Saturday, 21st July 2018

Recent News

ಸೋನಿಯಾ ಗಾಂಧಿ ವಿದೇಶಕ್ಕೆ ಹೋಗಿದ್ದು ಹಣ ವರ್ಗಾವಣೆಗಾ?- ಸಿಟಿ ರವಿ

ಬೆಂಗಳೂರು: ಸೋನಿಯಾ ಗಾಂಧಿ ವಿದೇಶಕ್ಕೆ ಹೋಗಿರುವುದು ವೈದ್ಯಕೀಯ ಚಿಕಿತ್ಸೆಗೋ ಅಥವಾ ತಮ್ಮ ವೈಯಕ್ತಿಕ ಅಕೌಂಟಿನಿಂದ ಸುರಕ್ಷಿತ ಸ್ಥಳಕ್ಕೆ ಹಣ ವರ್ಗಾವಣೆ ಮಾಡುವುದಕ್ಕೋ ಎಂದು ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಬಜೆಪಿ ಮುಖಂಡ ಸಿಟಿ ರವಿ ಟ್ವೀಟ್ ಮಾಡಿದ್ದಾರೆ.

ಗಾಂಧಿ ಕುಟುಂಬ 6 ದಶಕಗಳವರೆಗೆ ಭಾರತವನ್ನ ಆಳಿದ್ದರೂ ಸೋನಿಯಾ ಗಾಂಧಿ ಚಿಕಿತ್ಸೆ ಪಡೆಯಬಹುದಾದ ಒಂದು ಆಸ್ಪತ್ರೆ ಕಟ್ಟಿಸಲು ಅವರಿಂದ ಸಾಧ್ಯವಾಗಿಲ್ಲ ಎಂದು ಅವರು ಹರಿಹಾಯ್ದಿದ್ದಾರೆ.

ಅಲ್ಲದೆ ರಾಹುಲ್ ಗಾಂಧಿ ತನ್ನ ತಾಯಿ ಸೋನಿಯಾ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಯಾಕೆ ದಾಖಲಿಸಬಾರದು? ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿತವಾಗಿಯೂ ಅವರನ್ನು ಚೆನ್ನಾಗಿ ನೋಡಿಕೊಳ್ತಾರೆ ಎಂದು ಸಿಟಿ ರವಿ ಹೇಳಿದ್ದಾರೆ.

ಸೋನಿಯಾ ಗಾಂಧಿ ವೈದ್ಯರ ಸಲಹೆಯಂತೆ ವೈದ್ಯಕೀಯ ತಪಾಸಣೆಗೆಗಾಗಿ ವಿದೇಶಕ್ಕೆ ತೆರಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಂಚ ರಾಜ್ಯಗಳ ಚುನವಣಾ ಫಲಿತಾಂಶ ಶನಿವಾರದಂದು ಹೊರಬೀಳಲಿರುವ ಮಧ್ಯೆಯೇ ಅವರು ವಿದೇಶಕ್ಕೆ ತೆರಳಿದ್ದರೆ. 3-4 ದಿನಗಳ ಬಳಿಕ ಸೋನಿಯಾ ವಾಪಸಾಗಲಿದ್ದಾರೆ ಎಂದು ಹೇಳಲಾಗಿದೆ.

 

Leave a Reply

Your email address will not be published. Required fields are marked *