ದಿಸ್ಪುರ್: ಬಾಲ್ಯವಿವಾಹ (Child Marriage) ತಡೆಗೆ ಅಸ್ಸಾಂ ಸರ್ಕಾರ ಕಠಿಣ ಕಾರ್ಯಾಚರಣೆ ಕೈಗೊಂಡಿದೆ. ಬಾಲ್ಯ ವಿವಾಹದ ವಿರುದ್ಧ ಸಮರ ಸಾರಿರುವ ಪೊಲೀಸರು (Assam Police) 2 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಈ ಕ್ರಮ ವಿರೋಧಿಸಿ ರಾಜ್ಯದ ವಿವಿಧೆಡೆ ಹೆಚ್ಚಿನ ಸಂಖ್ಯೆಯ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ (Protest) ನಡೆಸುತ್ತಿದ್ದಾರೆ.
ತಮ್ಮ ಪತಿ ಹಾಗೂ ಪುತ್ರರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದಾರೆ. ಕುಟುಂಬ ಆರ್ಥಿಕ ನಿರ್ವಹಣೆಗೆ ಬೇರೆ ದಾರಿಯಿಲ್ಲ, ಪುರುಷರನ್ನು ಮಾತ್ರ ಏಕೆ ಬಂಧಿಸಬೇಕು? ನಾವು ನಮ್ಮ ಮಕ್ಕಳು ಬದುಕುವುದಾದರೂ ಹೇಗೆ? ಎಂದು ಮಹಿಳೆಯರು ಪ್ರಶ್ನಿಸುತ್ತಿದ್ದಾರೆ.
Advertisement
Advertisement
ಇದೇ ವೇಳೆ ಮಹಿಳೆಯೊಬ್ಬರು `ನನ್ನ ಮಗ ಅಪ್ರಾಪ್ತ ಬಾಲಕಿಯೊಂದಿಗೆ ಓಡಿಹೋಗಿದ್ದಾನೆ. ಅವನು ತಪ್ಪು ಮಾಡಿದ್ದಾನೆ ನಿಜ. ಅದಕ್ಕಾಗಿ ನನ್ನ ಗಂಡನನ್ನ ಏಕೆ ಬಂಧಿಸಬೇಕು? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳಿಗೆ ಬಿಗ್ ಅಪ್ಡೇಟ್ ಕೊಟ್ಟ `ಮೌರ್ಯ’ ನಾಯಕಿ ಮೀರಾ ಜಾಸ್ಮಿನ್
Advertisement
ಇದೇ ವೇಳೆ ಹೇಸರು ಹೇಳಲಿಚ್ಚಿಸದ ಮಹಿಳೆ, ನನ್ನ ಸೊಸೆ ಮದುವೆಯಾದಾಗ 17 ವರ್ಷ, ಈಗ ಅವಳಿಗೆ 19 ವರ್ಷವಾಗಿದೆ. ಆಕೆ 5 ತಿಂಗಳ ಗರ್ಭಿಣಿಯಾಗಿದ್ದಾಳೆ (Pregnant Women). ಪತಿಯನ್ನ ಜೈಲಿಗೆ ಎಳೆದುಕೊಂಡು ಹೋದ್ರೆ ಅವಳನ್ನ ಯಾರು ನೋಡಿಕೊಳ್ತಾರೆ ಎಂದಿದ್ದಾರೆ.
Advertisement
ಬಾಲ್ಯ ವಿವಾಹ ತಡೆಗೆ ಕಠಿಣ ಕಾರ್ಯಾಚರಣೆ ಕೈಗೊಂಡಿರುವ ಅಸ್ಸಾಂ ಪೊಲೀಸರು ಈಗಾಗಲೇ 2000ಕ್ಕೂ ಹೆಚ್ಚು ಮಂದಿಯನ್ನ ಬಂಧಿಸಿದ್ದಾರೆ. ಜನವರಿ 23ರಂದು ಸಚಿವ ಸಂಪುಟದಲ್ಲಿ ಅಸ್ಸಾಂ ಸರ್ಕಾರ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದು, 10 ದಿನಗಳಲ್ಲೇ 4,004 ಕೇಸ್ಗಳು ದಾಖಲಾಗಿವೆ. 8 ಸಾವಿರ ಆರೋಪಿ ಪಟ್ಟಿಗಳನ್ನು ಹೊಂದಿರುವ ಪೊಲೀಸರು ಒಬ್ಬೊಬ್ಬರನ್ನೂ ಬಂಧಿಸುತ್ತಿದ್ದಾರೆ. ಈಗಾಗಲೇ 2 ಸಾವಿರಕ್ಕೂ ಅಧಿಕ ಮಂದಿಯನ್ನ ಜೈಲಿಗಟ್ಟಿದ್ದಾರೆ. ಅವರಲ್ಲಿ ಧಾರ್ಮಿಕ ಸಂಸ್ಥೆಗಳಲ್ಲಿ ವಿವಾಹ ಕಾರ್ಯಕ್ರಮ ನಡೆಸಿದ 51 ಪುರೋಹಿತರೂ ಇದ್ದಾರೆ.
14 ವರ್ಷದೊಳಗಿನ ಹುಡುಗಿಯರನ್ನ ಮದುವೆಯಾದವರ ವಿರುದ್ಧ ಪೋಕ್ಸೋ (POCSO) ಕೇಸ್ ಹಾಗೂ 14 ರಿಂದ 18 ವರ್ಷದೊಳಗಿನ ಹುಡುಗಿಯರನ್ನು ಮದುವೆಯಾಗಿದ್ರೆ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಅಡಿಯಲ್ಲಿ ಪ್ರಕರಣ ದಾಖಲಿಸಲು ಸಚಿವ ಸಂಪುಟ ನಿರ್ಧರಿಸಿತ್ತು. ಇದನ್ನೂ ಓದಿ: ತುಮಕೂರಿನ HAL ಭಾರತದಲ್ಲೇ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಕೇಂದ್ರ – ಏನಿದರ ವೈಶಿಷ್ಟ್ಯ?
ಅಸ್ಸಾಂನಲ್ಲಿ ತಾಯಂದಿರು ಹಾಗೂ ಶಿಶುಗಳ ಮರಣ ಪ್ರಮಾಣ ಹೆಚ್ಚಾಗಲು ಬಾಲ್ಯವಿವಾಹವು ಪ್ರಾಥಮಿಕ ಕಾರಣವಾಗಿದೆ. ರಾಜ್ಯದಲ್ಲಿ ನೋಂದಣಿಯಾದ ಶೇ.31ರಷ್ಟು ವಿವಾಹಗಳು ನಿಷೇಧಿತ ವಯೋಮಿತಿಯಲ್ಲಿವೆ ಎಂದು ಗುರುತಿಸಲಾಗಿದೆ. ಇನ್ನೂ 6 ದಿನಗಳ ಕಾಲ ಈ ಕಾರ್ಯಾರಣೆ ಮುಂದುವರಿಯಲಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k