ಇಂಫಾಲ: ಮಣಿಪುರವನ್ನು (Manipur) ಒಡೆಯುವ ಪ್ರಯತ್ನ ಮಾಡಲಾಗುತ್ತಿದ್ದು, ರಾಜ್ಯವನ್ನು ಒಡೆಯುವ ಮತ್ತು ಒಗ್ಗೂಡಿಸುವ ಶಕ್ತಿ ಈ ಚುನಾವಣೆಗಿದೆ (Lok Sabha Election 2024) ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ.
ಇಂಫಾಲದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಮಣಿಪುರಕ್ಕೆ ಒಳನುಸುಳುವಿಕೆಯ ಪ್ರಯತ್ನಗಳು ನಡೆಯುತ್ತಿದ್ದು, ರಾಜ್ಯವನ್ನು ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಎಷ್ಟೇ ಪ್ರಯತ್ನಿಸಿದರೂ ನಾವು ಮಣಿಪುರವನ್ನು ಒಡೆಯಲು ಬಿಡುವುದಿಲ್ಲ ಎಂದರು. ಈ ಮೂಲಕ ಅವರು ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಪ್ರತಿಜ್ಞೆ ಮಾಡಿದ್ದಾರೆ. ಇದನ್ನೂ ಓದಿ: ಮುಂದಿನ 25 ವರ್ಷಕ್ಕೆ ತಯಾರಿಯ ಬಗ್ಗೆ ಮೋದಿ ಹೇಳಿದ್ದೇನು?
Advertisement
ಮಣಿಪುರದಲ್ಲಿ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿ ಮತ್ತು ರಾಜ್ಯವನ್ನು ಒಡೆಯದೆ ಶಾಂತಿ ಸ್ಥಾಪನೆ ಮಾಡುವುದು ನರೇಂದ್ರ ಮೋದಿ (Narendra Modi) ಸರ್ಕಾರದ ಆದ್ಯತೆಯಾಗಿದೆ. ಬಿಜೆಪಿ ಮಣಿಪುರವನ್ನು ಬಲಪಡಿಸಿದೆ. ಮಣಿಪುರದ ಭವಿಷ್ಯ ಬದಲಾದಾಗ ದೇಶದ ಭವಿಷ್ಯ ಬದಲಾಗುತ್ತದೆ ಎಂದು ಅವರು ಹೇಳಿದ್ದಾರೆ.
Advertisement
Advertisement
ಮಣಿಪುರದ ಪರಿಸ್ಥಿತಿಯ ಬಗ್ಗೆ ಇತ್ತೀಚೆಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಮಣಿಪುರದ ಪರಿಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಕೇಂದ್ರ ಸರಿಯಾದ ಸಮಯದಲ್ಲಿ ಮಧ್ಯಸ್ಥಿಕೆ ವಹಿಸಿ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಿದೆ ಎಂದಿದ್ದರು.
Advertisement
ಮಣಿಪುರ ಹಿಂಸಾಚಾರದ ವೇಳೆ ಸಂಸತ್ತಿನಲ್ಲಿ ಪ್ರಧಾನಿ, ಭಾರತ ಮಣಿಪುರದೊಂದಿಗಿದೆ. ನಾವು ಒಟ್ಟಾಗಿ ಈ ಸವಾಲಿಗೆ ಪರಿಹಾರವನ್ನು ಕಂಡುಕೊಳ್ಳುತ್ತೇವೆ ಎಂದಿದ್ದರು. ಇದನ್ನೂ ಓದಿ: ಚೆನ್ನಾಗಿತ್ತು ಅಂತಾ 2 ವಡೆ ತಿಂದಿದ್ರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಾಗಿ ಎದೆನೋವು ಕಾಣಿಸಿಕೊಂಡಿತು: ಜಮೀರ್