ಲಂಡನ್: ಮಹಿಳೆಯೊಬ್ಬರು (5ಪೌಂಡ್) 500 ರೂಪಾಯಿ ಹಣವನ್ನು ಕೊಟ್ಟು ಮರದಿಂದ ಮಾಡಿದ ಕುರ್ಚಿಯೊಂದನ್ನು ಖರೀದಿ ಮಾಡಿದ್ದರು. ಆದರೆ ಇದೀಗ ಆ ಕುರ್ಚಿಗೆ ಬರೋಬ್ಬರಿ (16,250ಪೌಂಡ್) 16 ಲಕ್ಷ ರೂ. ಹರಾಜಾಗಿದೆ.
ಮಹಿಳೆ ಬ್ರೈಟನ್ ನಗರದ ಅಂಗಡಿ ಒಂದರಲ್ಲಿ ಕುರ್ಚಿಯನ್ನು ಖರೀದಿ ಮಾಡಿದ್ದರು. ಆದರೆ ಅದು ಅಮೂಲ್ಯವಾದ ವಿನ್ಯಾಸವನ್ನು ಹೊಂದಿತ್ತು. ಖರೀದಿ ಮಾಡುವ ಸಂದರ್ಭದಲ್ಲಿ ಯಾರಿಗೂ ತಿಳಿದಿರಲಿಲ್ಲ. ನಂತರ ಆ ಮಹಿಳೆ ಕುರ್ಚಿಯ ಬಗ್ಗೆ ತಜ್ಞರೊಂದಿಗೆ ಚರ್ಚೆ ಮಾಡಿದ್ದಾಳೆ. ನಂತರ ಅದು 20ನೇ ಶತಮಾನದ ಕುರ್ಚಿಯಾಗಿದ್ದು, ಆಸ್ಟ್ರೇಲಿಯಾದ ಶಾಲೆ ಒಂದರಿಂದ ಲಂಡನ್‍ಗೆ ಬಂದಿದೆ ಎನ್ನುವುದು ತಿಳಿದುಕೊಂಡಿದ್ದಾಳೆ. ಇದನ್ನೂ ಓದಿ: ಯಡಿಯೂರಪ್ಪ ಮೊಮ್ಮಗಳು ನೇಣು ಬಿಗಿದು ಆತ್ಮಹತ್ಯೆ
Advertisement
Advertisement
1902ರಲ್ಲಿ ಆಸ್ಟ್ರೇಲಿಯಾದ ಪೇಂಟರ್ ಕೊಲೊಮನ್ ಮೊಸೆರ್, ಕುರ್ಚಿಯನ್ನ ಡಿಸೈನ್ ಮಾಡಿದ್ದರು. ಮೊಸೆರ್, ಆಸ್ಟ್ರೇಲಿಯಾದ ಪ್ರಸಿದ್ಧ ಸಾಂಪ್ರದಾಯಿಕ ಆರ್ಟಿಸ್ಟ್ ಆಗಿದ್ದರು. ಈ ಕುರ್ಚಿಯು 18ನೇ ಶತಮಾನದ ಲ್ಯಾಡರ್-ಬ್ಯಾಕ್ ಕುರ್ಚಿಯ ಥರವೇ ಇತ್ತು. ಆದರೆ ಅದನ್ನು ಆಧುನಿಕ ಕಾಲಕ್ಕೆ ತಕ್ಕಂತೆ ವಿನ್ಯಾಸವನ್ನು ಮಾಡಲಾಗಿದೆ. ಇದೀಗ ಇದೇ ಕುರ್ಚಿಯನ್ನು ಆಸ್ಟ್ರೇಲಿಯಾದ ಡೀಲರ್ ಒಬ್ಬರು 16 ಲಕ್ಷ ರೂಪಾಯಿ ನೀಡಿ ಖರೀದಿ ಮಾಡಿದ್ದಾರೆ. ಇದನ್ನೂ ಓದಿ: ಆಳುವುದು ಬೇರೆ, ಆಡಳಿತ ಬೇರೆ ಈ ವ್ಯತ್ಯಾಸ ಇದೀಗ ಕರ್ನಾಟಕದಲ್ಲಿ ಕಾಣಬಹುದಾಗಿದೆ: ಬೊಮ್ಮಾಯಿ