WFH ವೇಳೆ ಮೂಳೆ ಮುರಿತ – ಕೊನೆಗೂ ಕೋರ್ಟ್ ಮೊರೆ ಹೋಗಿ ವಿಮೆ ಪಡೆದ ಉದ್ಯೋಗಿ

Public TV
2 Min Read
WorkingfromHome tips millennials

– ಉದ್ಯೋಗಿ ಕೆಲಸಕ್ಕೆ ಹೋಗುವಾಗ ಅಪಘಾತ ನಡೆದಿಲ್ಲ
– ಹಾಸಿಗೆಯಿದ್ದ ಜಾರಿಬಿದ್ದಿದ್ದಕ್ಕೆ ವಿಮೆ ಕೊಡಲು ಸಾಧ್ಯವಿಲ್ಲ ಎಂದಿದ್ದ ಕಂಪನಿ
– ವಿಮಾ ಕಂಪನಿಯ ವಾದ ತಿರಸ್ಕರಿಸಿದ ಕೋರ್ಟ್

ಬರ್ಲಿನ್: ವರ್ಕ್ ಫ್ರಮ್ ಹೋಮ್( work from home) ಮೂಲಕ ಕೆಲಸ ಮಾಡುತ್ತಿದ್ದಾಗ ಬೆನ್ನು ಮೂಳೆ ಮುರಿದುಕೊಂಡ ಉದ್ಯೋಗಿಗೆ ವಿಮೆ ನೀಡಬೇಕೆಂದು ಜರ್ಮನಿ ಕೋರ್ಟ್ ಮಹತ್ವದ ಆದೇಶ ನೀಡಿದೆ.

ಕೆಲಸ ಮಾಡುತ್ತಿದ್ದಾಗ ಅಚಾನಕ್ಕಾಗಿ ಕೆಳಗೆ ಬಿದ್ದು, ಬೆನ್ನು ಮೂಳೆ ಮುರಿದುಕೊಂಡ ಉದ್ಯೋಗಿಯು ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪರಿಹಾರ ನೀಡಲು ನಿರಾಕರಿಸಿದ ವಿಮಾ ಕಂಪನಿಗೆ ಕೋರ್ಟ್ ಖಡಕ್ ಸೂಚನೆಯನ್ನು ನೀಡಿ ಪರಿಹಾರ ನೀಡುವಂತೆ ಆದೇಶಿಸಿದೆ. ಇದನ್ನೂ ಓದಿ: ಆಸ್ಪತ್ರೆಗೆ ಕರೆದುಕೊಂಡುವ ಹೋಗುವ ನೆಪದಲ್ಲಿ ಸಾಮೂಹಿಕ ಅತ್ಯಾಚಾರ

court

ನಡೆದಿದ್ದೇನು?
ಕೋವಿಡ್ ಲಾಕ್ ಡೌನ್ ಸಮಯದಲ್ಲಿ ವರ್ಕ್ ಫ್ರಮ್ ಹೋಮ್‍ನಲ್ಲಿದ್ದ ಉದ್ಯೋಗಿಯೊಬ್ಬರು ಹಾಸಿಗೆಯಿಂದ ಎದ್ದು ಕಂಪ್ಯೂಟರ್ ಇರುವ ಮೇಜಿನ ಬಳಿಗೆ ಹೋಗುವಾಗ ಜಾರಿ ಬಿದ್ದಿದ್ದರು. ಇದರಿಂದ ಉದ್ಯೋಗಿಯ ಬೆನ್ನುಹುರಿ ಮುರಿದಿತ್ತು. ಉದ್ಯೋಗಿ ಕೆಲಸಕ್ಕೆ ಹೋಗುವಾಗ ಅಪಘಾತ ನಡೆದಿಲ್ಲ ಎಂಬ ಕಾರಣವನ್ನು ನೀಡಿ ವಿಮಾ ಕಂಪನಿ ಪರಿಹಾರ ನೀಡಲು ನಿರಾಕರಿಸಿತ್ತು. ಇದನ್ನೂ ಓದಿ:  ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧ – ಮೋದಿ ಟ್ವಿಟ್ಟರ್‌ ಖಾತೆ ಹ್ಯಾಕ್‌

court getty

ವಿಮಾ ಕಂಪನಿಯ ನಿರ್ಧಾರದಿಂದ ಬೇಸತ್ತಿದ್ದ ಉದ್ಯೋಗಿ ಕೋರ್ಟ್‍ನಲ್ಲಿ ಪ್ರಶ್ನೆ ಮಾಡಿದ್ದರು. ಆದರೆ ಜರ್ಮನಿಯ ಎರಡು ಕೆಳಹಂತದ ನ್ಯಾಯಾಲಯಗಳು ಉದ್ಯೋಗಿಯ ಹಕ್ಕನ್ನು ತಿರಸ್ಕರಿಸಿದ್ದವು. ಆದರೆ ಈಗ ಸಾಮಾಜಿಕ ಭದ್ರತಾ ವ್ಯವಹಾರಗಳ ಫೆಡರಲ್ ನ್ಯಾಯಾಲಯವು ಉದ್ಯೋಗಿಯ ಪರವಾಗಿ ತೀರ್ಪು ನೀಡಿರುವುದರಿಂದ ಈಗ ವಿಶ್ವದೆಲ್ಲಡೆ ಸುದ್ದಿಯಾಗಿದೆ. ಇದನ್ನೂ ಓದಿ: ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ: ಮಠಾಧೀಶರಿಗೆ ವಿದ್ಯಾರ್ಥಿನಿ ಸವಾಲು

Work From Home

ಕೋರ್ಟ್ ಹೇಳಿದ್ದೇನು?
ಫೆಡರಲ್ ನ್ಯಾಯಾಲಯದ ಪ್ರಕಾರ, ವರ್ಕ್ ಫ್ರಮ್ ವೇಳೆ ಹಾಸಿಗೆಯಿಂದ ಕೆಲಸಕ್ಕೆ ಹೋಗುವುದನ್ನು ವಿಮೆಯ ವ್ಯಾಪ್ತಿಯೊಳಗೆ ಬರಲಿದೆ. ಕೆಲಸದ ವೇಳೆ ಉದ್ಯೋಗಿ ಹಾಸಿಗೆಯಿಂದ ಉಪಾಹಾರ ಸೇವಿಸದೇ ಟೇಬಲ್ ಮೇಲಿದ್ದ ಕಂಪ್ಯೂಟರ್ ಕಡೆಗೆ ಹೋಗುತ್ತಿದ್ದಾಗ ಉದ್ಯೋಗಿ ಗಾಯಗೊಂಡಿದ್ದಾನೆ. ಆದ್ದರಿಂದ ವಿಮೆ ಕಂಪನಿ ಉದ್ಯೋಗಿಗೆ ಪರಿಹಾರ ಪಾವತಿಸಬೇಕೆಂದು ತೀರ್ಪು ನೀಡಿದೆ. ಇದನ್ನೂ ಓದಿ: ಪಾಕ್‍ನೊಂದಿಗೆ ಮಾತುಕತೆ ಇಲ್ಲದೇ ಉಗ್ರವಾದ ಅಂತ್ಯ ಅಸಾಧ್ಯವಾಗಿದೆ: ಫಾರೂಕ್ ಅಬ್ದುಲ್ಲಾ

court 1

ಜರ್ಮನ್ ಫೆಡರಲ್ ಕೋರ್ಟ್ ಉದ್ಯೋಗಿಯ ಪರವಾಗಿ ತೀರ್ಪು ನೀಡುವಾಗ, ಉದ್ಯೋಗಿ ಕೆಲಸ ಮಾಡುವ ಸ್ಥಳದಲ್ಲಿ ಟೆಲಿವರ್ಕಿಂಗ್ಅನ್ನು ಸಹ ಕಚೇರಿಯ ಎಂದು ಪರಿಗಣಿಸಲಾಗುತ್ತದೆ. ಟೆಲಿವರ್ಕಿಂಗ್ ಅಂದರೆ ಮನೆಯಿಂದ ಕೆಲಸ ಮಾಡುವುದಕ್ಕೆ ಕಂಪನಿ ನೀಡಿದ ಒಪ್ಪಿಗೆಯಾಗಿರುತ್ತದೆ. ಈ ವೇಳೆ ನಡೆದ ಈ ಘಟನೆಯ ಅಪಘಾತದ ವ್ಯಾಪ್ತಿಯಲ್ಲೇ ಬರುತ್ತದೆ. ಹೀಗಾಗಿ ಉದ್ಯೋಗಿ ವಿಮಾ ಪ್ರಯೋಜನವನ್ನು ಪಡೆಯಬೇಕು ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

Share This Article
Leave a Comment

Leave a Reply

Your email address will not be published. Required fields are marked *