ನವದೆಹಲಿ: ನಾಯಕಿ ಹರ್ಮನ್ ಪ್ರೀತ್‌ಕೌರ್ ಅವರ ಬೆಂಕಿ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ಮಹಿಳಾ ತಂಡವು (Mumbai Indians Women) ಗುಜರಾತ್ ಜೈಂಟ್ಸ್ ಮಹಿಳಾ ತಂಡದ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದೆ.
ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುಜರಾತ್ (Gujarat Giants Women) ನೀಡಿದ 191ರನ್‌ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ 19.5 ಓವರ್‌ಗಳಲ್ಲಿ ನಿಗದಿ ಗುರಿ ತಲುಪಿ ಯಶಸ್ಸುಕಂಡಿತು ಕೊನೆಯ 2 ಓವರ್‌ಗಳಲ್ಲಿ ಮುಂಬೈ ಗೆಲುವಿಗೆ 23 ರನ್‌ಗಳ ಅಗತ್ಯವಿತ್ತು, ಆದ್ರೆ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಅವರ ಸಿಕ್ಸರ್, ಬೌಂಡರಿ ನೆರವಿನಿಂದ 11 ಎಸೆತಗಳಲ್ಲೇ ಗುರಿ ತಲುಪುವಂತಾಯಿತು. 19ನೇ ಓವರ್‌ನಲ್ಲೇ 10 ರನ್ ಗಳಿಸಿದ ಮುಂಬೈ, ಕೊನೇ ಓವರ್‌ನ 5 ಎಸೆತಗಳಲ್ಲೇ 13 ರನ್ ಬಾರಿಸಿತು. ಒಟ್ಟಾರೆ ಕೊನೇ 30 ಎಸೆತಗಳಲ್ಲಿ ಮುಂಬೈ ಬರೋಬ್ಬರಿ 72 ರನ್ ಸಿಡಿಸಿ ಗೆಲುವು ತನ್ನದಾಗಿಸಿಕೊಂಡಿತು.
Advertisement
Advertisement
ಶನಿವಾರ ನಡೆದ ಮಹಿಳಾ ಕ್ರಿಕೆಟ್ ಅಭಿಮಾನಿಗಳ (Womens Cricket Fans) ಕಣ್ಣಿಗೆ ಹಬ್ಬವಾಗಿತ್ತು. ಇತ್ತಂಡದ ಆಟಗಾರರೂ ಸಿಕ್ಸರ್ – ಬೌಂಡರಿ ಮಳೆ ಸುರಿಸಿದರು. ಈ ಆಟದಲ್ಲಿ ಬರೋಬ್ಬರಿ 44 ಬೌಂಡರಿ, 13 ಸಿಕ್ಸರ್‌ಗಳು ದಾಖಲಾದವು. ಈ ಪೈಕಿ ಮುಂಬೈ ಪರ 22 ಬೌಂಡರಿ, 7 ಸಿಕ್ಸರ್ ಸಿಡಿದರೆ, ಗುಜರಾತ್ ಪರ 22 ಬೌಂಡರಿ, 6 ಸಿಕ್ಸರ್‌ಗಳು ದಾಖಲಾಯಿತು. ಇದನ್ನೂ ಓದಿ: ಟೀಂ ಇಂಡಿಯಾಗೆ ಇನ್ನಿಂಗ್ಸ್, 64 ರನ್‌ಗಳ ಜಯ – ತಾರಾ ಆಟಗಾರರ ಗೈರಿನ ಮಧ್ಯೆಯೂ ಅತ್ಯುತ್ತಮ ಸಾಧನೆ
Advertisement
Advertisement
ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಮುಂಬೈ ತಂಡ ಆರಂಭದಲ್ಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. ಮುಂಬೈ ಪರ ಯಾಸ್ತಿಕಾ ಭಾಟಿಯಾ 49 ರನ್, ಹೇಲಿ ಮ್ಯಾಥೀವ್ಸ್ 18 ರನ್, ನಟಾಲಿ ಸ್ಕಿವರ್ ಬ್ರಂಟ್ 2 ರನ್ ಗಳಿಸಿ ಪೆವಿಲಿಯನ್ ಪೆರೇಡ್ ನಡೆಸಿದರು. ಆದ್ರೆ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಹರ್ಮನ್ ಪ್ರೀತ್‌ಕೌರ್ 48 ಎಸೆತಗಳಲ್ಲಿ ಅಜೇಯ 95 ರನ್ (10 ಬೌಂಡರಿ, 5 ಸಿಕ್ಸರ್) ಸಿಡಿಸುವ ಮೂಲಕ ಮುಂಬೈ ತಂಡಕ್ಕೆ ಗೆಲುವು ತಂದುಕೊಟ್ಟರು. ಅಮೇಲಿಯಾ ಕೇರ್ 12 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ತಂಡ ದಯಾಳನ್ ಹೇಮಲತಾ, ನಾಯಕಿ ಬೆತ್ ಮೂನಿ ಅವರ ಸ್ಫೋಟಕ ಅರ್ಧಶತಕಗಳ ನೆರವಿನಿಂದ ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್ ಕಲೆಹಾಕಿತು. ಇದನ್ನೂ ಓದಿ: ಯಶಸ್ವಿ ಅರ್ಧಶತಕ – 700 ರನ್ ಸಿಡಿಸಿ ಸಚಿನ್, ಕೊಹ್ಲಿ ದಾಖಲೆ ಉಡೀಸ್
ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಅಬ್ಬರಿಸಿದ ಲಾರಾ ವೊಲ್ವಾರ್ಡ್ಟ್ 13 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. 2ನೇ ವಿಕೆಟ್‌ಗೆ ಜೊತೆಯಾದ ಹೇಮಲತಾ ಹಾಗೂ ಬೆತ್ ಮೂನಿ 62 ಎಸೆತಗಳಲ್ಲಿ 121 ರನ್‌ಗಳ ಜೊತೆಯಾಟ ನೀಡಿದರು. ಹೇಮಲತಾ 40 ಎಸೆತಗಳಲ್ಲಿ ಸ್ಫೋಟಕ 74 ರನ್ (9 ಬೌಂಡರಿ, 2 ಸಿಕ್ಸರ್) ಚಚ್ಚಿದರೆ, ಬೆತ್ ಮೂನಿ 35 ಎಸೆತಗಳಲ್ಲಿ 66 ರನ್ (8 ಬೌಂಡರಿ, 3 ಸಿಕ್ಸರ್) ಬಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಭಾರತಿ ಫುಲ್ಮಾಲಿ 21 ರನ್‌ಗಳ ಕೊಡುಗೆ ನೀಡಿದರು. ಅಂತಿಮವಾಗಿ ಗುಜರಾತ್ ತಂಡ 190 ರನ್ ಗಳಿಸಿ 191 ರನ್ ಗಳ ಗುರಿ ನೀಡಿತ್ತು.