ಬೆಂಗಳೂರು: ಸತತ ಎರಡು ಪಂದ್ಯಗಳನ್ನು ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಡಬ್ಲ್ಯೂಪಿಎಲ್ (WPL) ಟೂರ್ನಿಯಲ್ಲಿ ಮೊದಲ ಬಾರಿಗೆ ಸೋಲನ್ನು ಅನುಭವಿಸಿದೆ.
ಆರ್‌ಸಿಬಿ ವಿರುದ್ಧ 25 ರನ್‌ಗಳ ಜಯ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals ) 4 ಅಂಕದೊಂದಿಗೆ ಮೊದಲ ಸ್ಥಾನಕ್ಕೆ ಜಿಗಿದರೆ ಬೆಂಗಳೂರು ಎರಡನೇ ಸ್ಥಾನಕ್ಕೆ ಜಾರಿದೆ.
Advertisement
The Smriti storm ????️ has arrived in Bengaluru ????
FIFTY ???? for the opening wicket and #RCB are 52/0 after 6 overs.
Live ????????https://t.co/mKFymL1O3h#TATAWPL | #RCBvDC pic.twitter.com/TDxLG33cXF
— Women's Premier League (WPL) (@wplt20) February 29, 2024
Advertisement
ಗೆಲ್ಲಲು 195 ರನ್‌ಗಳ ಕಠಿಣ ಗುರಿಯನ್ನು ಪಡೆದ ಆರ್‌ಸಿಬಿ ಮಧ್ಯಮ ಕ್ರಮಾಂಕದ ಕುಸಿತದಿಂದಾಗಿ 20 ಓವರ್‌ಗಳಲ್ಲಿ 169 ರನ್‌ಗಳಿಗೆ ಆಲೌಟ್ ಆಗಿದೆ.
Advertisement
ಆರ್‌ಸಿಬಿ ಆರಂಭ ಉತ್ತಮವಾಗಿತ್ತು. ನಾಯಕಿ ಸ್ಮೃತಿ ಮಂಧಾನ (Smriti Mandhana) ಮತ್ತು ಸೋಫಿ ಡಿವೈನ್ ಮೊದಲ ವಿಕೆಟಿಗೆ 77 ರನ್ ಜೊತೆಯಾಟವಾಡಿದ್ದರು. 11.6 ಓವರಿಗೆ 112 ರನ್‌ಗಳಿಗೆ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಸ್ಮೃತಿ ಔಟಾದ ನಂತ ಕುಸಿತ ಆರಂಭವಾಯಿತು. ಇದನ್ನೂ ಓದಿ: ಐಪಿಎಲ್‍ನಿಂದ ಶಮಿ ಔಟ್ – ಟಿ20ಗೆ ಕಣಕ್ಕಿಳಿಸಲು ಬಿಸಿಸಿಐ ಚಿಂತನೆ
Advertisement
???????????? ???????? ????????????!
A humongous maximum ???? and an acrobatic save ????♀️
Plenty of action happening at the Chinnaswamy!
Live ????????https://t.co/mKFymL1O3h#TATAWPL | #RCBvDC pic.twitter.com/vT1v7eEIMH
— Women's Premier League (WPL) (@wplt20) February 29, 2024
ಸ್ಮೃತಿ ಮಂಧಾನ 74 ರನ್(43 ಎಸೆತ, 10 ಬೌಂಡರಿ, 3 ಸಿಕ್ಸರ್), ಸೋಫಿ ಡಿವೈನ್ 23 ರನ್ (17 ಎಸೆತ, 1 ಬೌಂಡರಿ, 2 ಸಿಕ್ಸರ್), ಸಬ್ಬಿನೇನಿ ಮೇಘನಾ 36 ರನ್(31 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು.ಇದನ್ನೂ ಓದಿ: BCCI ವಾರ್ಷಿಕ ಆಟಗಾರರ ರಿಟೈನರ್‌ಶಿಪ್ ಪಟ್ಟಿ ರಿಲೀಸ್ – ಯಶಸ್ವಿ, ರಿಂಕು ಪಡೆಯೋ ಸಂಬಳ ಎಷ್ಟು ಗೊತ್ತಾ?
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಪರವಾಗಿ ಶಫಾಲಿ ವರ್ಮಾ 50 ರನ್( 31 ಎಸೆತ, 3 ಬೌಂಡರಿ, 4 ಸಿಕ್ಸರ್), ಆಲಿಸ್ ಕ್ಯಾಪ್ಸಿ 46 ರನ್ ( 33 ಎಸೆತ, 4 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು.
The @DelhiCapitals hold their nerves to clinch a win in a high-scoring thriller! ????
They move to TOP of the Points Table ????????
Live ????????https://t.co/mKFymL1O3h#TATAWPL | #RCBvDC pic.twitter.com/vlWcVfpDc5
— Women's Premier League (WPL) (@wplt20) February 29, 2024
ಕೊನೆಯಲ್ಲಿ ಮಾರಿಜಾನ್ನೆ ಕಪ್ ಮತ್ತು ಜೆಸ್ ಜೊನಾಸೆನ್ 22 ಎಸೆತಗಳಲ್ಲಿ 48 ರನ್ ಚಚ್ಚಿದರು. ಮಾರಿಜಾನ್ನೆ ಕಪ್ 32 ರನ್ (16 ಎಸೆತ, 2 ಬೌಂಡರಿ, 3 ಸಿಕ್ಸರ್), ಜೆಸ್ ಜೊನಾಸೆನ್ ಔಟಾಗದೇ 36 ರನ್(16 ಎಸೆತ, 4 ಬೌಂಡರಿ, 2 ಸಿಕ್ಸರ್) ಹೊಡೆದ ಪರಿಣಾಮ ತಂಡದ ಮೊತ್ತ 190ರ ಗಡಿ ದಾಟಿತು.