ಹಿಂದಿನಕಾಲದಲ್ಲಿ ಹೆಣ್ಣು ಎಂದರೆ ಆಕೆ ಮನೆಗೆಲಸಕ್ಕೆ ಮಾತ್ರ ಸೀಮಿತ ಎಂದು ಹೇಳುತ್ತಿದ್ದವರಿಗೆ ಇಂದು ಮಹಿಳೆಯರು ಯಾರಿಗೂ, ಯಾವುದಕ್ಕೂ ಕಮ್ಮಿ ಇಲ್ಲ ಎಂದು ತೋರಿಸಿಕೊಡುತ್ತಿದ್ದಾರೆ. ಹೆಣ್ಣು ಅಬಲೆಯಲ್ಲ ಆಕೆ ಸಬಲೆ ಎಂಬ ಮಾತಿಗೆ ಉದಾಹರಣೆಯಂತೆ ಜಗತ್ತಿನ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡು ಮುಂದುವರೆಯುತ್ತಿದ್ದಾರೆ. ರಾಜಕೀಯವಾಗಲಿ, ಕ್ರೀಡೆಯಾಗಲಿ, ಶಿಕ್ಷಣವಾಗಲಿ ಪ್ರತಿಯೊಂದರಲ್ಲೂ ಮಹಿಳೆಯರು ತಮ್ಮ ಚಾಪನ್ನು ಮೂಡಿಸಿದ್ದಾರೆ.
ಪತ್ರಿವರ್ಷ ಮಾರ್ಚ್ 8ನ್ನು ಮಹಿಳಾ ದಿನವಾಗಿ ಆಚರಿಸಲಾಗುತ್ತದೆ. ಅಂದು ಹೆಣ್ಣುಮಕ್ಕಳ ಸಾಧನೆಯನ್ನು ನೆನೆಯುವ ದಿನ. ಹಲವಾರು ಸಮಸ್ಯೆಗಳನ್ನು ಮೆಟ್ಟಿ ನಿಂತು ಮಹಿಳೆಯರು ಬಹುತೇಕ ರಂಗದಲ್ಲಿ ತಮ್ಮನ್ನು ತಾನು ಗುರುತಿಸಿಕೊಂಡಿದ್ದಾರೆ. ದೌರ್ಜನ್ಯ, ದಬ್ಬಾಳಿಕೆ, ಹಿಂಸೆಯಂತಹ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ಹಲವಾರು ಕ್ಷೇತ್ರಗಳಲ್ಲಿ ಪುರುಷರಷ್ಟೇ ಸರಿಸಮಾನವಾಗಿ ಮುಂದುವರಿದಿದ್ದಾರೆ. ಕ್ರೀಡೆಯಲ್ಲಿ, ಸೈನ್ಯದಲ್ಲಿ, ಬಾಹ್ಯಾಕಾಶದಲ್ಲಿ, ಯುದ್ಧ ವಿಮಾನಗಳಲ್ಲಿ ಮಹಿಳೆಯರು ಮಹತ್ತರ ಸಾಧನೆ ಮಾಡಿ, ಯಾವ ಪುರುಷರಿಗೂ ತಾವು ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ.
- Advertisement -
- Advertisement -
ಆಕ್ಸಲರೇಟ್ ಆಕ್ಷನ್ (Accelerate Action)
ಈ ಬಾರಿಯ ಮಹಿಳೆಯರ ದಿನವನ್ನು ʻಆಕ್ಸಲರೇಟ್ ಆಕ್ಷನ್ʼಥೀಮ್‌ನಲ್ಲಿ ಆಚರಿಸಲಾಗುತ್ತದೆ. ಮನ್ನುಗ್ಗು, ಧೈರ್ಯದಿಂದ ಮಾತನಾಡು, ಸಮಾನತೆಗಾಗಿ ಹೋರಾಡು ಎಂದು ಮಹಿಳೆಯರಿಗೆ ಅವರ ನಿಲುವುಗಳನ್ನು ತೆಗೆದುಕೊಳ್ಳಲು ಹುರಿದುಂಬಿಸಲಾಗುತ್ತದೆ.
- Advertisement -
ಮಹಿಳಾ ದಿನಾಚರಣೆಯನ್ನು ಕಳೆದ ಒಂದು ಶತಕದಿಂದಲೂ ಆಚರಿಸಲಾಗುತ್ತಿದೆ. 1911ರಲ್ಲಿ ಡೆನ್ಮಾರ್ಕ್, ಆಸ್ಷ್ರೇಲಿಯಾ, ಜಮರ್ನಿ, ಸ್ವಿಜರ್‌ಲ್ಯಾಂಡ್ ದೇಶಗಳಲ್ಲಿ ಜನರು ಒಂದು ಕಡೆ ಸೇರುವ ಮೂಲಕ ಮಹಿಳಾ ದಿನಾಚರಣೆಯನ್ನು ಆಚರಿಸಲು ಆರಂಭಿಸಿದರು. ನಂತರ ಅಮೆರಿಕ, ಬ್ರಿಟನ್‌ಗಳು ಸೇರಿದಂತೆ ಹಲವು ದೇಶಗಳಲ್ಲಿನ ಮಹಿಳೆಯರನ್ನು ಗೌರವಿಸುವ ಮೂಲಕ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿತ್ತು.
- Advertisement -
ಅಂತರಾಷ್ಟ್ರೀಯ ಮಹಿಳೆಯರ ದಿನವನ್ನು ಪ್ರಥಮ ಬಾರಿಗೆ ಕಾರ್ಮಿಕ ಚಳುವಳಿಯ ಮೂಲಕ ಉತ್ತರ ಅಮೆರಿಕ ಮತ್ತು ಯೂರೋಪ್ ದೇಶಗಳಲ್ಲಿ ಪ್ರಾರಂಭಿಸಲಾಯಿತು. ಮಹಿಳಾ ದಿನಾಚರಣೆ ಮೂಲಕ ಲಿಂಗ ಸಮಾನತೆ ರೂಪಿಸುವಲ್ಲಿ ಪ್ರತಿಯೊಬ್ಬರ ಪಾತ್ರವಿದೆ ಎಂಬ ಅಂಶವನ್ನು ಸಾರಲು ಈ ದಿನವನ್ನು ಆಚರಿಸಲಾಯಿತು. ಅಲ್ಲದೇ ದೇಶಕ್ಕೆ, ಪ್ರಪಂಚಕ್ಕೆ ಮಹಿಳಾ ಸಾಧಕರ ಕೊಡುಗೆಗಳನ್ನು ನೆನೆದು ಸಾರುವ ದಿನವಾಗಿದೆ. 18 ಮತ್ತು 19 ನೇ ಶತಮಾನದಲ್ಲಿ ಹಲವು ಮಹಿಳೆಯರು ಲಿಂಗ ಸಮಾನತೆಗಾಗಿ ಹೋರಾಟ ನಡೆಸಿದ್ದಾರೆ. ಮತದಾನ, ಸಮಾನ ಕೆಲಸ, ಸಮಾನ ವೇತನಕ್ಕಾಗಿ ಹೋರಾಟವನ್ನು ನಡೆಸಿದ್ದರು.
ಭಾರತದಲ್ಲೇ ಕಲ್ಪನಾ ಚಾವ್ಲಾ, ಕಿರಣ್ ಬೇಡಿ, ಮೇರಿ ಕೋಮ್, ಸಾಲುಮರದ ತಿಮ್ಮಕ್ಕ, ಇಂದಿರಾಗಾಂಧಿ, ಸೈನಾ ನೆಹ್ವಾಲ್, ಸುಧಾಮೂರ್ತಿ ಹಲವಾರು ಮಹಿಳೆಯರು ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ. ಈ ಸಾಧಕರ ಸಾಲಿಗೆ ಇನ್ನಷ್ಟು ಮಹಿಳೆಯರು ಸೇರಬೇಕು. ಹೆಣ್ಣು ಯಾವುದಕ್ಕೂ ಕಡಿಮೆಯಿಲ್ಲ ಎಂದು ಇಡೀ ಜಗತ್ತಿಗೆ ಒತ್ತಿ ಒತ್ತಿ ಹೇಳಬೇಕು.
ಹೆಣ್ಣುಮಕ್ಕಳು ಯಾರಿಗೂ ಕಮ್ಮಿ ಇಲ್ಲ ಎಂದೆಲ್ಲಾ ಹೇಳಿದರೂ ಸಹ ಆಕೆಯ ಮೇಲೆ ದೌರ್ಜನ್ಯ, ಅತ್ಯಾಚಾರ, ಹೀಯಾಳಿಸುವುದು, ಕಿರುಕುಳ ಪ್ರಕರಣಗಳಂತೂ ದೇಶದಲ್ಲಿ ಕೇಳಿ ಬರುತ್ತಲೇ ಇದೆ. ಹೆಣ್ಣನ್ನೂ ದೇವತೆಯೆಂದು ಪೂಜಿಸುವ ನಮ್ಮ ದೇಶದಲ್ಲೇ ಆಕೆಯನ್ನು ಅಮಾನುಷವಾಗಿ ನಡೆಸಿಕೊಂಡಿರುವ ಹಲವಾರು ಘಟನೆಗಳಿವೆ. ಮಹಿಳಾ ದಿನಾಚರಣೆ ಕೇವಲ ಆಚರಣೆ ಮಾತ್ರ ಆಗಬಾರದು ಆಕೆಗೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ, ಗೌರವ, ಸಮಾನತೆ, ಸ್ವಾತಂತ್ರ್ಯ ಎಲ್ಲವು ಸಿಗುವಂತಾಗಬೇಕು.
ಅಂತರರಾಷ್ಟ್ರೀಯ ಮಹಿಳಾ ದಿನದ ಹಿನ್ನಲೆ ಗುಜರಾತ್‌ನ ನವಸಾರಿ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುತ್ತಿದ್ದು ಈ ಕಾರ್ಯಕ್ರಮದ ಭದ್ರತಾ ವ್ಯವಸ್ಥೆಯನ್ನು ಸಂಪೂರ್ಣ ಮಹಿಳಾ ಪೊಲೀಸ್ ಸಿಬ್ಬಂದಿಯೇ ನಿರ್ವಹಿಸುತ್ತಿರುವುದು ಈ ಬಾರಿಯ ಮಹಿಳಾ ದಿನಾಚರಣೆಯ ವಿಶೇಷವಾಗಿದೆ.