ಲಕ್ನೋ: ಬೆತ್ ಮೂನಿ (Beth Mooney) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಜೈಂಟ್ಸ್ (Gujarat Giants) ಯುಪಿ ವಾರಿಯರ್ಸ್(UP Warriorz) ವಿರುದ್ಧ 81 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್ 5 ವಿಕೆಟ್ ನಷ್ಟಕ್ಕೆ 186 ರನ್ ಹೊಡೆಯಿತು. ಕಠಿಣ ಗುರಿಯನ್ನು ಪಡೆದ ಯುಪಿ ವಾರಿಯರ್ಸ್ 17.1 ಓವರ್‌ಗಳಲ್ಲಿ 105 ರನ್ ಗಳಿಸಿ ಆಲೌಟ್ ಆಯ್ತು.
Advertisement
ಯುಪಿ ಪರ ಆರಂಭಿಕ ಆಟಗಾರ್ತಿ ಗ್ರೇಸ್ ಹ್ಯಾರಿಸ್ 25 ರನ್(30 ಎಸೆತ, 3 ಬೌಂಡರಿ) ಹೊಡೆದರೆ ಚಿನೆಲ್ಲೆ ಹೆನ್ರಿ 28 ರನ್( 14 ಎಸೆತ, 3 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟಾದರು.
Advertisement
Advertisement
ಗುಜರಾತ್ ಪರ ಕಾಶ್ವೀ ಗೌತಮ್ ಮತ್ತು ತನುಜಾ ಕನ್ವರ್ ತಲಾ 3 ವಿಕೆಟ್ ಪಡೆದರೆ ಡಿಯಾಂಡ್ರಾ ಡಾಟಿನ್ 2, ಮೇಘನಾ ಸಿಂಗ್ ಮತ್ತು ಆಶ್ಲೀ ಗಾರ್ಡ್ನರ್ ತಲಾ ಒಂದೊಂದು ವಿಕೆಟ್ ಪಡೆದರು.
Advertisement
ಗುಜರಾತ್ ಪರ ಆರಂಭಿಕ ಆಟಗಾರ್ತಿ ದಯಾಲನ್ ಹೇಮಲತಾ 3 ಎಸೆತಗಳಿಗೆ 2 ರನ್ ಗಳಿಸಿ ಮೊದಲ ವಿಕೆಟ್ ಒಪ್ಪಿಸಿದರು. ಬಳಿಕ ಎರಡನೇ ವಿಕೆಟಿಗೆ ಬೆತ್ ಮೂನಿ ಹಾಗೂ ಹರ್ಲೀನ್ ಡಿಯೋಲ್ 68 ಎಸೆತಗಳಿಗೆ 101 ರನ್ ಜೊತೆಯಾಟವಾಡಿದರು. ಇದನ್ನೂ ಓದಿ: ರೋಹಿತ್ ಶರ್ಮಾ ದಪ್ಪಗಿದ್ದಾರೆ – ಕಾಂಗ್ರೆಸ್ ವಕ್ತಾರೆ ಪೋಸ್ಟ್, ವಿವಾದದ ಬೆನ್ನಲ್ಲೇ ಪಕ್ಷದಿಂದ ಛೀಮಾರಿ
ಬೆತ್ ಮೂನಿ ಅಜೇಯ 96 ರನ್ (59 ಎಸೆತ, 17 ಬೌಂಡರಿ) ಹೊಡೆದರೆ ಹರ್ಲೀನ್ ಡಿಯೋಲ್ 45 ರನ್(32 ಎಸೆತ, 6 ಬೌಂಡರಿ) ಹೊಡೆದ ಪರಿಣಾಮ ತಂಡ 180 ರನ್‌ಗಳ ಗಡಿಯನ್ನು ದಾಟಿತ್ತು.
Placement 🤝 Power
Beth Mooney shows her class with hat-trick of 4️⃣s #GG are 133/2 with 5️⃣ overs to go!
Updates ▶️ https://t.co/shk0r97xOU#TATAWPL | #UPWvGG | @Giant_Cricket pic.twitter.com/Mx4lT5IIwq
— Women’s Premier League (WPL) (@wplt20) March 3, 2025