ಬೆಂಗಳೂರು: ಮಹಿಳಾ ದಿನಾಚರಣೆಯ ವಿಶೇಷವಾಗಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ತಮ್ಮ ಮಡದಿ ಅಶ್ವಿನಿಯವರಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ.
ಮಡದಿಯ ಬಹುದಿನಗಳ ಇಷ್ಟದ ಲಾಂಬೋರ್ಗಿನಿ ಕಾರನ್ನ ಉಡುಗೊರೆಯಾಗಿ ನೀಡಿದ್ದಾರೆ. ಐದು ಕೋಟಿಗೂ ಮೀರಿದ ಐಶಾರಾಮಿ ಕಾರ್ ಇದಾಗಿದ್ದು ಈಗಾಗಲೇ ದರ್ಶನ್ ಹಾಗೂ ನಿಖಿಲ್ ಕುಮಾರಸ್ವಾಮಿ ಲ್ಯಾಂಬೋರ್ಗಿನಿ ಕಾರಿನ ಒಡೆಯರಾಗಿದ್ದಾರೆ.
ಪುನೀತ್ ಮನೆಯಲ್ಲಿ ಸದ್ಯ ರೋಲ್ಸ್ ರಾಯ್ ಸೇರಿದಂತೆ ಅನೇಕ ಕಾರ್‍ಗಳ ಕಲೆಕ್ಷನ್ ಇದೆ. ಇದೀಗ ಬಾಳಿಗೆ ಬೆಳಕಾಗಿ ಬಂದ ಧರ್ಮಪತ್ನಿಗೆ ಮಹಿಳಾ ದಿನಾಚರಣೆಯ ದಿನವೇ ಇಷ್ಟದ ಉಡುಗೊರೆ ಕೊಡುವ ಮೂಲಕ ಮೂಲಕ ಮಹಿಳೆಯರಿಗೆ ಗೌರವ ಸೂಚಿಸಿದ್ದಾರೆ. ನಟಸಾರ್ವಭೌಮ ಸಿನಿಮಾ ಯಶಸ್ಸಿನ ಬಳಿಕ ಈಗ ಪುನೀತ್ ರಾಜ್ ಕುಮಾರ್ ಮನೆಗೆ ಹೊಸ ಸದಸ್ಯನ ಆಗಮನವಾಗಿದೆ.
ಇತ್ತ ನಗರ ಹಲವು ಕಡೆ ಮಹಿಳಾ ದಿನಾಚರಣೆ ಆವರಿಸಲಾಯಿತು. ಎಲ್ಲೆಲ್ಲೂ ಖುಷಿ, ಹರ್ಷ. ಎಲ್ಲರ ಮುಖದಲ್ಲೂ ನಗು, ಸಂತಸದೊಂದಿಗೆ ತಮ್ಮ ಬ್ಯೂಸಿ ಕೆಲಸದ ನಡುವೆಯೂ ಸಂಭ್ರಮಾಚರಣೆ ಮಾಡಲು ಭರ್ಜರಿ ಕೇಕ್ ಕತ್ತರಿಸಿದರು. ಸಾಮುದ್ರಿಕಾ ಡಿಸೈನರ್ ಸ್ಟುಡಿಯೋ ವತಿಯಿಂದ ನಡೆದ ಮಹಿಳಾ ದಿನಾಚರಣೆಯಲ್ಲಿ ನಟಿ ವೈಷ್ಣವಿ ಹಾಗೂ ಸೋನಿಯಾ ಗೌಡ ಭಾಗವಹಿಸಿದ್ರು. ಈ ವೇಳೆ ವುಮೇನ್ಸ್ ಎಂಪವರ್ ಮೆಂಟ್ ಬಗ್ಗೆ ಜಾಗೃತಿ ಮೂಡಿಸುವ ಅಲ್ಬಮ್ ಬಿಡುಗಡೆ ಗೊಳಿಸಲಾಯಿತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv