ಮಹಿಳಾ ಏಕದಿನ ವಿಶ್ವಕಪ್: ಸ್ಮೃತಿ ಮಂಧಾನಗೆ ಗಾಯ

Public TV
2 Min Read
Smriti Mandhana

ನವದೆಹಲಿ: ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಆದ ಸ್ಮೃತಿ ಮಂಧಾನ ತಲೆಗೆ ಬೌಲ್ ಬಡಿದು ಗಾಯಗೊಂಡಿದ್ದಾರೆ.

ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಶಬ್ನಿಮ್ ಇಸ್ಮಾಯಿಲ್ ಅವರು ಎಸೆದ ಬೌನ್ಸರ್ ಅವರ ತಲೆಗೆ ಬಡೆದಿದೆ ಎಂದು ಐಸಿಸಿ ಕ್ರಿಕೆಟ್ ಮಂಡಳಿ ತಿಳಿಸಿದೆ. ಈ ವೇಳೆ ಗಾಯಗೊಂಡ ಎಡಗೈ ಬ್ಯಾಟರ್ ಸ್ಮೃತಿ ಅವರಿಗೆ ತಂಡದ ವೈದ್ಯರು ಚಿಕಿತ್ಸೆ ನೀಡಿದ್ದರು. ಆದರೂ ಒಂದೂವರೆ ಓವರ್‌ಗಳ ನಂತರ ಆಡಲಾಗದೆ ಗಾಯಗೊಂಡು ನಿವೃತ್ತಿ ಹೊಂದಿದ್ದಾರೆ. ಇದನ್ನೂ ಓದಿ:  ಐಪಿಎಲ್ 2022 – ಧೋನಿಯ ಹೊಸ ಮೀಸೆ ಲುಕ್ ವೈರಲ್

ವೈದ್ಯಕೀಯ ಸಿಬ್ಬಂದಿ ಪ್ರಕಾರ ಮಂಧಾನ ಅವರಿಗೆ ಹೇಳಿಕೊಳ್ಳುವಷ್ಟೇನು ಪೆಟ್ಟಾಗಿಲ್ಲ. ಆದರೆ ಅವರೇ ಸ್ವತಃ ಮುನ್ನಚ್ಚೆರಿಕೆಯಿಂದಾಗಿ ಮೈದಾನವನ್ನು ತೊರೆದಿದ್ದಾರೆ ಎಂದು ತಿಳಿಸಿದ್ದಾರೆ. ಭಾರತ ಮಹಿಳಾ ಕ್ರಿಕೆಟ್ ತಂಡವು ಈಗಾಗಲೇ ದಕ್ಷಿಣ ಆಫ್ರಿಕಾವನ್ನು 2 ರನ್‍ಗಳಿಂದ ಸೋಲಿಸಿದೆ.

ಅಂತಿಮ ಓವರ್‌ನಲ್ಲಿ ದಕ್ಷಿಣ ಆಫ್ರಿಕಾಗೆ ಗೆಲ್ಲಲು 8 ರನ್‍ಗಳ ಅಗತ್ಯವಿತ್ತು. ಆದರೆ ತಂಡವು ಕೇವಲ 5 ರನ್ ಗಳಿಸಿದ್ದು, ಅಂತಿಮವಾಗಿ ಭಾರತ ತಂಡವು 2 ರನ್‍ಗಳಿಂದ ರೋಚಕ ಗೆಲುವು ಸಾಧಿಸಿತು. ಇದನ್ನೂ ಓದಿ: ಅಲಿಯಾಗೆ ನನ್ನ ಮೇಲೆ ಕೈ ಮಾಡಲು 20 ಟೇಕ್ ತೆಗೆದುಕೊಂಡಿದ್ರು: ‘ಗಂಗೂಬಾಯಿ’ನಲ್ಲಿ ಶಂತನು

ಈ ಮೊದಲು ದಕ್ಷಿಣ ಆಫ್ರಿಕಾ ತಂಡವು ಟಾಸ್ ಗೆದ್ದು ಬಾಲಿಂಗ್ ಆಯ್ದುಕೊಂಡಿತ್ತು. ನಂತರದಲ್ಲಿ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಇಳಿದ ಭಾರತ ತಂಡವು 244 ರನ್‍ಗಳ ಸಾಧಾರಣ ಮೊತ್ತವನ್ನು ಕಲೆಹಾಕಿತು.

ಮಿಥಾಲಿ ರಾಜ್ ನೇತೃತ್ವದ ತಂಡವು ಪಂದ್ಯದ ಆರಂಭದಲ್ಲಿ ನಿಧಾನವಾಗಿ ಸಾಗಿತ್ತು. ನಂತರದಲ್ಲಿ ಯಾಸ್ತಿಕಾ ಭಾಟಿಯಾ 58 ರನ್ ಗಳಿಸಿದ್ದು, ಹರ್ಮನ್‍ಪ್ರೀತ್ ಕೌರ್ ಶತಕ ಗಳಿಸಿದರು. ಹರ್ಮನ್‍ಪ್ರೀತ್ 114 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ 103 ರನ್ ಗಳಿಸುವುದರೊಂದಿಗೆ ಭಾರತ ಒಟ್ಟು 240 ರನ್‍ಗಳ ಗಡಿ ದಾಟಿತು.

Share This Article
Leave a Comment

Leave a Reply

Your email address will not be published. Required fields are marked *