥಾನದಿಂದ ಸರ್ಕಾರ ವಜಾ ಕೂಡ ಮಾಡಿತ್ತು.
Advertisement
https://www.youtube.com/watch?v=NaK6Vp8nuwo