ನವದೆಹಲಿ: ನ್ಯಾಯಾಂಗದಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವಿಷಯವನ್ನು ಒಳಗೊಂಡಿರುವ 8ನೇ ತರಗತಿಯ ಹೊಸ ಎನ್‌ಸಿಇಆರ್‌ಟಿ (NCERT) ಪಠ್ಯ ಪುಸ್ತಕಕ್ಕೆ ಸುಪ್ರೀಂಕೋರ್ಟ್ (Supreme Court) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಲು ನಿರ್ಧರಿಸಿರುವುದಾಗಿ ಹೇಳಿದೆ.
ಸುಪ್ರೀಂಕೋರ್ಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, 8ನೇ ತರಗತಿಯ ಎನ್‌ಸಿಇಆರ್‌ಟಿ ಪಠ್ಯ ಪುಸ್ತಕಗಳಲ್ಲಿ ಸಂವಿಧಾನದ ಮೂಲ ರಚನೆಗೆ ಸಂಬಂಧಿಸಿದ ವಿಷಯಗಳನ್ನು ತೆಗೆದುಹಾಕಲಾಗಿದೆ. ಇದು ಸಂಪೂರ್ಣವಾಗಿ ಆಘಾತಕಾರಿ ಅಂತ ಕೋರ್ಟ್ ಗಮನಕ್ಕೆ ತಂದರು. ನೀವು ಈ ಬಗ್ಗೆ ಉಲ್ಲೇಖಿಸಿರುವುದರಿಂದ, ನಾನು ಈಗಾಗಲೇ ಆದೇಶವನ್ನು ಹೊರಡಿಸಿದ್ದೇನೆ. ಈ ವಿಷಯವನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ತೆಗೆದುಕೊಳ್ಳುತ್ತಿದ್ದೇನೆ ಎಂದು ನಾನು ನಿಮಗೆ ತಿಳಿಸುತ್ತಿದ್ದೇನೆ. ಏನೇ ಆದರೂ ಯಾರಿಗೂ ಸಂಸ್ಥೆಯ ಸಮಗ್ರತೆಗೆ ಕಳಂಕ ತರಲು ನಾನು ಅನುಮತಿಸುವುದಿಲ್ಲ ಎಂದು ಸಿಜೆಐ ಸೂರ್ಯ ಕಾಂತ್ ಹೇಳಿದ್ದಾರೆ. ಇದನ್ನೂ ಓದಿ: ದಲಿತ ಸಿಎಂ ಜಟಾಪಟಿ; ನನ್ನ ಸಾಮರ್ಥ್ಯ ಯಾರೂ ಪ್ರಶ್ನೆ ಮಾಡಲು ಆಗಲ್ಲ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಪರಮೇಶ್ವರ್
ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಎಂಬ ವಿಷಯದ ವಿವಾದದ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ಮಾರಾಟವನ್ನು ಹಿಂಪಡೆದುಕೊಂಡಿದೆ. ಇದನ್ನೂ ಓದಿ: ಉದ್ಯೋಗಾಂಕ್ಷಿಗಳು ಬಿಜೆಪಿ ಮಾತು ಕೇಳಿ FIR ಹಾಕಿಸಿಕೊಳ್ಳಬೇಡಿ: ಪ್ರದೀಪ್ ಈಶ್ವರ್
ಪರಿಷ್ಕೃತ ಪಠ್ಯದಲ್ಲಿ ಏನಿದೆ?
ಎನ್‌ಸಿಇಆರ್‌ಟಿಯು 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಹಾಗೂ ‘ಸಾಕಷ್ಟು ಪ್ರಕರಣಗಳು ಬಾಕಿ’ ವಿಷಯಗಳನ್ನು ಸೇರಿಸಿವೆ. ‘ಸಮಾಜದಲ್ಲಿ ನ್ಯಾಯಾಂಗ ಪಾತ್ರ’ ಶೀರ್ಷಿಕೆಯ ಅಧ್ಯಾಯದಲ್ಲಿ ಈ ವಿಚಾರಗಳು ಇವೆ. ‘ನ್ಯಾಯದಾನ ವಿಳಂಬವಾದರೆ ನ್ಯಾಯ ನಿರಾಕರಿಸಿದಂತೆ’ ಹಾಗೂ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ಭಾಗಗಳಲ್ಲಿ ಭ್ರಷ್ಟಾಚಾರ ಹಾಗೂ ಪ್ರಕರಣಗಳ ಬಾಕಿ ಸೇರಿದಂತೆ ನ್ಯಾಯಾಂಗ ಎದುರಿಸುತ್ತಿರುವ ಸವಾಲುಗಳನ್ನು ವಿವರಿಸಲಾಗಿದೆ. ಇದನ್ನೂ ಓದಿ: ವಿಮಾನ ನಿಲ್ದಾಣಕ್ಕೆ ತೆರಳಿ ಮೋದಿಯನ್ನು ಸ್ವಾಗತಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು

