ನವದೆಹಲಿ: ಮೊದಲ ಸ್ವದೇಶಿ ನಿರ್ಮಿತ ಐಎನ್‌ಎಸ್ ವಿಕ್ರಾಂತ್ (INS Vikrant) ವಿಮಾನವಾಹಕ ಯಶಸ್ವಿಯಾದ ಬೆನ್ನಲ್ಲೇ ಭಾರತ ಮತ್ತೊಂದು ಸ್ವದೇಶಿ ವಿಮಾನವಾಹಕ ನೌಕೆ (Indigenous Aircraft) ಸಿದ್ಧಪಡಿಸುವ ಕೆಲಸ ಪ್ರಾರಂಭಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿದ್ದಾರೆ.
Advertisement
ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಐಎನ್‌ಎಸ್ ವಿಕ್ರಾಂತ್ ಕುರಿತು ಮಾತನಾಡಿದ ಅವರು, ವಿಮಾನವಾಹಕ ನೌಕೆ ನಿರ್ಮಾಣದಲ್ಲಿ ದೇಶವು ವಿಶ್ವದಲ್ಲಿ 7ನೇ ಸ್ಥಾನದಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸೆ.2ರಂದು ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ವಿಕ್ರಾಂತ್ ನೌಕಾಪಡೆಗೆ ಅಧಿಕೃತ ಸೇರ್ಪಡೆ
Advertisement
Advertisement
ಭಾರತ ಸ್ವತಂತ್ರಗೊಂಡಾಗ ದೇಶದಲ್ಲಿ ಒಂದು ಸೂಜಿಯನ್ನೂ ತಯಾರಿಸಲಿಲ್ಲ. ಆದರೆ 2022ರಲ್ಲಿ ನಾವು ಐಎನ್‌ಎಸ್ ವಿಕ್ರಾಂತ್‌ನಂತಹ ಬೃಹತ್ ವಿಮಾನವಾಹಕ ನೌಕೆಯನ್ನೇ ನಿರ್ಮಿಸಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಯೊಡ್ಡುತ್ತಿರುವ ಯುಎಸ್ (US), ಯುಕೆ (UK), ಫ್ರಾನ್ಸ್, ಜರ್ಮನಿ, ಚೀನಾ ಮತ್ತು ಜಪಾನ್ ನಂತರ ಭಾರತ ಇಂದು ಸ್ವದೇಶಿ ವಿಮಾನವಾಹಕ ಹೊಂದಿದ 7ನೇ ರಾಷ್ಟ್ರವಾಗಿದೆ. ವಿಕ್ರಾಂತ್ ಯಶಸ್ವಿಯಾದ ಬೆನ್ನಲ್ಲೇ ಭಾರತದ 2ನೇ ವಿಮಾನವಾಹಕ ನೌಕೆಯ ಕೆಲಸ ಪ್ರಾರಂಭವಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸಿನಿಮಾ ರೀತಿಯಲ್ಲೇ ಮನೆಗೆ ನುಗ್ಗಿದ 50 ಗೂಂಡಾಗಳು- ವೈದ್ಯೆ ಕಿಡ್ನ್ಯಾಪ್
Advertisement
ಐಎನ್‌ಐಸ್ ವಿಕ್ರಾಂತ್ ಶೇ.73-74 ರಷ್ಟು ಸ್ವದೇಶೀಕರಣವನ್ನು ಸಾಧಿಸಿದೆ. ಸದ್ಯ ಭಾರತ ರಷ್ಯಾ ನಿರ್ಮಿತ ಐಎನ್‌ಎಸ್ ವಿಕ್ರಮಾದಿತ್ಯ (INS Vikramaditya) ಹಾಗೂ ಸ್ವದೇಸಿ ನಿರ್ಮಿತ ಐಎನ್‌ಎಸ್ ವಿಕ್ರಾಂತ್ ವಿಮಾನವಾಹಕ ನೌಕೆಗಳನ್ನು ನಿರ್ವಹಿಸುತ್ತಿದೆ.