ಚಳಿ ಗಾಳಿಗೆ ದೇಹವನ್ನು ಬೆಚ್ಚಗಿಡುವಂತಹ ಸ್ಟೈಲೀಶ್ ಆಗಿರುವಂತಹ ಹೂಡಿಗಳು ಇಂದು ವಿಂಟರ್ ಫ್ಯಾಷನ್‌ಗೆ ಕಾಲಿಟ್ಟಿದ್ದು, ಕಾಲೇಜು ನಾರಿಮಣಿಯರ (Women) ಆಕರ್ಷಿಸತೊಡಗಿವೆ. ನೋಡಲು ಆಕರ್ಷಕವಾಗಿ ಬಿಂಬಿಸಿವೆ. ಹೌದು, ಈ ಬಾರಿಯ ವಿಂಟರ್ ಫ್ಯಾಷನ್‌ನಲ್ಲಿ ಎಂದಿನಂತೆ ಸ್ಟೈಲೀಶ್ ಲುಕ್ ನೀಡುವ ಹೂಡಿಗಳು (Hoodie) ಬಂದಿವೆ. ಈ ಜನರೇಷನ್‌ನವರಿಗೂ ಇಷ್ಟವಾಗುವಂತಹ ಕಲರ್ಸ್ ಹಾಗೂ ಡಿಸೈನ್‌ನಲ್ಲಿ ಪ್ರಿಂಟ್ಸ್‌ನಲ್ಲಿ ಬಿಡುಗಡೆಗೊಂಡಿವೆ.
Advertisement
ಬಹುತೇಕ ಫುಲ್ ಸ್ಲೀವ್ಸ್‌ನಲ್ಲಿ ಲಭ್ಯವಿರುವ ಇವು ಮೈಯನ್ನು ಬೆಚ್ಚಗಿಡುತ್ತವೆ. ಸಾದಾ, ಮಾನೋಕ್ರೋಮ್, ಸಾಲಿಡ್ ಶೇಡ್ಸ್, ಚೆಕ್ಸ್, ಗಿಂಗ್ನಂ, ಸ್ಟ್ರೈಪ್ಸ್ ಹಾಗೂ ವೈಬ್ರೆಂಟ್ ಕಲರ್ಸ್‌ನಲ್ಲಿ ಹೂಡಿಗಳು ಈ ಸೀಸನ್‌ಗೆ ಆಗಮಿಸಿವೆ. ಇದನ್ನೂ ಓದಿ:ಇಂದೇ ಜೈಲು, ಇಂದೇ ಜಾಮೀನು – ಅಲ್ಲು ಅರ್ಜುನ್‌ಗೆ ಬಿಗ್ ರಿಲೀಫ್
Advertisement
Advertisement
ಅಂದಹಾಗೆ, ಸಿನಿಮಾ ಸ್ಟಾರ್‌ಗಳು ಕೂಡ ಹೂಡಿ ಪ್ರೇಮಿಗಳು. ನೋಡಲು ಸ್ಟೈಲೀಶ್ ಲುಕ್ ನೀಡುವ ಕ್ರಾಪ್ಹೂಡಿ, ಸ್ಲಿವ್ಲೆಸ್ ಹೂಡಿಗಳನ್ನು ಹೆಚ್ಚು ಧರಿಸಿ, ಏರ್ಪೋರ್ಟ್ ಲುಕ್ ನೀಡುತ್ತಾರೆ. ಇನ್ನು, ಚಳಿಗೆ ಹೂಡಿಯಲ್ಲಿ ಜೊತೆಯಲ್ಲಿಯೇ ಅಟ್ಯಾಚ್ ಆದಂತಹ ಕ್ಯಾಪನ್ನು ತಲೆ ಮೇಲೆ ಧರಿಸಿ ಕೂಡ ಸ್ಟೈಲಿಂಗ್ ಮಾಡುವುದು ಇಂದು ಸಾಮಾನ್ಯವಾಗಿದೆ.
Advertisement
ಹೂಡಿಗಳು ಎಲ್ಲಾ ಔಟ್‌ಫಿಟ್‌ಗೂ ಮ್ಯಾಚ್ ಆಗುವುದಿಲ್ಲ. ಕ್ಯಾಶುವಲ್ ಅದರಲ್ಲೂ ಪ್ಯಾಂಟ್ ಹಾಗೂ ಸ್ಕರ್ಟ್ಗಳಿಗೆ ಇವನ್ನು ಮ್ಯಾಚ್ ಮಾಡಬೇಕು. ಇನ್ನು, ಉದ್ದವಿರುವ ಸ್ಲಿಮ್ ಹುಡುಗಿಯರಿಗೆ ಇವು ಪರ್ಫೆಕ್ಟ್ ಔಟ್‌ಫಿಟ್. ಇದನ್ನು ಯಾವುದೇ ಶೈಲಿಯ ವೆಸ್ಟರ್ನ್ ಔಟ್‌ಫಿಟ್‌ನೊಂದಿಗೆ ಧರಿಸಬಹುದು. ಪಲ್ಹಾಜೂ, ಕೇಪ್ರಿಸ್ ಜೊತೆಗೂ ಹೂಡಿ ಪರ್ಫೆಕ್ಟ್ ಸೂಟ್ ಆಗುತ್ತವೆ. ಆದರೆ, ಪ್ಯಾಂಟ್‌ಗಳ ಕಟ್ಸ್ ಹಾಗೂ ಸ್ಟಿಚ್ಚಿಂಗ್ ಈ ಹೂಡಿಗೆ ಮ್ಯಾಚ್ ಆಗಬೇಕು. ಹೂಡಿಗೆ ಚೆಕ್ಸ್ ಒಳಗೊಂಡ ಪ್ಯಾಂಟ್ ಧರಿಸಿದಲ್ಲಿ ಸ್ಟೈಲೀಶ್ ಆಗಿ ಕಾಣಿಸುವುದು. ಆಕ್ಸೆಸರೀಸ್ ಧರಿಸುವುದು ಬೇಡ.
ಹೂಡಿ ಧರಿಸಿ ಲೇಯರ್ ಲುಕ್ ನೀಡುವಾಗ ಆದಷ್ಟೂ ಕಂಫರ್ಟಬಲ್ ಹೇರ್ ಸ್ಟೈಲ್ ಮಾಡಿ. ಯಾಕೆಂದರೆ ಮೊದಲೇ ಬೆಚ್ಚಗಿನ ಉಡುಪು ಧರಿಸಿ ನಂತರ ಫ್ರೀ ಹೇರ್ ಸ್ಟೈಲ್ ಮಾಡಿದಲ್ಲಿ ಸೆಕೆಯಾಗಬಹುದು. ಹಾಗಾಗಿ ಹೈ ಪೋನಿ, ಫಿಶ್ಟೇಲ್, ಸೈಡ್ಪೋನಿ, ಲಾಂಗ್ ಸೈಡ್ ಚೋಟಿಯಂತಹ ಹೇರ್ ಸ್ಟೈಲ್‌ಗಳನ್ನು ಟ್ರೈ ಮಾಡಿ.
ಫ್ಯಾಷನ್ ಟಿಪ್ಸ್:
ಚಳಿಗಾಲದಲ್ಲಿ ಹೂಡಿ ಧರಿಸಿ ಸ್ಟೈಲೀಶ್ ಆಗಿ ಕಾಣಿಸುವವರಿಗೆ ಸಿಂಪಲ್ ಟಿಪ್ಸ್.
ಆದಷ್ಟು ಸಿಂಪಲ್ ಮೇಕೋವರ್‌ಗೆ ಆದ್ಯತೆ ನೀಡಿ.
ಲೈಟ್‌ವೇಟ್ ಹೂಡಿಗಳನ್ನು ಪ್ರಿಫರ್ ಮಾಡಿ.
ಹೂಡಿಗೆ ಸಾದಾ ಪ್ಯಾಂಟ್ ಅಥವಾ ಸ್ಕರ್ಟ್ಸ್ ಧರಿಸಿ. ಸಖತ್ ಆಗಿ ಕಾಣಿಸುವುದು.
ತೆಳ್ಳಗಿರುವವರು ಫರ್ ಹಾಗೂ ಫ್ರಿಂಝ್ ಹೂಡಿ ಸೆಲೆಕ್ಟ್ ಮಾಡಬಹುದು.
ವಿಂಟರ್ ಲುಕ್‌ಗಾಗಿ ಶೂ ಧರಿಸಿ.