ಮುಂಬೈ: ಅಲಿಸ್ಸಾ ಹೀಲಿ (Alyssa Healy), ದೇವಿಕಾ ವೈದ್ಯ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಹಾಗೂ ಸಾಂಘಿಕ ಬೌಲಿಂಗ್ ಪರಾಕ್ರಮದಿಂದ ಯುಪಿ ವಾರಿಯರ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL) ಆರ್‌ಸಿಬಿ ತಂಡದಿಂದ ಎಂದಿನಂತೆ ಕಳಪೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ಮುಂದುವರಿಸಿದ್ದು, ನಾಲ್ಕನೇ ಪಂದ್ಯದಲ್ಲೂ ಹೀನಾಯ ಸೋಲನುಭವಿಸಿದೆ. ಇದನ್ನೂ ಓದಿ: Ind Vs Aus ಆಸ್ಟ್ರೇಲಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಇಳಿದಿದ್ದು ಯಾಕೆ?
Advertisement
Advertisement
ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ 19.3 ಓವರ್‌ಗಳಲ್ಲಿ 138 ರನ್‌ಗಳಿಗೆ ಸರ್ವಪತನ ಕಂಡಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಯುಪಿ ವಾರಿಯರ್ಸ್ (UP Warriorz) 13 ಓವರ್‌ಗಳಲ್ಲೇ 139 ರನ್ ಬಾರಿಸಿ 10 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.
Advertisement
ಆರಂಭಿಕರಾಗಿ ಕಣಕ್ಕಿಳಿದ ನಾಯಕಿ ಅಲಿಸ್ಸಾ ಹೀಲಿ ಹಾಗೂ ದೇವಿಕಾ ವೈದ್ಯ ವಿಕೆಟ್ ಬಿಟ್ಟುಕೊಡದೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಹೀಲಿ ಭರ್ಜರಿ 96 ರನ್ (47 ಎಸೆತ, 18 ಬೌಂಡರಿ) ಚಚ್ಚಿದರೆ, ದೇವಿಕಾ 31 ಎಸೆತಗಳಲ್ಲಿ 36 ರನ್ ಗಳಿಸಿದರು. 13ನೇ ಓವರ್‌ನ ಕೊನೆಯ ಎಸೆತದಲ್ಲಿ ಹೀಲಿ ಸಿಕ್ಸ್ ಸಿಡಿಸಿ ಶತಕ ಬಾರಿಸಲು ಯತ್ನಿಸಿದರು. ಆದರೆ ಕೇಲವ ಒಂದು ರನ್ ಕದಿಯುವಲ್ಲಿ ಯಶಸ್ವಿಯಾಗಿ ಶತಕ ವಂಚಿತರಾದರು.
Advertisement
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನಾಯಕಿ ಸ್ಮೃತಿ ಮಂದಾನ (Smriti Mandhana) ಸತತ 4ನೇ ಪಂದ್ಯದಲ್ಲೂ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದರು. ಸೋಫಿ ಡಿವೈನ್‌ನೊಂದಿಗೆ ಕಣಕ್ಕಿಳಿದ ಮಂದಾನ 4 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು. ಬಳಿಕ ಸೋಫಿ ಡಿವೈನ್ ಹಾಗೂ ಎಲ್ಲಿಸ್ ಪೆರ್ರಿ (Ellyse Perry) ಜೋಡಿ ಉತ್ತಮ ಪ್ರದರ್ಶನ ನೀಡಿತು. ಸೋಫಿ 24 ಎಸೆತಗಳಲ್ಲಿ 36 ರನ್‌ಗಳಿಸಿದರೆ, ಪೆರ್ರಿ 39 ಎಸೆತಗಳಲ್ಲಿ ಅವರು 52 ರನ್ ಬಾರಿಸಿ ಮಿಂಚಿದರು.
ಈ ಜೋಡಿ ಬೇರ್ಪಟ್ಟ ನಂತರ ಯಾರೊಬ್ಬರೂ ಸ್ಥಿರವಾಗಿ ನಿಲ್ಲದ ಕಾರಣ ಆರ್‌ಸಿಬಿ 19.3 ಓವರ್‌ಗಳಿಗೆ ಸರ್ವಪತನ ಕಂಡಿತು. ಇದನ್ನೂ ಓದಿ: IPL 2023: ಮಾಸ್ ಲುಕ್‌ನಲ್ಲಿ ಹಾಲಿ ಚಾಂಪಿಯನ್ಸ್ – ಮುಂಬೈ, ಟೈಟಾನ್ಸ್ ಹೊಸ ಜೆರ್ಸೆ ಅನಾವರಣ
ಇನ್ನು ಯುಪಿ ವಾರಿಯರ್ಸ್ ಪರವಾಗಿ ಸೋಫಿ ಎಕ್ಲೆಸ್ಟೋನ್ 4 ವಿಕೆಟ್ ಕಿತ್ತರೆ, ದೀಪ್ತಿ ಶರ್ಮಾ ಕೂಡ 3 ವಿಕೆಟ್ ಹಾಗೂ ರಾಜೇಶ್ವರಿ ಗಾಯಕ್ವಾಡ್ 1 ವಿಕೆಟ್ ಕಬಳಿಸಿದರು.