ನವದೆಹಲಿ: ನೀವು ಸರಿಯಾಗಿ ಮಾಸ್ಕ್ ಧರಿಸಿದರೆ ನಾವು ಲಾಕ್‍ಡೌನ್ ಮಾಡುವುದಿಲ್ಲ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜನರಿಗೆ ಎಚ್ಚರಿಸಿದರು.
ಲಾಕ್‍ಡೌನ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್ -19 ಪ್ರಕರಣ ನಗರದಲ್ಲಿ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ಸದ್ಯಕ್ಕೆ ಲಾಕ್‍ಡೌನ್ ಹೇರುವ ಯಾವುದೇ ಯೋಜನೆಯನ್ನು ತಮ್ಮ ಸರ್ಕಾರ ಹೊಂದಿಲ್ಲ. ಆದರೆ ಜನರು ಸರಿಯಾಗಿ ಮಾಸ್ಕ್ ಧರಿಸಿ ಅವರ ಸುರಕ್ಷತೆಯಲ್ಲಿ ಅವರು ಇದ್ದರೆ ನಾವು ಲಾಕ್‍ಡೌನ್ ಮಾಡುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ವಾಮಾಚಾರ ನಡೆಸಿ ಮನೆಯ ಬೆಡ್ ರೂಂನ ಮಣ್ಣಿನಡಿಯಲ್ಲಿ ನಿಧಿಗಾಗಿ ಶೋಧ – ಇಬ್ಬರ ಬಂಧನ
Advertisement
Advertisement
ದೆಹಲಿಯಲ್ಲಿ ಇಂದು 22,000 ಕೋವಿಡ್-19 ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ. ಈ ಪ್ರಕರಣಗಳು ಹೆಚ್ಚುತ್ತಿರುವುದನ್ನು ನೋಡಿದರೆ ಆತಂಕ ಉಂಟಾಗುತ್ತೆ. ಆದರೆ ಇದರಿಂದ ಭಯಪಡುವ ಅಗತ್ಯವಿಲ್ಲ. ಈ ಕುರಿತು ನಾನು ಡೇಟಾ ಸಹ ವಿಶ್ಲೇಷಿಸಿದ್ದೇನೆ ಎಂದು ತಿಳಿಸಿದರು.
Advertisement
ಎಲ್-ಜಿ ಸರ್ ಮತ್ತು ನಾನು ಈ ಪರಿಸ್ಥಿತಿ ಕುರಿತು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ನಾಳೆ ಡಿಡಿಎಂಎ ಸಭೆ ಇದೆ. ನಾವು ಪರಿಸ್ಥಿತಿಯನ್ನು ಪರಿಶೀಲಿಸುತ್ತೇವೆ. ನಾವು ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಕೇಂದ್ರ ಸರ್ಕಾರದಿಂದ ನಮಗೆ ಸಂಪೂರ್ಣ ಬೆಂಬಲ ಸಿಗುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
ಕೋವಿಡ್-19 ಪಾಸಿಟಿವ್ ಬಂದ ಕುರಿತು ಮಾತನಾಡಿದ ಅವರು, ನನಗೂ ಕೊರೊನಾ ಬಂದಿತ್ತು. ಇದರಿಂದ ನನಗೆ ಸುಮಾರು ಎರಡು ದಿನಗಳ ಕಾಲ ಜ್ವರ ಇತ್ತು. ಆದರೆ ಈಗ ನಾನು ಚೆನ್ನಾಗಿದ್ದೇನೆ. ಸೋಂಕಿನ ಸಮಯದಲ್ಲಿ ನಾನು ಸುಮಾರು 7-8 ದಿನಗಳ ಕಾಲ ಮನೆಯಲ್ಲಿ ಪ್ರತ್ಯೇಕವಾಗಿದ್ದೆ. ಆದರೆ ರಾಜ್ಯದ ಎಲ್ಲ ಕಾರ್ಯಗಳ ಕುರಿತು ದೂರವಾಣಿ ಮೂಲಕ ತಿಳಿದುಕೊಳ್ಳುತ್ತಿದ್ದೆ. ಎಲ್ಲ ವಿಷಯಗಳನ್ನು ಪರಿಶೀಲಿಸುತ್ತಿದ್ದೆ ಎಂದು ಸೋಂಕಿನ ಸಮಯದಲ್ಲಿ ಅವರು ಮಾಡಿದ ಕೆಲಸಗಳ ಬಗ್ಗೆ ವಿವರಿಸಿದರು
ಕಳೆದ ವರ್ಷ ಏಪ್ರಿಲ್-ಮೇ ತಿಂಗಳ ಹಿಂದಿನ ಅಲೆಗೆ ಹೋಲಿಸಿದರೆ, ಈ ಬಾರಿ ಸಾವಿನ ಸಂಖ್ಯೆ ಮತ್ತು ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ತುಂಬಾ ಕಡಿಮೆಯಾಗಿದೆ. 7 ಮೇ 2021 ರಲ್ಲಿ ಪ್ರತಿದಿನ 20,000 ಕೋವಿಡ್ ಪ್ರಕರಣಗಳು ಇದ್ದಾಗ, 341 ಸಾವುಗಳು ಸಂಭವಿಸಿತ್ತು. ಆದರೆ 2022ರ ಜನವರಿ 8 ರಂದು ಅದೇ ಸಂಖ್ಯೆಯ ಪ್ರಕರಣಗಳು ದಾಖಲಾಗಿದ್ದು, ಕೇವಲ ಏಳು ಸಾವುಗಳು ಸಂಭವಿಸಿವೆ ಎಂದು ತಿಳಿಸಿದರು. ಇದನ್ನೂ ಓದಿ: ಬೇಕಾಬಿಟ್ಟಿಯಾಗಿ ಬಿಸಾಕಿದ ಮೆಡಿಕಲ್ ವೇಸ್ಟ್ – ಸಾರ್ವಜನಿಕರ ಆಕ್ರೋಶ
ದೆಹಲಿಯಲ್ಲಿ ಮೇ 7 ರಲ್ಲಿ 20,000 ಜನರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ನಿನ್ನೆ ಸುಮಾರು 1,500 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಾರು ಲಸಿಕೆ ತೆಗೆದುಕೊಂಡಿಲ್ಲ ಅವರು ತಕ್ಷಣ ಕೋವಿಡ್ ಲಸಿಕೆ ತೆಗೆದುಕೊಳ್ಳಿ. ಲಸಿಕೆ ತೆಗೆದುಕೊಂಡರೆ ಸೋಂಕು ಬರುವುದಿಲ್ಲ ಎಂದು ಅರ್ಥವಲ್ಲ. ಲಸಿಕೆ ತೆಗೆದುಕೊಳ್ಳುವುದರಿಂದ ನಿಮ್ಮ ಜೀವಕ್ಕೆ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ವಿನಂತಿಸಿಕೊಂಡರು.