ಚಳಿ ಮಳೆ ಶೀತಗಾಳಿಯಿಂದ ರಕ್ಷಣೆಗೆ ಹೊಸ ಲುಕ್‌ನ ಟ್ರೆಂಚ್ ಕೋಟ್ ಫ್ಯಾಷನ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಚಳಿಗಾಲದಲ್ಲಿ ಟ್ರೆಂಡಿಯಾಗುವ ಈ ಟ್ರೆಂಚ್ ಕೋಟ್‌ಗಳು ಇದೀಗ ಮಾರುಕಟ್ಟೆಗೆ ಕಾಲಿಟ್ಟಿದೆ. ಸೆಲೆಬ್ರೆಟಿಗಳನ್ನು ಮಾತ್ರವಲ್ಲ, ಸಾಮಾನ್ಯ ಹುಡುಗಿಯರನ್ನು ಆಕರ್ಷಿಸುತ್ತಿವೆ. ಅದರಲ್ಲೂ ಈ ಫ್ಯಾಷನ್ ನಾರಿಮಣಿಯರ ಗಮನ ಸೆಳೆದಿದೆ. ಇದನ್ನೂ ಓದಿ:ಬಾಕ್ಸಾಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆದ ‘ಪುಷ್ಪ 2’- 500 ಕೋಟಿ ಬಾಚಿದ ಅಲ್ಲು
ಏನಿದು ಟ್ರೆಂಚ್ ಕೋಟ್ ಫ್ಯಾಷನ್?
ಸಿಂಪಲ್ ಆಗಿ ಹೇಳಬೇಕೆಂದರೆ, ಧರಿಸುವ ಔಟ್‌ಫಿಟ್‌ಗಳ ಮೇಲೆ ಲೇಯರ್ ಲಾಂಗ್ ಡಬ್ಬಲ್ ಬಟನ್ ಅಥವಾ ಸಿಂಗಲ್ ಬಟನ್ ಡಿಸೈನ್ ಇರುವಂತಹ ಕೋಟ್ ಇದು. ಶೀತ ಪ್ರದೇಶ ರಾಷ್ಟ್ರಗಳಲ್ಲಿ ಅತಿ ಹೆಚ್ಚಾಗಿ ಧರಿಸಲಾಗುತ್ತದೆ. ಇತ್ತೀಚೆಗೆ ಭಾರತದ ಚಳಿಗಾಲದ ಹವಾಮಾನಕ್ಕೆ ಅನುಗುಣವಾಗಿ ಲೈಟ್‌ವೇಟ್ ಟ್ರೆಂಚ್ ಕೋಟ್‌ಗಳು ಆಗಮಿಸಿದ್ದು, ಫ್ಯಾಷನ್ ಪ್ರಿಯರ ಮನ ಗೆದ್ದಿದೆ.
ಎಲ್ಲಾ ಬಗೆಯ ಟ್ರೆಂಚ್ ಕೋಟ್‌ಗಳು ನೋಡಲು ಒಂದೇ ಬಗೆಯದ್ದಾಗಿ ಕಾಣುತ್ತವಾದರೂ ಸ್ಟಿಚ್ಚಿಂಗ್ ನಾನಾ ಶೈಲಿಯಲ್ಲಿರುತ್ತವೆ. ಸ್ಲಿಕ್ ಲುಕ್, ಫಾರ್ಮಲ್ ಬ್ಲೆಜರ್ ಸ್ಟೈಲ್‌ನಲ್ಲಿ ದೊರಕುತ್ತವೆ. ಮೊದಲೆಲ್ಲಾ ಹಿಲ್ ಸ್ಟೆಷನ್‌ಗಳಲ್ಲಿ ಮಾತ್ರ ಇವುಗಳ ಬಳಕೆ ಹೆಚ್ಚಾಗಿತ್ತು. ಬರಬರುತ್ತಾ ಸಿನಿಮಾ ತಾರೆಯರ ವಾಡ್ರೋಬ್ ಸೇರಿದ ನಂತರ ಸಾಮಾನ್ಯ ಮಹಿಳೆಯರ ಗಮನ ಸೆಳೆದವು. ಇದೀಗ ಏರ್‌ಪೋರ್ಟ್ ಲುಕ್‌ನಲ್ಲಿ ಇವು ಟ್ರೆಂಡಿಯಾಗಿವೆ.
ವೆಸ್ಟರ್ನ್ ಲುಕ್ ನೀಡುವ ಟ್ರೆಂಚ್ ಕೋಟ್‌ಗಳನ್ನು ನಾನಾ ಬಗೆಯಲ್ಲಿ ಲೇಯರ್ ಲುಕ್‌ಗೆ ಧರಿಸಬಹುದು. ಇವು ನೋಡಲು ಕ್ಲಾಸಿ ಲುಕ್ ನೀಡುವುದರೊಂದಿಗೆ ಎಂತಹವರನ್ನು ಆಕರ್ಷಕವಾಗಿ ಬಿಂಬಿಸುತ್ತವೆ.
ಫ್ಯಾಷನ್ ಟಿಪ್ಸ್:
ಲೈಟ್‌ವೇಟ್ ಟ್ರೆಂಚ್ ಕೋಟ್ ಆಯ್ಕೆ ಮಾಡಿ.
ಇವು ದೇಹವನ್ನು ಬೆಚ್ಚಗಿಡುವುದರಿಂದ ತೆಳುವಾದ ಇನ್ನರ್ ಟಾಪ್ ಧರಿಸುವುದು ಬೆಸ್ಟ್.
ಉದ್ದಗಿರುವವರಿಗೆ ಎಲ್ಲಾ ಬಗೆಯ ಟ್ರೆಂಚ್ ಕೋಟ್ ಸೂಟ್ ಆಗುತ್ತವೆ.
ವಿಂಟೆಂಜ್ ಬಟನ್‌ನವು ರಾಯಲ್ ಲುಕ್ ನೀಡುತ್ತವೆ.
ಸಾಲಿಡ್ ಕಲರ್‌ನವನ್ನು ಸೆಲೆಕ್ಟ್ ಮಾಡಿ.
ಫಿಟ್ಟಿಂಗ್ ಟ್ರೆಂಚ್ ಕೋಟ್ ಧರಿಸಿ.