ಚಂಡೀಗಢ: ಈ ಬಾರಿ ಸ್ವಾತಂತ್ರ್ಯ ದಿನ ಹಾಗೂ ರಕ್ಷಾಬಂಧನ ಹಬ್ಬ ಒಟ್ಟಿಗೆ ಬಂದಿದೆ. ಹೀಗಾಗಿ ಅಟ್ಟಾರಿ- ವಾಘಾ ಗಡಿ ಪ್ರದೇಶದಲ್ಲಿ ಇಂದು ಬಿಎಸ್‍ಎಫ್ ಯೋಧರಿಗೆ ಮಹಿಳೆಯರು ರಾಕಿ ಕಟ್ಟುವ ಮೂಲಕ ರಕ್ಷಾ ಬಂಧನ್ ಹಬ್ಬವನ್ನು ಖುಷಿಯಿಂದ ಆಚರಿಸಿದ್ದಾರೆ.
ಇಂದು ದೇಶದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಾಗೆಯೇ ಇಂದು ರಕ್ಷಾಬಂಧನ ಹಬ್ಬ ಕೂಡ ಬಂದಿರುವುದು ವಿಶೇಷವಾಗಿದೆ. ಹೀಗಾಗಿ ದೇಶದ ವಿವಿಧ ಕಡೆಗಳಿಂದ ವಾಘಾ ಗಡಿಗೆ ಆಗಮಿಸಿದ್ದ ಮಹಿಳೆಯರು ಭದ್ರತಾ ಪಡೆ ಸಿಬ್ಬಂದಿಗೆ ರಾಕಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬದ ಶುಭಾಶಯ ಕೋರಿದರು.
Advertisement
Punjab: Women tie rakhis to Border Security Force (BSF) personnel at Attari-Wagah border. pic.twitter.com/8RWjX4rS7X
— ANI (@ANI) August 15, 2019
Advertisement
ಈ ವೇಳೆ ಪುಣೆಯಿಂದ ಬಂದಿದ್ದ ಮಹಿಳೆಯೊಬ್ಬರು ಮಾತನಾಡಿ, ಗಡಿ ಭಾಗದಲ್ಲಿ ರಕ್ಷಾ ಬಂಧನ ಆಚರಿಸುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ದೇಶಕ್ಕಾಗಿ ಹಗಲಿರುಳು ಶ್ರಮಪಟ್ಟು ಸೇವೆ ಸಲ್ಲಿಸುವ ಯೋಧರಿಗೆ ಧನ್ಯವಾದ ಎಂದು ಸಂತೋಷ ಹಂಚಿಕೊಂಡರು.
Advertisement
ಅಷ್ಟೇ ಅಲ್ಲದೆ ಮಹಿಳೆಯರಿಂದ ರಾಕಿ ಕಟ್ಟಿಸಿಕೊಂಡ ಯೋಧರು ಕೂಡ ಪ್ರೀತಿಯಿಂದ ಸಿಹಿ ನೀಡಿ ಮಹಿಳೆಯರಿಗೆ ಶುಭಕೋರಿ ಸಂತಸಪಟ್ಟರು.