ಕೇವಲ 1 ನಿಮಿಷದಲ್ಲಿ ದೇಶದ ಎಲ್ಲಾ ರಾಜ್ಯಗಳ ರಾಜಧಾನಿ ಹೆಸರು ಹೇಳ್ತಾಳೆ 2ರ ಕಂದಮ್ಮ!- ವಿಡಿಯೋ

Public TV
1 Min Read
GIRL CAPITAL

ಚಂಡೀಗಢ: 2 ವರ್ಷದ ಪುಟ್ಟ ಬಾಲಕಿಯೊಬ್ಬಳು ಭಾರತದ ದೇಶದ ಎಲ್ಲಾ ರಾಜ್ಯದ ರಾಜಧಾನಿಗಳನ್ನು ಪಟಾ ಪಟಾಂತ ಹೇಳೋ ಮೂಲಕ ಸುದ್ದಿಯಾಗಿದ್ದಾಳೆ.

ಹೌದು, ಹರ್ಯಾಣ ಪಂಚಕುಲಾದ ಅಮಾರ್ಯಾ ಗುಲಾಟಿ ಎಂಬ ಬಾಲಕಿ ಕೇವಲ 1 ನಿಮಿಷದಲ್ಲಿ ಎಲ್ಲಾ ರಾಜ್ಯದ ರಾಜಧಾನಿಗಳ ಹೆಸರನ್ನು ಹೇಳುವಲ್ಲಿ ಯಶಸ್ವಿಯಾಗುತ್ತಾಳೆ. ಸದ್ಯ ಈಕೆ ರಾಜಧಾನಿಗಳ ಹೆಸರನ್ನು ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈಕೆಯ ತೊದಲು ಮಾತುಗಳಿಂದ ಎಲ್ಲರೂ ಪ್ರಭಾವಿತರಾಗಿದ್ದಾರೆ.

ತೊದಲು ಮಾತಾಡುತ್ತಿರುವ ಈ ಪುಟ್ಟ ಬಾಲಕಿ ರಾಜ್ಯದ ರಾಜಧಾನಿಗಳ ಹೆಸರನ್ನು ಅಸ್ಪಷ್ಟವಾಗಿಯೇ ಹೇಳುತ್ತಾಳೆ. ಈಕೆಯ ಈ ಮಾತುಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರನ್ನು ಆಕರ್ಷಿಸಿದ್ದಾಳೆ. ಅಮಾರ್ಯಾ 7 ತಿಂಗಳ ಮಗುವಿದ್ದಾಗಲೇ ಆಕೆಯ ತಾಯಿ ರಾಜಧಾನಿಗಳು ಹಾಗೂ ಕೆಲವೊಂದು ಸ್ಥಳಗಳ ಹೆಸರನ್ನು ಹೇಳಿಕೊಡಲು ಆರಂಭಿಸಿದ್ದರು. ಹೀಗಾಗಿ ಈಕೆ ಇಂದು ಇಷ್ಟೊಂದು ಸುಲಲಿತವಾಗಿ ರಾಜಧಾನಿಗಳ ಹೆಸರನ್ನು ಹೇಳಬಲ್ಲವಳಾಗಿದ್ದಾಳೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಇಷ್ಟು ಮಾತ್ರವಲ್ಲದೇ ಈಕೆ ಈಗಾಗಲೇ ದೇಶದ ವಿವಿಧ ನಗರಗಳ ಹೆಸರನ್ನು ಹೇಳುವ ಸ್ಥರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾಳೆ. ಒಟ್ಟಿನಲ್ಲಿ ಸದ್ಯ ಅಮಾರ್ಯ ತನ್ನ ತೊದಲು ಮಾತುಗಳಿಂದ ಸಾಮಾಜಿಕ ಜಾಲತಾಣಿಗರ ಮನಸ್ಸನ್ನು ಗೆದ್ದಿದ್ದಾಳೆ.

Amayra Gulati

Share This Article