ಕಿರಣ್ ನವಗಿರೆ ಸ್ಫೋಟಕ ಅರ್ಧಶತಕ – ಬಲಿಷ್ಠ ಮುಂಬೈ ವಿರುದ್ಧ ಯಪಿಗೆ 7 ವಿಕೆಟ್‌ಗಳ ಜಯ

Public TV
2 Min Read
Kiran Navgire Grace Harris

ಬೆಂಗಳೂರು: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಯುಪಿ ವಾರಿಯರ್ಸ್‌ (UP Warriorz Women) ಮುಂಬೈ ಇಂಡಿಯನ್ಸ್‌ (Mumbai Indians Women) ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಡಬ್ಲ್ಯೂಪಿಎಲ್‌ (WPL) ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಗೆಲ್ಲಲು 162 ರನ್‌ಗಳ ಗುರಿಯನ್ನು ಪಡೆದ ಯುಪಿ ಇನ್ನೂ 21 ಎಸೆತ ಬಾಕಿ ಇರುವಂತೆಯೇ 3 ವಿಕೆಟ್‌ ಕಳೆದುಕೊಂಡು 163 ರನ್‌ ಹೊಡೆಯುವ ಮೂಲಕ ಜಯಗಳಿಸಿತು. ಇದನ್ನೂ ಓದಿ: ವಿಶ್ವಕಪ್‌ ಟೂರ್ನಿಯಲ್ಲಿ ಮಿಂಚಿದ್ದ ಶಮಿ ಕಾಲಿಗೆ ಶಸ್ತ್ರಚಿಕಿತ್ಸೆ – ಐಪಿಎಲ್‌ನಿಂದ ಹೊರಗೆ?

ಆರಂಭಿಕ ಆಟಗಾರ್ತಿ ಕಿರಣ್ ನವಗಿರೆ (Kiran Navgire) ಅವರ ಸ್ಫೋಟಕ ಅರ್ಧಶತಕದ ಜೊತೆ ಕೊನೆಯಲ್ಲಿ ಗ್ರೇಸ್ ಹ್ಯಾರಿಸ್ ಮತ್ತು ದೀಪ್ತಿ ಶರ್ಮಾ ಅವರ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಯುಪಿ ತಂಡ ವಿಜಯದ ನಗೆ ಬೀರಿತು.

ನಾಯಕಿ ಅಲಿಸ್ಸಾ ಹೀಲಿ 33 ರನ್‌ (29 ಎಸೆತ, 5 ಬೌಂಡರಿ), ಕಿರಣ್ ನವಗಿರೆ 57 ರನ್‌ (31 ಎಸೆತ, 6 ಬೌಂಡರಿ, 4 ಸಿಕ್ಸರ್‌), ಗ್ರೇಸ್‌ ಹ್ಯಾರಿಸ್‌ (Grace Harris) ಔಟಾಗದೇ 38 ರನ್‌ (17 ಎಸೆತ, 6 ಬೌಂಡರಿ, 1 ಸಿಕ್ಸರ್‌), ದೀಪ್ತಿ ಶರ್ಮಾ (Deepti Sharma) ಔಟಾಗದೇ 27 ರನ್‌(20 ಎಸೆತ, 4 ಬೌಂಡರಿ) ಹೊಡೆದರು.  ಇದನ್ನೂ ಓದಿ: BCCI ವಾರ್ಷಿಕ ಆಟಗಾರರ ರಿಟೈನರ್‌ಶಿಪ್ ಪಟ್ಟಿ ರಿಲೀಸ್‌ – ಯಶಸ್ವಿ, ರಿಂಕು ಪಡೆಯೋ ಸಂಬಳ ಎಷ್ಟು ಗೊತ್ತಾ?

ಒಂದು ಹಂತದಲ್ಲಿ ಯುಪಿ ಗೆಲುವಿಗೆ 54 ಎಸೆತದಲ್ಲಿ 64 ರನ್‌ ಬೇಕಿತ್ತು. ಈ ಹಂತದಲ್ಲಿ ಗ್ರೇಸ್‌ ಹ್ಯಾರಿಸ್‌ ಮತ್ತು ದೀಪ್ತಿ ಶರ್ಮಾ ಬೌಂಡರಿಗಳ ಸುರಿಮಳೆ ಸಿಡಿಸಿದರು.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ ಇಂಡಿಯನ್ಸ್‌ ಪರ ಹೇಲಿ ಮ್ಯಾಥ್ಯೂಸ್ ಮತ್ತು ಯಾಸ್ತಿಕಾ ಭಾಟಿಯಾ ಮೊದಲ ವಿಕೆಟಿಗೆ 50 ರನ್‌ ಜೊತೆಯಾಟವಾಡಿದರು.

ಯಾಸ್ತಿಕಾ ಭಾಟಿಯಾ 26 ರನ್‌ (22 ಎಸೆತ, 3 ಬೌಂಡರಿ, 1 ಸಿಕ್ಸರ್‌) ಹೊಡೆದು ಔಟಾದರೆ ಹೇಲಿ ಮ್ಯಾಥ್ಯೂಸ್ 55 ರನ್‌ (47 ಎಸೆತ, 9 ಬೌಂಡರಿ, 1 ಸಿಕ್ಸರ್‌) ಹೊಡೆದು ಔಟಾದರು. ನ್ಯಾಟ್ ಸ್ಕಿವರ್-ಬ್ರಂಟ್ 19 ರನ್‌ಗಳಿಸದಾಗ ರನೌಟ್‌ ಆದರೆ ಅಮೆಲಿಯಾ ಕೆರ್ 23 ರನ್‌ ಹೊಡೆದು ಔಟಾದರು.

ಮೂರು ಪಂದ್ಯವಾಡಿ ಒಂದು ಪಂದ್ಯ ಗೆದ್ದಿರುವ ಯುಪಿ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಸತತ ಎರಡು ಪಂದ್ಯಗಳನ್ನು ಗೆದ್ದಿರುವ ಆರ್‌ಸಿಬಿ ಮೊದಲ ಸ್ಥಾನದಲ್ಲಿದ್ದರೆ ಮೂರು ಪಂದ್ಯವಾಡಿ ಎರಡು ಗೆದ್ದಿರುವ ಮುಂಬೈ ಎರಡನೇ ಸ್ಥಾನದಲ್ಲಿದೆ.

Share This Article