ಪಾಟ್ನ: ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮರು ಮತ್ತು ಯಾದವರು ನನಗೆ ಮತ ಹಾಕಿಲ್ಲ. ಹೀಗಾಗಿ ಅವರಿಗಾಗಿ ನಾನು ಯಾವುದೇ ಕೆಲಸ ಮಾಡುವುದಿಲ್ಲ ಎಂದು ಬಿಹಾರದ ಜೆಡಿಯು ಸಂಸದ ದೇವೇಶ್ ಚಂದ್ರ ಠಾಕೂರ್ (Devesh Chandra Thakur) ಹೇಳಿದ್ದಾರೆ.
ಸೀತಾಮರ್ಹಿ ಲೋಕಸಭಾ ಕ್ಷೇತ್ರದಲ್ಲಿ ಆರ್‌ಜೆಡಿಯ ಅರ್ಜುನ್ ರೈ ಅವರನ್ನು ಸೋಲಿಸಿದ್ದ ಠಾಕೂರ್, ಸೀತಾಮರ್ಹಿಯಲ್ಲಿ ನಡೆದ ಸಮಾರಂಭವನ್ನು ಉದ್ದೇಶಿಸಿ ಮಾತನಾಡುವಾಗ, ಚುನಾವಣೆಯಲ್ಲಿ ಯಾದವರು ಮತ್ತು ಮುಸ್ಲಿಮರು ನನಗೆ ಮತ ಹಾಕಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: 30 ನಿಮಿಷದ ಹಲ್ಲೆ ವಿಡಿಯೋ ಆಧಾರಿಸಿಯೇ ದರ್ಶನ್ ಅರೆಸ್ಟ್
ನನ್ನ ಬಳಿಗೆ ಬರುವ ಯಾದವರು ಮತ್ತು ಮುಸ್ಲಿಮರಿಗೆ ಸ್ವಾಗತ. ಅವರು ಚಹಾ ಮತ್ತು ಸಿಹಿತಿಂಡಿಗಳನ್ನು ಸೇವಿಸಬಹುದು. ಆದರೆ ನಾನು ಅವರಿಗೆ ಯಾವುದೇ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ಕಳೆದ 25 ವರ್ಷಗಳಿಂದ ಯಾವುದೇ ತಾರತಮ್ಯವಿಲ್ಲದೆ ಜನರಿಗಾಗಿ ದುಡಿಯುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಜೆಡಿಯು ಸಂಸದರ ಹೇಳಿಕೆಗೆ ಸ್ವಪಕ್ಷಿಯರಿಂದಲೇ ವಿರೋಧ ವ್ಯಕ್ತವಾಗಿದೆ. ಇದನ್ನೂ ಓದಿ: EVMಗಳ ಸತ್ಯಾಸತ್ಯತೆ ಬಗ್ಗೆ ಪ್ರಪಂಚಕ್ಕೇ ಅರ್ಥವಾಗಿದೆ – ಮಸ್ಕ್ ಹೇಳಿಕೆ ಬೆಂಬಲಿಸಿದ ಡಿಕೆಶಿ
ಬಿಹಾರ ವಿಧಾನ ಪರಿಷತ್ತಿನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಠಾಕೂರ್ ಅವರು ಹೇಳಿಕೆಯು ಪ್ರತಿಸ್ಪರ್ಧಿ ಆರ್‌ಜೆಡಿಯಿಂದ ಮಾತ್ರವಲ್ಲದೆ ಕ್ಷಮೆಯಾಚಿಸಲು ಒತ್ತಾಯಿಸಿದ ಅವರದೇ ಪಕ್ಷದ ಬಂಕಾ ಸಂಸದರಿಂದಲೂ ತೀವ್ರ ಟೀಕೆಗೆ ಗುರಿಯಾಗಿದೆ.
ಠಾಕೂರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆರ್‌ಜೆಡಿ ವಕ್ತಾರ ಮೃತ್ಯುಂಜಯ್ ತಿವಾರಿ, ಠಾಕೂರ್ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಅವರ ಟೀಕೆಗಳು ಮಾನಹಾನಿಕರ, ಜಾತಿ ಮತ್ತು ಧರ್ಮ ವಿರೋಧಿ. ಇದು ಠಾಕೂರ್ ಅವರ ಊಳಿಗಮಾನ್ಯ ಮನೋಭಾವವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.