ನವದೆಹಲಿ: ವಿಶ್ವಕಪ್ ಗೆದ್ದ ಟೀಂ ಇಂಡಿಯಾ (Team India Women) ವನಿತೆಯರ ಕ್ರಿಕೆಟ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ (PM Modi) ಇಂದು (ನ.5) ಭೇಟಿಯಾಗಿ ಅಭಿನಂದಿಸಲಿದ್ದಾರೆ.
ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ ಭಾರತ ತಂಡವು ಬುಧವಾರ (ನ.5) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ತಂಡವನ್ನು ಅಭಿನಂದಿಸಿ, ಸನ್ಮಾನಿಸಲಿದ್ದಾರೆ. ಇದನ್ನೂ ಓದಿ: CWC 2025 | ಪಂದ್ಯದ ಗತಿ ಬದಲಿಸಿದ 42ನೇ ಓವರ್ ಮತ್ತು ಆ ಒಂದು ಕ್ಯಾಚ್!
ನ.3ರಂದು ಪಿಎಂ ಕಚೇರಿಯಿಂದ ಆಹ್ವಾನ ಬಂದಿದ್ದು, ಮಂಗಳವಾರ (ನ.4) ಹರ್ಮನ್ ಪ್ರೀತ್ ಕೌರ್ ಪಡೆಯು ಮುಂಬೈನಿಂದ ನವದೆಹಲಿಗೆ ಆಗಮಿಸಿದೆ. ಪ್ರಧಾನಿ ಭೇಟಿಗೆ ಕಾತುರರಾಗಿರೋದಾಗಿ ತಂಡ ಹೇಳಿಕೊಂಡಿದೆ.
2025ರ ಮಹಿಳಾ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 52 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಸೋತು ಬ್ಯಾಟ್ ಮಾಡಿದ ಭಾರತ ಮಹಿಳಾ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿತು. 299ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವನ್ನು 45.3 ಓವರ್‌ಗಳಲ್ಲಿ 246ರನ್‌ಗೆ ಆಲೌಟ್ ಮಾಡಿತು.
ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ತಂಡಕ್ಕೆ ಪ್ರಧಾನಿ ಮೋದಿ ಶುಭಹಾರೈಸಿದ್ದರು. ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2025 ಫೈನಲ್ಸ್‌ನಲ್ಲಿ ಭಾರತ ತಂಡದ ಅದ್ಭುತ ಗೆಲುವು ಸಾಧಿಸಿದೆ. ಫೈನಲ್ ಪಂದ್ಯದಲ್ಲಿ ಅವರು ತೋರಿದ ಪ್ರದರ್ಶನವು ಉತ್ತಮ ಕೌಶಲ್ಯ ಮತ್ತು ಆತ್ಮವಿಶ್ವಾಸದಿಂದ ಕೂಡಿತ್ತು. ತಂಡವು ಟೂರ್ನಿಯುದ್ಧಕ್ಕೂ ಅಸಾಧಾರಣ ಸಾಮರ್ಥ್ಯ ತೋರಿದ, ದೃಢತೆ ಸಾಬೀತುಪಡಿಸಿದ ನಮ್ಮ ಕ್ರೀಡಾಪಟುಗಳಿಗೆ ಅಭಿನಂದನೆಗಳು ಎಂದು ಶುಭಹಾರೈಸಿದ್ದರು.ಇದನ್ನೂ ಓದಿ: CWC 2025 | ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿದ ವನಿತೆಯರಿಗೆ ಮೋದಿ ಅಭಿನಂದನೆ

