ಬೆಂಗಳೂರು: ನಗರದಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ನಿಯಂತ್ರಣಕ್ಕೆ (Traffic Jam) ಪೊಲೀಸ್ ಇಲಾಖೆ ಹೊಸ ಪ್ಲಾನ್ ಮಾಡಿದೆ. ಬೆಂಗಳೂರು ಟೆಕ್ಕಿಗಳಿಗೆ ಪ್ರತಿ ಬುಧವಾರದಂದು ವರ್ಕ್ ಫ್ರಂ ಹೋಂ (Work From Home) ಮಾಡುವಂತೆ ಐಟಿ ಕಂಪನಿಗಳಿಗೆ (IT Company) ಸಲಹೆ ನೀಡಿದೆ.
ಐಟಿ ಕಂಪನಿಗಳು ಇರುವ ಪ್ರದೇಶಗಳು, ಅದರ ಸುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ವಿಪರೀತ ಆಗುತ್ತಿದೆ ಹೀಗಾಗಿ ಬುಧವಾರ ಒಂದು ದಿನ ವರ್ಕ್ ಫ್ರಂ ಹೋಂ ಮಾಡುವಂತೆ ಸೂಚನೆ ನೀಡಬೇಕೆಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಏಯ್.. ಗೂಂಡಾಗಿರಿ ಬಿಟ್ಟುಬಿಡಿ, ಬಾಸಿಸಂ ನಡೆಯಲ್ಲ – ದರ್ಶನ್ ಫ್ಯಾನ್ಸ್‌ಗೆ ಒಳ್ಳೆ ಹುಡ್ಗ ಪ್ರಥಮ್ ವಾರ್ನಿಂಗ್
ಸಲಹೆ ಏನು?
– ಪೀಕ್ ಅವರ್ ಬಿಟ್ಟು ಬೆಳಗ್ಗೆ 7:30 ಅಥವಾ 8 ಗಂಟೆಗೆ ಕಂಪನಿ ಆರಂಭಿಸಬೇಕು. ಇದನ್ನೂ ಓದಿ: ಬ್ರೇಕಪ್ ಕೊಲೆ ಕೇಸ್‌ಗೆ ಟ್ವಿಸ್ಟ್ – ಕೇವಲ 2 ಸಾವಿರಕ್ಕಾಗಿ ಬಿತ್ತು ಹೆಣ!
– ಔಟರ್ ರಿಂಗ್ ರೋಡ್‌ನಲ್ಲಿ ಇರುವ ಕಂಪನಿಗಳ ಸಮಯ ಬದಲಾವಣೆ ಮಾಡಬೇಕು
– ಪ್ರತಿ ಬುಧವಾರ ವರ್ಕ್ ಫ್ರಂ ಹೋಮ್‌ಗೆ ಸಲಹೆ, ಐಟಿ ಕಂಪನಿಗಳು ಬಿಎಂಟಿಸಿ ಜೊತೆ ಒಪ್ಪಂದ ಮಾಡಿಕೊಳ್ಳಿ
– ಬಿಎಂಟಿಸಿ ಬಸ್‌ಗಳ ಮೂಲಕ ಪಿಕಪ್-ಡ್ರಾಪ್‌ಗೆ ಎಸಿ ಬಸ್ ಕೊಡೋದಕ್ಕೆ ಬಿಎಂಟಿಸಿ ಒಪ್ಪಿಗೆ ನೀಡಿದೆ
– ಸಾರ್ವಜನಿಕರು ಸ್ವಂತ ವೆಹಿಕಲ್ ಬಿಟ್ಟು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸಿ
ಬುಧವಾರವೇ ಯಾಕೆ?
ಬುಧವಾರ ವಾರದ ಮಧ್ಯದಲ್ಲಿ ಬರುವ ಕಾರಣ ಸಾಧಾರಣವಾಗಿ ಐಟಿ ಕಂಪನಿಗಳಲ್ಲಿ ಹೆಚ್ಚಾಗಿ ಯಾರೂ ರಜೆ ತೆಗೆದುಕೊಳ್ಳುವುದಿಲ್ಲ. ಸಾಧಾರಣವಾಗಿ ದೀರ್ಘ ರಜೆ ಹಾಕುವವರು ಸೋಮವಾರ, ಮಂಗಳವಾರ ಅಥವಾ ಗುರುವಾರ, ಶುಕ್ರವಾರ ಹಾಕುತ್ತಾರೆ. ಆಗ ಶನಿವಾರ, ಭಾನುವಾರ ಸೇರಿ 4 ದಿನ ಸಿಗುತ್ತದೆ. ಒಂದು ವೇಳೆ ಬುಧವಾರ ವರ್ಕ್ ಫ್ರಂ ಕೊಟ್ಟರೆ ಮನೆಯಲ್ಲೇ ಕೆಲಸ ಮಾಡಬಹುದು. ಜೊತೆ ಊರಿಗೆ ಹೋಗಿದ್ದವರು ಅಲ್ಲಿಯೇ ಕೆಲಸ ಮಾಡಬಹುದು. ಇದರಿಂದ ಸ್ವಲ್ಪ ಟ್ರಾಫಿಕ್ ನಿಯಂತ್ರಣಕ್ಕೆ ಬರುತ್ತದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.