ನವದೆಹಲಿ: ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ (Women’s World Boxing Championship) ನಿಖತ್ ಜರೀನ್ (Nikhat Zareen), ಲವ್ಲಿನಾ ಬೊರ್ಗೊಹೈನ್ (Lovlina Borgohain) ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ.
ನವದೆಹಲಿಯಲ್ಲಿ ನಡೆದ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ 52 ಕೆ.ಜಿ. ವಿಭಾಗದಲ್ಲಿ ವಿಯೆಟ್ನಾಂನ ಗುಯೆನ್ ಥಿ ಟಾಮ್ ವಿರುದ್ಧ ಭಾರತದ ನಿಖತ್ ಜರೀನ್ 0-5 ಅಂತರದ ಜಯ ಸಾಧಿಸಿದರು. ಆ ಮೂಲಕ ಎರಡನೇ ಬಾರಿಗೆ ಚಾಂಪಿಯನ್ ಎನಿಸಿದರು. ಇದನ್ನೂ ಓದಿ: Women’s World Boxing Championships: ಚಿನ್ನ ಗೆದ್ದು ದಾಖಲೆ ಬರೆದ ನೀತು ಘಂಘಾಸ್
Advertisement
Advertisement
75 ಕೆಜಿ ವಿಭಾಗದಲ್ಲಿ ಲವ್ಲಿನಾ ಅವರು ಆಸ್ಟ್ರೇಲಿಯಾದ ಕೈಟ್ಲಿನ್ ಪಾರ್ಕರ್ ವಿರುದ್ಧ 5-2 ಅಂತರದಲ್ಲಿ ಗೆದ್ದು ಬೀಗಿದರು.
Advertisement
Advertisement
ಮೇರಿ ಕೋಮ್ ಅವರನ್ನು ಹೊರತುಪಡಿಸಿ ಒಂದಕ್ಕಿಂತ ಹೆಚ್ಚು ಸಲ ಚಾಂಪಿಯನ್ ಆದ ಬಾಕ್ಸರ್ ಎಂಬ ಖ್ಯಾತಿಯನ್ನು ನಿಖತ್ ಗಳಿಸಿದ್ದಾರೆ. ಈ ಹಿಂದೆ ಮೇರಿ ಕೋಮ್ ಅವರು ಆರು ಬಾರಿ ವಿಶ್ವ ಚಾಂಪಿಯನ್ ಆಗಿದ್ದರು. ಸರಿತಾ ದೇವಿ (2006), ಜೆನ್ನಿ ಆರ್.ಎಲ್. (2006) ಹಾಗೂ ಲೇಖಾ ಕೆ.ಸಿ. (2006) ಅವರು ಒಂದೊಂದು ಬಾರಿ ಚಾಂಪಿಯನ್ ಆಗಿದ್ದರು. ಇದನ್ನೂ ಓದಿ: ಪ್ರಶ್ನೆಪತ್ರಿಕೆಯಲ್ಲಿ ಕೊಹ್ಲಿ ಫೋಟೋ ನೋಡಿ ವಿದ್ಯಾರ್ಥಿಗಳು ಶಾಕ್!
ನಾನು 2ನೇ ಬಾರಿಗೆ ವಿಶ್ವ ಚಾಂಪಿಯನ್ ಆದದ್ದು ಖುಷಿ ತಂದಿದೆ. ನನಗೆ ಬೆಂಬಲ ನೀಡಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಈ ಪದಕ ನನ್ನ ದೇಶ ಭಾರತಕ್ಕೆ. ಇದು ಕಠಿಣ ಸ್ಪರ್ಧೆಯಾಗಿತ್ತು. ಆದರೆ ಕೊನೆಯಲ್ಲಿ ನಾನು ಚಿನ್ನದ ಪದಕವನ್ನು ಗೆದ್ದೆ ಎಂದು ನಿಖತ್ ಖುಷಿ ಹಂಚಿಕೊಂಡಿದ್ದಾರೆ.