ಕೋಲಾರ: ಕ್ರಶರ್‌ನಲ್ಲಿ (Crusher) ಬಂಡೆ ಒಡೆಯಲು ಸ್ಫೋಟಿಸುವ ವೇಳೆ ಕಲ್ಲು ಬಿದ್ದು ಕಾರ್ಮಿಕನೊಬ್ಬ ಸಾವಿಗೀಡಾದ ಘಟನೆ ಮಾಲೂರು (Maluru) ತಾಲೂಕಿನ ಮಾಕಾರಹಳ್ಳಿ ಬಳಿ ನಡೆದಿದೆ.
ಮೃತ ಕಾರ್ಮಿಕನನ್ನು ಆಂಧ್ರಪ್ರದೇಶ ಮೂಲದ ವೆಂಕಟೇಶ್ (60) ಎಂದು ಗುರುತಿಸಲಾಗಿದೆ. ಅವಘಡದಲ್ಲಿ ಹರೀಶ್ ಮತ್ತು ಈಶ್ವರ್ ಎಂಬುವರಿಗೆ ಗಾಯಗಳಾಗಿವೆ. ಬಂಡೆಯನ್ನು ಸ್ಫೋಟಿಸಲು ತಯಾರಿ ಮಾಡಿಕೊಳ್ಳುತ್ತಿದ್ದ ವೇಳೆ ಕಲ್ಲು ಬಂಡೆ ಬಿದ್ದು ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಗಾಯಾಳುಗಳನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.