ಕ್ರೈಸ್ಟ್ ಚರ್ಚ್: ಮಹಿಳಾ ವರ್ಲ್ಡ್‌ಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಕೊನೆಯ ಎಸೆತದಲ್ಲಿ ಸೋಲನುಭವಿಸಿದ ಭಾರತ ತಂಡಕ್ಕೆ ಕಪ್ ಗೆಲ್ಲುವ ಕನಸು ಭಗ್ನವಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ 7 ವಿಕೆಟ್ ನಷ್ಟಕ್ಕೆ 274 ರನ್‍ಗಳ ಗುರಿಯನ್ನು ನೀಡಿತ್ತು. ತಂಡದ ಬೃಹತ್ ಮೊತ್ತಕ್ಕೆ ಶಫಾಲಿ ವರ್ಮಾ, ಸ್ಮೃತಿ ಮಂಧಾನ ಮತ್ತು ಮಿಥಾಲಿ ರಾಜ್ ಅವರು ಅರ್ಧಶತಕಗಳ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು.
Advertisement
Advertisement
275 ರನ್‍ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಮಾಡಿತ್ತು. ಆದರೆ ಹರ್ಮನ್‍ಪ್ರಿತ್ ಆಕ್ರಮಣಕಾರಿ ಬೌಲ್ ಮಡುವ ಮೂಲಕ ದಕ್ಷಿಣ ಆಫ್ರಿಕಾವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು. ಪಂದ್ಯವು ಕೊನೆಯ ಓವರ್‌ನವರೆಗೂ ರೋಚಕತೆಯನ್ನು ಹೊಂದಿತ್ತು. ಇದನ್ನೂ ಓದಿ: ಕರ್ನಾಟಕ ಚಿತ್ರಕಲಾ ಪರಿಷತ್ತಿಗೆ ಡೀಮ್ಡ್ ವಿವಿ ಮಾನ್ಯತೆ: ಬೊಮ್ಮಾಯಿ
Advertisement
ಇನ್ನೆನ್ನೂ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಲು ಕೊನೆಯ 6 ಎಸೆತಗಳಲ್ಲಿ 7 ರನ್ ಬೇಕಿತ್ತು. ದೀಪ್ತಿ ಶರ್ಮಾ ಎಸೆದ ಕೊನೆಯ ಓವರ್‌ನ 5ನೇ ಎಸೆತ ನೋ ಬಾಲ್ ಎಸೆದರು. ಇದರಿಂದಾಗಿ ದಕ್ಷಿಣ ಆಫ್ರಿಕಾ ಫ್ರೀಹಿಟ್‍ನಲ್ಲಿ 6 ರನ್ ಸಿಡಿಸಿ ಗೆಲುವು ಸಾಧಿಸಿತು. ಪ್ಲೇಯರ್ ಆಫ್ ದಿ ಮ್ಯಾಚ್‍ನ್ನು ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಮಿಗ್ನಾನ್ ಡು ಪ್ರೀಜ್ (52)ಪಡೆದುಕೊಂಡರು. ಈ ಮೂಲಕ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡಿಸ್ ತಂಡ ಸೆಮಿಫೈನಲ್‍ನ್ನು ಪ್ರವೇಶಿಸಿದೆ.