ಬೆಂಗಳೂರು: ಸಮಾಜವನ್ನು ಮೆಚ್ಚಿಸುವ ಕೆಲಸ ಮಾಡುವುದಕ್ಕಿಂತ, ಸಮಾಜಕ್ಕೆ ಏನಾದರೂ ಕೊಡುಗೆ ನೀಡುವುದು ಇಂದಿನ ಅವಶ್ಯವಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ರೇವಾ ವಿಶ್ವವಿಶ್ವವಿದ್ಯಾನಿಲಯದ ಆವರಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕುವೆಂಪು ಸಭಾಂಗಣ ಲೋಕಾರ್ಪಣೆ ಮಾಡಿ ಬಳಿ ಮಾತನಾಡಿದ ಅವರು, ಬುದ್ಧ, ಅಶೋಕ, ನೆಲ್ಸನ್ ಮಂಡೇಲಾ, ಮಹಾತ್ಮ ಗಾಂಧಿ, ಅಬ್ದುಲ್ ಕಲಾಂ, ಬೋಸ್ ಮುಂತಾದವರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತರಾದವರಲ್ಲ, ಇವರೆಲ್ಲರೂ ವಿಶ್ವಚೇತನರು. ಇವರು ಸಮಾಜಕ್ಕಾಗಿ ದುಡಿದವರು ಎಂದು ತಿಳಿಸಿದರು.
Advertisement
ಇಂದಿನ ಯುವಕರು ಸಿನಿಮಾ ನಟರ ಬಗ್ಗೆ ತಿಳಿದುಕೊಂಡಷ್ಟು ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿದುಕೊಂಡಿಲ್ಲ ಎಂದು ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.