ಮುಂಬೈ: ಮಾರ್ಚ್ 4 ರಿಂದ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (WPL) ಆವೃತ್ತಿ ಆರಂಭವಾಗುತ್ತಿದ್ದು, ಮುಂಬೈನಲ್ಲಿ (Mumbai) ಅದ್ಧೂರಿ ಚಾಲನೆ ದೊರೆಯಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಬಾಲಿವುಡ್ ತಾರೆಯರಾದ ಕಿಯಾರಾ ಅಡ್ವಾಣಿ (Kiara Advani) ಹಾಗೂ ಕೃತಿ ಸನೋನ್ (Kriti Sanon) ಅದ್ಧೂರಿ ವೇದಿಕೆಯಲ್ಲಿ ಸೊಂಟ ಬಳುಕಿಸಲಿದ್ದಾರೆ. ಇದರೊಂದಿಗೆ ಪಂಜಾಬಿ ಗಾಯಕ ಎ.ಪಿ ಧಿಲ್ಲೋನ್ ಗಾಯನ ಪ್ರಸ್ತುತಪಡಿಸಲಿದ್ದಾರೆ. ರಾತ್ರಿ 8 ಗಂಟೆಗೆ ಮೊದಲ ಪಂದ್ಯ ಆರಂಭವಾಗಲಿದೆ.
Advertisement
Advertisement
ಮುಂಬೈನ ಬ್ರಬೋನ್ ಹಾಗೂ ಡಿವೈ ಪಾಟೀಲ ಕ್ರೀಡಾಂಗಣಗಳು ಸಜ್ಜಾಗಿದ್ದು, ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಸೆಣಸಲಿವೆ. ಇದನ್ನೂ ಓದಿ: WPL ಉದ್ಘಾಟನಾ ಸಮಾರಂಭದಲ್ಲಿ ಸೊಂಟ ಬಳುಕಿಸಲಿದ್ದಾರೆ ಬಾಲಿವುಡ್ ತಾರೆಯರು
Advertisement
ಟೂರ್ನಿ ಮಾದರಿ ಹೇಗೆ?
ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಲೀಗ್ ಹಂತ ನಡೆಯಲಿದೆ. ಪ್ರತಿ ತಂಡ ಇತರ 4 ತಂಡಗಳ ವಿರುದ್ಧ ತಲಾ 2 ಬಾರಿ ಸೆಣಸಲಿವೆ. ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. 2 ಮತ್ತು 3ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ನಲ್ಲಿ ಸೆಣಸಲಿವೆ. ಇದನ್ನೂ ಓದಿ: WPL 2023ː ಮಹಿಳೆಯರು, ಹುಡ್ಗೀರಿಗೆ ಪ್ರವೇಶ ಉಚಿತ, ಯಾರೂ ಬೇಕಾದ್ರೂ ಹೋಗ್ಬೋದು
Advertisement
ಯಾವ ದಿನ ಯಾವ ತಂಡ ಕಾದಾಟ?
ಮಾರ್ಚ್ 04: ಗುಜರಾತ್ ಜೈಂಟ್ಸ್ Vs ಮುಂಬೈ ಇಂಡಿಯನ್ಸ್ – ಡಿವೈ ಪಾಟೀಲ್ ಸ್ಟೇಡಿಯಂ
ಮಾರ್ಚ್ 05: ಆರ್‌ಸಿಬಿ Vs ಡೆಲ್ಲಿ ಕ್ಯಾಪಿಟಲ್ಸ್ – ಬ್ರಬೋರ್ನ್ ಸ್ಟೇಡಿಯಂ – ಮಧ್ಯಾಹ್ನ 3:30ಕ್ಕೆ
ಮಾರ್ಚ್ 05: ಯುಪಿ ವಾರಿಯರ್ಝ್ Vs ಗುಜರಾತ್ ಜೈಂಟ್ಸ್ – ಡಿವೈ ಪಾಟೀಲ್ ಸ್ಟೇಡಿಯಂ – ಸಂಜೆ 7:30ಕ್ಕೆ
ಮಾರ್ಚ್ 06: ಮುಂಬೈ ಇಂಡಿಯನ್ಸ್ Vs ಆರ್‌ಸಿಬಿ – ಬ್ರಬೋರ್ನ್ – ಸಂಜೆ 7:30ಕ್ಕೆ
ಮಾರ್ಚ್ 07: ಡೆಲ್ಲಿ ಕ್ಯಾಪಿಟಲ್ಸ್ Vs ಯುಪಿ ವಾರಿಯರ್ಝ್ – ಡಿವೈ ಪಾಟೀಲ್ ಸ್ಟೇಡಿಯಂ – ಸಂಜೆ 07:30ಕ್ಕೆ
ಮಾರ್ಚ್ 08 – ಗುಜರಾತ್ ಜೈಂಟ್ಸ್ Vs ಆರ್‌ಸಿಬಿ – ಬ್ರಬೋರ್ನ್ ಸ್ಟೇರಿಯಂ – ಸಂಜೆ 07:30ಕ್ಕೆ
ಮಾರ್ಚ್ 09: ಡೆಲ್ಲಿ ಕ್ಯಾಪಿಟಲ್ಸ್ Vs ಮುಂಬೈ ಇಂಡಿಯನ್ಸ್ – ಡಿವೈ ಪಾಟೀಲ್ ಸ್ಟೇಡಿಯಂ – ಸಂಜೆ 7:30ಕ್ಕೆ
ಮಾರ್ಚ್ 10: ಆರ್‌ಸಿಬಿ Vs ಯುಪಿ ವಾರಿಯರ್ಝ್ – ಬ್ರಬೋರ್ನ್ ಸ್ಟೇಡಿಯಂ – ಸಂಜೆ 07:30ಕ್ಕೆ
ಮಾರ್ಚ್ 11: ಗುಜರಾತ್ ಜೈಂಟ್ಸ್ Vs ಡೆಲ್ಲಿ ಕ್ಯಾಪಿಟಲ್ಸ್ – ಡಿವೈ ಪಾಟೀಲ್ ಸ್ಟೇಡಿಯಂ – ಸಂಜೆ 07:30ಕ್ಕೆ
ಮಾರ್ಚ್ 12: ಯುಪಿ ವಾರಿಯರ್ಝ್ Vs ಮುಂಬೈ ಇಂಡಿಯನ್ಸ್ – ಬ್ರಬೋರ್ನ್ ಸ್ಟೇಡಿಯಂ – ಸಂಜೆ 07:30ಕ್ಕೆ
ಮಾರ್ಚ್ 13: ಡೆಲ್ಲಿ ಕ್ಯಾಪಿಟಲ್ಸ್ Vs ಆರ್‌ಸಿಬಿ – ಡಿವೈ ಪಾಟೀಲ್ ಸ್ಟೇಡಿಯಂ – ಸಂಜೆ 07:30ಕ್ಕೆ
ಮಾರ್ಚ್ 14: ಮುಂಬೈ ಇಂಡಿಯನ್ಸ್ Vs ಗುಜರಾತ್ ಜೈಂಟ್ಸ್ – ಬ್ರಬೋರ್ನ್ ಸ್ಟೇಡಿಯಂ – ಸಂಜೆ 07:30ಕ್ಕೆ
ಮಾರ್ಚ್ 15: ಯುಪಿ ವಾರಿಯರ್ಝ್ Vs ಆರ್‌ಸಿಬಿ – ಡಿವೈ ಪಾಟೀಲ್ ಸ್ಟೇಡಿಯಂ – ಸಂಜೆ 07:30ಕ್ಕೆ
ಮಾರ್ಚ್ 16: ಡೆಲ್ಲಿ ಕ್ಯಾಪಿಟಲ್ಸ್ Vs ಗುಜರಾತ್ ಜೈಂಟ್ಸ್ – ಬ್ರಬೋರ್ನ್ ಸ್ಟೇಡಿಯಂ – ಸಂಜೆ 07:30ಕ್ಕೆ
ಮಾರ್ಚ್ 18: ಮುಂಬೈ ಇಂಡಿಯನ್ಸ್ Vs ಯುಪಿ ವಾರಿಯರ್ಝ್ – ಡಿವೈ ಪಾಟೀಲ್ ಸ್ಟೇಡಿಯಂ – ಮಧ್ಯಾಹ್ನ 03:30ಕ್ಕೆ
ಮಾರ್ಚ್ 18: ಆರ್‌ಸಿಬಿ Vs ಗುಜರಾತ್ ಜೈಂಟ್ಸ್ – ಬ್ರಬೋರ್ನ್ ಸ್ಟೇಡಿಯಂ – ಸಂಜೆ 07:30ಕ್ಕೆ
ಮಾರ್ಚ್ 20: ಗುಜರಾತ್ ಜೈಂಟ್ಸ್ Vs ಯುಪಿ ವಾರಿಯರ್ಝ್ – ಬ್ರಬೋರ್ನ್ ಸ್ಟೇಡಿಯಂ – ಮಧ್ಯಾಹ್ನ 3:30ಕ್ಕೆ
ಮಾರ್ಚ್ 20: ಮುಂಬೈ ಇಂಡಿಯನ್ಸ್ Vs ಡೆಲ್ಲಿ ಕ್ಯಾಪಿಟಲ್ಸ್ – ಡಿವೈ ಪಾಟೀಲ್ ಸ್ಟೇಡಿಯಂ – ಸಂಜೆ 07:30ಕ್ಕೆ
ಮಾರ್ಚ್ 21: ಆರ್‌ಸಿಬಿ Vs ಮುಂಬೈ ಇಂಡಿಯನ್ಸ್ – ಡಿವೈ ಪಾಟೀಲ್ ಕ್ರೀಡಾಂಗಣ – ಮಧ್ಯಾಹ್ನ 03:30ಕ್ಕೆ
ಮಾರ್ಚ್ 21: ಯುಪಿ ವಾರಿಯರ್ಝ್ Vs ಡೆಲ್ಲಿ ಕ್ಯಾಪಿಟಲ್ಸ್ – ಬ್ರಬೋರ್ನ್ ಸ್ಟೇಡಿಯಂ – ಸಂಜೆ 07:30ಕ್ಕೆ
ಮಾರ್ಚ್ 24: ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಎಲಿಮಿನೇಟರ್ ಪಂದ್ಯ – ಸಂಜೆ 07:30ಕ್ಕೆ
ಮಾರ್ಚ್ 26 – ಬ್ರಬೋರ್ನ್‌ನಲ್ಲಿ ಫೈನಲ್ – ಸಂಜೆ 07:30ಕ್ಕೆ